ಮಾಘ ಮಾಸದ ಕೃಷ್ಣ ಪಕ್ಷ ಮಾರ್ಚ್ ತಿಂಗಳ ದಿನಾಂಕ 8 ರಂದು ಇಡೀ ಜಗತ್ತಿನಲ್ಲಿ ಮಹಾ ಶಿವರಾತ್ರಿ : ಆಚರಿಸಲ್ಪಡುತ್ತದೆ.
.ವೇದ ಶಾಸ್ತ್ರ,ಪುರಾಣ ಆಗಮಗಳು ಮಹಾ ದೇವನಾದ ಶಿವ ಶಂಕರನನ್ನು “ರುದ್ರ” ಎಂಬ ಎರಡಕ್ಷರಗಳಲ್ಲಿ ಸಂಭೋಧಿಸಿ ಕೃತಾರ್ಥವಾಗಿದೆ .ರುದ್ರ ಜಗತ್ತಿನ ಸಕಲ ದು:ಖಗಳ ಪರಿಹಾರಕ .ಪಂಚ ಭೂತಗಳ ಕಾರ್ಯ ವೈಖರಿಯ ಹಿಂದಿನ ಪ್ರಚೋದಕ .ಪಾಪ,ರೋಗ,ದಾರಿದ್ರ್ಯ ,ಸಾಂಸಾರಿಕ-ಸಾಮಾಜಿಕ ಸಂಕಟಗಳ ನಿವಾರಕ.ಸಕಲ ಗುಣಗಳ ಆಕರ. ನಿರ್ಗುಣ ,ನಿರಾಕಾರ, ಲಿಂಗರೂಪದಲ್ಲಿ ವೈವಿದ್ಯಮಯ ವಿಧಾನಗಳಲ್ಲಿ ಅರ್ಚಿತಗೊಳ್ಳುವ ಪರಮಶಿವನನ್ನುನಾನಾ ಮಂತ್ರ ಸೂಕ್ತಗಳಿಂದ ಸ್ತುತಿಸಲಾಗಿದೆ .ನಮಕ-ಚಮಕ-ಪಠಣ –ಅಭಿಷೇಕಗಳ ಮೂಲಕ ಅರ್ಚನ ಹಾಗೂ ಯಜ್ನ ಯಾಜನಗಳ ಮೂಲಕ ಲೌಕಿಕ –ಪಾರಲೌಕಿಕ ಅಭೀಷ್ಟಗಳ ಈಡೇರಿಕೆ ಸಾಧ್ಯವೆಂಬುವುದು ರುದ್ರಾದ್ಯಾಯದ ಹಿಂದಿನ ಮೂಲ ಆಶಯವಾಗಿದೆ .ಶಿವರಾತ್ರಿಯ ಅವಿಭಾಜ್ಯ ವಿಧಿಗಳೆಂದರೆ ಶತರುದ್ರೀಯ –ರುದ್ರಾಭಿಷೇಕ ,ರುದ್ರ ಹವನ,ರುದ್ರ ಪಾರಾಯಣ ,ಶುದ್ಧ ಉಪವಾಸಗಳು ಆಗಿರುತ್ತವೆ. ವೇದ ವಾಕ್ ಮಯದಲ್ಲಿ ‘ನಮಕ ಚಮಕ,ಮತ್ತು ಪುರುಷಸೂಕ್ತ ಬಲ್ಲವ ಮಹಾ ದೇವನಿಗೆ ಸಮಾನ’ಎಂದು ಶಿವ ಸಂಕಲ್ಪದಲ್ಲಿ ಹೇಳಿದೆ .
ನಿತ್ಯವೂ ಮಾಡುವ ರುದ್ರ ಪಾರಾಯಣದಿಂದ ಸಕಲ ಪಾಪಗಳು ಭಸ್ಮವಾಗುತ್ತದೆ .ನಾವು ನಿತ್ಯವೂ ಅನುಭವಿಸುವ ಅನೇಕ ಕಷ್ಟಗಳಿಗೆ ನಾವು ಮಾಡಿರುವ ಪಾಪವೇ ಕಾರಣ ,ಇದಕ್ಕೆ ಪರಿಹಾರವೇ ರುದ್ರ ಪಠಣವಾಗಿದೆ .
