“ರಾಹುಲ್ ಗಾಂಧಿಯ ಫೋಟೋಕ್ಕೆ ಮಾಲಾರ್ಪಣೆ” :
ವಿಕೃತ ರಾಜಕೀಯ ತೀಟೆ ತೀರಿಸಿದ ಯುವಕನ ವಿರುದ್ಧ ಪ್ರಕರಣ ದಾಖಲೆ
ಕಾರ್ಕಳ : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ , ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಪೋಟೋಕ್ಕೆ ಮಾಲಾರ್ಪಣೆಗೈದು, ಊದುಬತ್ತಿ ಹಚ್ಚಿ ಇಟ್ಟ ಪೋಟೋವನ್ನು ಫೇಸ್ ಬುಕಿನಲ್ಲಿ ಬಿಡುಗಡೆಗೊಳಿಸಿ ವಿಕೃತ ರಾಜಕೀಯ ತೀಟೆ ತಿರಿಸಿದ ವಿಘ್ನು ಸಂತೋಷಿಯೊಬ್ಬನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಂತ್ ಬಾಳಿಗ ಎಂಬಾತ ಪ್ರಕರಣ ಆರೋಪಿಯಾಗಿದ್ದಾನೆ. ಮೌಸಮಿ ಅಫಿಷಿಯಲ್ ಎಂಬ ಪೇಜ್ನಲ್ಲಿ ಪೋಸ್ಟ್ ಮಾಡಿರುವುದನ್ನು ಸುಮಂತ್ ಬಾಳಿಗ ಎಂಬಾತನು ರಾಜಕೀಯ ವೈಮನಸ್ಸಿನಿಂದ ಶೇರ್ ಮಾಡಿರುತ್ತಾನೆ.
ಸುಮಂತ್ ಬಾಳಿಗ ರಾಜಕೀಯ ವೈಷಮ್ಯದಿಂದ ಮೌಸಮಿ ಅಫಿಷಿಯಲ್ ಎಂಬ ಪೇಜ್ನಲ್ಲಿ ಇರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಎರಡು ರಾಜಕೀಯ ಪಕ್ಷದ ಮುಖಂಡರ ಸಮುದಾಯದ ನಡುವೆ ವೈರತ್ವವನ್ನು ಬೆಳಸಿ ದ್ವೇಷ ಭಾವನೆ ಹರಡುವ ಉದ್ದೇಶದಿಂದ ಫೋಟೋವನ್ನು ಷೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುತ್ತಾನೆ. ಅದರಿಂದ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸುಹಾಸ್ ಕಾವ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರಿ ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



































