[t4b-ticker]

ಶಿರ್ತಾಡಿ-ವಾಲ್ಪಾಡಿ ಅರ್ಜುನಾಪುರ ಶ್ರೀಕ್ಷೇತ್ರದ ಸನ್ನಿಧಾನದಲ್ಲಿ ನಗದು ಪತ್ತೆ

Picture of RB NEWS

RB NEWS

Bureau Report

ಪ್ರಾಮಾಣಿಕತೆ ಮೆರೆದ ಆರ್.ಬಿ.ನ್ಯೂಸ್ ಮುಖ್ಯಸ್ಥ ಆರ್.ಬಿ.ಜಗದೀಶ್

ಮೂಡುಬಿದಿರೆ: ಶಿರ್ತಾಡಿ- ವಾಲ್ಪಾಡಿಯ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ಭಕ್ತರೊಬ್ಬರಿಗೆ ₹12,010 ಸಿಕ್ಕಿದ್ದು, ಅದನ್ನು ಶ್ರೀ ಕ್ಷೇತ್ರದ ಅರ್ಚಕರಿಗೊಪ್ಪಿಸಿದ ಪ್ರಾಮಾಣಿಕ ಪ್ರಯತ್ನ ನಡೆದಿದೆ.
ಆರ್.ಬಿ.ನ್ಯೂಸ್ ಮುಖ್ಯಸ್ಥ ಆರ್.ಬಿ.ಜಗದೀಶ್ ಹಾಗೂ ಪತ್ರಿಭಾ.ಎಂ ಇವರು ಫೆ.29 ಗುರುವಾರ ಬೆಳಿಗ್ಗೆ 8.30ರ ವೇಳೆಗೆ ಶಿರ್ತಾಡಿ- ವಾಲ್ಪಾಡಿಯ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದ ವೇಳೆಗೆ ಪ್ರಮುಖ ಮೆಟ್ಟಲಿನಲ್ಲಿ ನೋಟು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದನ್ನು ಗಮನಿಸಿದ್ದರು.

ಇತ್ತೀಚೆಗಷ್ಟೇ ಶ್ರೀ ಕ್ಷೇತ್ರದ ಪುನರ್ ನಿರ್ಮಾಣ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿದ್ದು, ದೇವಸ್ಥಾನಕ್ಕೆ ಅಗಮಿಸಲು ಹಾಗೂ ದೇವಸ್ಥಾನದಿಂದ ನಿಗಮಿಸಲು ಪ್ರತ್ಯೇಕ ವಾದ ದಾರಿ ವ್ಯವಸ್ಥೆ ಮಾಡಲಾಗಿದ್ದು, ನಿರ್ಗಮಿಸುವ ಹಾದಿಯ ಮೆಟ್ಟಲಿನಲ್ಲಿ ನಗದು ಬಿದ್ದುಕೊಂಡಿತ್ತು.

ಬಿದ್ದುಕೊಂಡಿದ್ದ ನಗದನ್ನು ಒಟ್ಟು ಸೇರಿಸಿ ಶ್ರೀ ಕ್ಷೇತ್ರದ ಅರ್ಚಕ ಸುದರ್ಶನ ಭಟ್ ಅವರಿಗೆ ಒಪ್ಪಿಸಲಾಗಿದೆ. ಒಟ್ಟು 12,010 ಮೊತ್ತ ಇತ್ತು.

ನಗದು ಕಳಕೊಂಡವರು ಶ್ರೀ ಕ್ಷೇತ್ರದ ಅರ್ಚಕ ಸುದರ್ಶನ್ ಭಟ್ ಅವರನ್ನು ಸಂಪರ್ಕಿಸಬದುದಾಗಿದೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top