ನಮಕ ಅಧ್ಯಾಯದಲ್ಲಿ ರುದ್ರನ ವಿಶ್ವರೂಪ ದರ್ಶನವಿದೆ .ಸಮಸ್ತ ಚರಾಚರಗಳಲ್ಲಿ ರುದ್ರನನ್ನು ಕಾಣಲಾಗಿದೆ .ಅವನು ನಿರಾಕಾರನೂ ಹೌದು ಸಾಕಾರನೂ ಹೌದು .ಅವನ ಶಕ್ತಿ ,ರೂಪ,ವೈವಿದ್ಯ ವರ್ಣನೆಗೆ ನಿಲುಕದ್ದು ಆಗಿರುತ್ತದೆ .ಜಪ –ಹೋಮ-ಅರ್ಚನ ಮತ್ತು ಅಭಿಷೇಕ ಎಂದು ನಾಲ್ಕು ವಿಧಗಳಿವೆ .ರುದ್ರಾಧ್ಯಾಯದ ಪಾರಾಯಣವೇ ಜಪ ,ಪಾರಾಯಣ ಮಾಡುತ್ತಾ ತ್ರಿದಳ ಬಿಲ್ವ ಪತ್ರೆ ,ತುಂಬೆ ಹೂವುಗಳಿಂದ ಅರ್ಚಿಸುವುದೇ ಅರ್ಚನೆ .ಗುರು ಮುಖೇನ ಕಲಿತಿರಬೇಕು .ಮನಸ್ಸು ದೇವರಲ್ಲಿಯೇ ಇರಬೇಕು .ಪಂಚಾಮೃತ ಅಭಿಷೇಕ [ಹಾಲು ,ಸೀಯಾಳ ,ಜೇನುತುಪ್ಪ ,ಬಾಳೆ ಹಣ್ಣು ,ಸಕ್ಕರೆ ]ಶುದ್ಧ ನೀರು ಇವುಗಳಿಂದ ಅಭಿಷೇಕ ಮಾಡುವುದೇ ರುದ್ರಾಭಿಷೇಕ . ಕೆಲವು ಕಡೆ ರುದ್ರ ಹೋಮವನ್ನು ಮಾಡುತ್ತಾರೆ ರುದ್ರ ಯಾಗ ಮಹಾರುದ್ರಯಾಗ ,ಅತಿರುದ್ರ ಯಾಗ ಹೀಗೆ ವಿವಿಧತೆಯನ್ನು ಕಾಣಬಹುದು ಶೃಂಗೇರಿ ಕ್ಷೇತ್ರವು ವಿಶ್ವದಲ್ಲಿಯೇ ದಾಖಲೆ ಮಟ್ಟದಲ್ಲಿ ಅತಿ ಹೆಚ್ಚು ಅತಿರುದ್ರ ಯಾಗ ಮಾಡಿದ ಕ್ಷೇತ್ರವಾಗಿದೆ.
ಶಿವರಾತ್ರಿಯಂದು –ಶಿವ ಧ್ಯಾನ,ಜಾಗರಣೆ, ಉಪವಾಸ ಅರ್ಚನೆ,ಅಭಿಷೇಕ ಮತ್ತು ಇಡೀ ರಾತ್ರಿ ಶಿವ ಸಂಕೀರ್ತನೆ ಶ್ರೇಷ್ಟವಾಗಿದೆ ನಾಲ್ಕು ಯಾಮಗಳಲ್ಲಿಯೂ ಶಿವಾಲಯಗಳಲ್ಲಿ ರುದ್ರಾಭಿಷೇಕ ನಡೆಯುತ್ತದೆ .
ಶಿವಾರಾಧನೆಗೆ ಐಶ್ವರ್ಯಾ,ಆಡಂಭರ ದ ಅಗತ್ಯವಿಲ್ಲ ಬಿಲ್ವ ಪತ್ರೆ, ತುಂಬೆಹೂ ಶುದ್ಧೋಧಕ ಇದ್ದರೆ ಸಾಕು ,ಶಿವರಾತ್ರಿಯಂದು ಶಿವಾರಾಧನೆ ಮಾಡಿದ ನರನೂ ಹರನಾದಾನು .ದೇಶದ ಮೂಲೆ ಮೂಲೆಗಳಲ್ಲಿ ಇರುವ ಸಾವಿರ ಸಾವಿರ ಶಿವಾಲಯಗಳಲ್ಲಿ ಶಿವಾರಾಧನೆ ನಡೆಯುತ್ತದೆ .ಆತ ವಿದ್ಯೆಗೆ ಗುರು-ಜಗದ್ಗುರು ಅನವರತ-ಮಂಗಳಮೂರ್ತಿ,ಕಲ್ಯಾಣಮಯ .ಆತನ ಉಪಾಸನೆ ಮಾತ್ರದಿಂದ ನಾವು ಪಾಪಮುಕ್ತರಾಗುತ್ತೇವೆ .”ಓಂ ನಮೋ ಭಗವತೇ ರುದ್ರಾಯ”ಶ್ರೀ ರುದ್ರಾಧ್ಯಾಯ ಆರಂಭವಾಗುವುದೇ ಹೀಗೆ .ರುದ್ರ ಎಂದರೆ ದುಖನಾಶ ಮಾಡುವವನು ಎಂದು ಅರ್ಥ’ರುತ್ ದ್ರಾವಯತೀತಿ ಇತಿ ರುದ್ರ: ಭವ ಬಂಧನವನ್ನು ಮುಕ್ತಿಗೊಳಿಸಿ ಮೋಕ್ಷ ಕೊಡುವವನೇ ರುದ್ರ “ಲಿಂಗ ಇಲ್ಲಿ ಸಂಕೇತ ಮಾತ್ರ .ಅಖಂಡ ಸ್ವರೂಪ ಚಿಂತನೆಯ ಬಿಂಧು .ಸಗುಣೋಪಾಸನೆಯಿಂದ ನಿರ್ಗುಣೋಪಾಸನೆಯತ್ತ ಸಾಗು ಎಂಬ ಭಾವನೆ ಇಲ್ಲಿದೆ .ಶಿವನ ದ್ವಾದಶ ಜ್ಯೋತಿರ್ಲಿಂಗಗಳೆಂದರೆ –ಓಂಕಾರೇಶ್ವರ ,ಕೇದಾರನಾಥ ,ಘೃಶ್ಣೇಶ್ವರ ,ತ್ರ್ಯಂಬಕೇಶ್ವರ ,ನಾಗೇಶ್ವರ ,ಮಲ್ಲಿಕಾರ್ಜುನ ,ಭೀಮ ಶಂಕರ ,ಮಹಾಕಾಲೇಶ್ವರ ,ರಾಮೇಶ್ವರ ,ವಿಶ್ವೇಶ್ವರ ,ವೈದ್ಯನಾಥ ,ಸೋಮನಾಥ ಆಗಿರುತ್ತದೆ .
