ದೇವರನಾಡಿನಲ್ಲಿ ಖಾತೆ ತೆರೆದ ಬಿಜೆಪಿ
ತಿರುವನಂತಪುರಂ: ದೇವರನಾಡು ಎಂದೇ ಪ್ರಸಿದ್ಧಿ ಹೊಂದಿರುವ ಕೇರಳದ ತ್ರಿಶೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ಖಾತೆ ತೆರೆದಿದೆ.

ಮಲಯಾಳಂ ಹೆಸರಾಂತ ಚಿತ್ರ ನಟ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಅವರು ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ.
ತ್ರಿಶೂರ್ನಲ್ಲಿ ಸಿಪಿಐನಿಂದ ಮಾಜಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಕಣದಲ್ಲಿದ್ದರು. ಮೊದಲ ಸುತ್ತಿನಿಂದಲೇ ಸ್ಪಷ್ಟ ಮುನ್ನಡೆ ಸಾಧಿಸಿದ್ದ ಸುರೇಶ್ ಗೋಪಿ, ಇಬ್ಬರು ನಾಯಕರನ್ನು ಹಿಂದಿಕ್ಕಿ ಜಯ ಗಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ನಿಂದ ಸ್ಪರ್ಧಿಸಿದ್ದ ಸುರೇಶ್ ಗೋಪಿ ಕಾಂಗ್ರೆಸ್ ಅಭ್ಯರ್ಥಿ ಟಿ.ಎನ್. ಪ್ರತಾಪನ್ ಎದುರು ಸೋಲನಭವಿಸಿದ್ದರು.
ತ್ರಿಶೂರು ಜಿಲ್ಲೆ ವ್ಯಾಪ್ತಿಯಲ್ಲಿ ಗುರುವಾಯೂರು ಇದೆ. ಒಂದರ್ಥದಲ್ಲಿ ಕೃಷ್ಣನ ನೆಲೆಬೀಡು ಎಂದು ಈ ಜಿಲ್ಲೆಯನ್ನು ಗುರುತಿಸಲಾಗುತ್ತಿದೆ.
ರಾಜಧಾನಿಯಲ್ಲಿ ಹಾವು-ಏಣಿಯ ಆಟ
ರಳದ ರಾಜಧಾನಿ ತಿರುವನಂತಪುರದಲ್ಲಿ ಕಾಂಗ್ರೆಸ್ನ ಶಶಿ ತರೂರ್ ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರ ನಡುವೆ ಹಾವುಏಣಿ ಆಟ ನಡೆದಿದ್ದರೂ ಅಂತಿಮವಾಗಿ ಜಯದ ಮಾಲೆ ಶಶಿ ತರೂರ್ ಕೊರಳಿಗೆ ಬಿತ್ತು.
ಓ ರಾಜಗೋಪಾಲ…

ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂ ಜಿಲ್ಲೆಯ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ವರ್ಧಿಸಿ ಗೆಲುವು ಸಾಧಿಸಿ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದರು.



