ಜಗತ್ತಿನ ಅತ್ಯಂತ ಪ್ರಾಚೀನ ಸಿಂಧೂ ನಾಗರಿಕತೆಯಲ್ಲಿ ಶಿವಾರಾಧನೆ ಸತತ ನಡೆದಿತ್ತು ಶಿವನ ಶಿಲ್ಪವೂ ಅದೇ ನಾಗರಿಕತೆ ಕಾಲದ್ದು ಲಭ್ಯವಾಗಿದೆ .ಹರಪ್ಪ-ಮೊಹೆಂಜೆದಾರೋ ಸಂಸ್ಕೃತಿ ಯಲ್ಲೂ ಶಿವ ಪೂಜೆಗೆ ಪ್ರಾಧಾನ್ಯತೆ ಇದ್ದದ್ದನ್ನು ನಾವು ನೋಡಬಹುದು .ಅಶೋಕ ಮಹಾರಾಜನ ಕಾಲದಲ್ಲಿ ಶಾತವಾಹನ,ಕದಂಬ ,ಬಾದಾಮಿ ಚಾಲುಕ್ಯರು ರಾಷ್ಟ್ರ ಕೂಟರು ಚೋಳರು ಕಲ್ಯಾಣ ಚಾಲುಕ್ಯರು ಇನ್ನೂ ಅನೇಕ ಮಹಾರಾಜರುಗಳ ಕಾಲದಲ್ಲೂ ಶಿವಾರಾಧನೆ ಕಂಡು ಬರುತ್ತದೆ .ಭಾರತ ಮಾತ್ರವಲ್ಲದೆ ಅನೇಕ ಹೊರ ದೇಶಗಳಲ್ಲಿ ಕೂಡಾ ಶಿವಾರಾಧನೆಯ ಕುರುಹು ನಮಗೆ ಕಂಡು ಬಂದಿದೆ .
ಶಿವ ಶಕ್ತಿ ಅತ್ಯತ ಪ್ರಾಚೀನವಾದದ್ದು . ಜಾತಿ-ಮತ ಭೇಧವಿಲ್ಲದೆ ಎಲ್ಲರೂ ಆರಾಧನೆ ಮಾಡಿರುವ ಶಕ್ತಿಯಾಗಿದೆ . ಯಥಾ ಶಕ್ತಿ –ಎಲ್ಲರೂ ಈ ಒಂದು ದಿನವನ್ನು ಭಕ್ತಿಯಿಂದ ಆಚರಿಸಿ ಶಿವನಲ್ಲಿ ನಮ್ಮ ಚಂಚಲವಾದ ಮನಸ್ಸನ್ನು ಒಪ್ಪಿಸಿ ಕೊಂಡು ಕೃತಾರ್ಥರಾಗೋಣ .” ಉಳ್ಳವರು ಶಿವಾಲಯವ ಕಟ್ಟುವರು ,ನಾನು ಬಡವನಯ್ಯಾ ,ನನ್ನ ಕಾಲೇ ಕಂಬ ಶರೀರವೇ ದೇಗುಲ ,ಶಿರವೇ ಹೊನ್ನ ಕಲಶವಯ್ಯಾ”ಇಲ್ಲಿ ಭಕ್ತಿ ಮುಖ್ಯ ,ಆಡಂಬರ ಬೇಡ . ಓಂ ನಮ: ಶಿವಾಯ “







































