
ವಾರಭವಿಷ್ಯ 21.06.2026 ರಿಂದ 27.06.2026ರ ತನಕ
ವಿಶೇಷ ದಿನಗಳು : 21.06.2026… ದಕ್ಷಿಣಾಯಣ ಆರಂಭ
22.06.2026….. ಕರ್ಕಾಟಕ ರಾಶಿಗೆ ಬುಧನ ಪ್ರವೇಶ
ಮೇಷ : ಸುಖ ಭಾವದಲ್ಲಿ ಶುಕ್ರ, ಬುಧ, ಗುರು ಜೊತೆಯಾಗಿರುವುದು ನಿಮ್ಮ ಜೀವನದಲ್ಲಿ ಹಲವಾರು ಶುಭ ಬದಲಾವಣೆಯನ್ನು ಕಾಣುವಿರಿ. ಅನೇಕ ಸಮಯದಿಂದ ಕಾಡುತ್ತಿರುವ ಕೌಟುಂಬಿಕ ಸಮಸ್ಯೆಗೆ ಪರಿಹಾರ ಕಾಣಲಿದೆ. ಮನೆಯವರ ಬೇಕು ಬೇಡಗಳ ಬಗ್ಗೆ ಗಮನವಿರಲಿ, ಸಾಡೇ ಸಾತ್ ಶನಿ ಆರ್ಥಿಕ ಸಮಸ್ಯೆಯನ್ನು ತರಲಿದ್ದಾನೆ.
ವೃಷಭ : ಹಣ ಕಾಸಿನ ವ್ಯವಹಾರ ತೃಪ್ತಿಕರವಾಗಿರುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಬಂಧು ಮಿತ್ರರೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗದಂತೆ ಎಚ್ಚರವಹಿಸಿರಿ, ಕುಜ ಇತರರೊಂದಿಗೆ ವಾಗ್ವಾದ ಮಾಡುವಂತೆ ಮಾಡಲಿದ್ದಾನೆ. ಸಂಸಾರದಲ್ಲಿ ಭಿನ್ನಾಭಿಪ್ರಾಯ ಬರಲಿದೆ.
ಮಿಥುನ : ಉತ್ತಮ ದೈವಾನುಗ್ರಹವಿರುವುದರಿಂದ ನಿಮ್ಮ ಉತ್ತಮ ಕಾರ್ಯಗಳು ಇತರರಿಗೆ ಪ್ರೇರಣೆಯಾಗಲಿದೆ. ಇಷ್ಟವಿಲ್ಲದ ಕೆಲಸಗಳನ್ನು ಮಾಡಿ ಕೊರಗಬೇಡಿರಿ. ಸಹೋದರ ವರ್ಗದವರಲ್ಲಿ ಬೇಸರ ಬರಲಿದೆ. ಇತರರ ಜಗಳದಲ್ಲಿ ನೀವು ಬಲಿ ಪಶು ಆಗಬೇಡಿರಿ, ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ಒತ್ತಡ ಹೆಚ್ಚಾಗಲಿದೆ.
ಕರ್ಕಾಟಕ : ರಾಹು ಶನಿ ತಿಳಿಸುವಂತೆ ಇತರರ ಜೊತೆಗೆ ಮಾತಿನಲ್ಲಿ ಎಚ್ಚರವಿರಲಿ. ಆಹಾರ ವಿಚಾರದಲ್ಲಿ ಜಾಗರೂಕರಾಗಿರಿ. ಸೂಕ್ತ ಕಾಲದಲ್ಲಿ ಆರ್ಥಿಕ ಸಹಾಯ ಸಿಗಲಿದೆ, ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗ್ರತೆಇರಲಿ, ಉದ್ಯೋಗದಲ್ಲಿ ಬದಲಾವಣೆಯ ಸೂಚನೆಯನ್ನು ಕುಜ ನೀಡುತ್ತಿದ್ದಾನೆ.
ಸಿಂಹ : ಲಾಭ ಕ್ಷೇತ್ರದಲ್ಲಿ ಇರುವ ರವಿ ವಿದೇಶ ಪ್ರಯಾಣವನ್ನು ಸೂಚಿಸುತ್ತಿದ್ದಾನೆ. ಸಾಮಾಜಿಕವಾಗಿ ನೀವು ಮಾಡುತ್ತಿರುವ ಕೆಲಸಗಳಿಂದ ಮೆಚ್ಚುಗೆ ಗಳಿಸುವಿರಿ, ಹಣ ಹೂಡಿಕೆ ಮಾಡಲು ಇದು ಯೋಗ್ಯ ಸಮಯವಲ್ಲ. ನಿಮ್ಮ ಮೂಗಿನ ತುದಿಯಲ್ಲಿ ಇರುವ ಸಿಟ್ಟು ಕೆಲವೊಂದು ಅನಾಹುತಗಳಿಗೆ ಕಾರಣವಾಗಲಿದೆ. ಸಂಗಾತಿಯೊಂದಿಗೆ ಜಗಳ ಬೇಡ.
ಕನ್ಯಾ : ಅದೃಷ್ಟ ನಿಮ್ಮ ಜೀವನದಲ್ಲಿ ಪ್ರವೇಶ ಮಾಡಿದೆ. ಶುಕ್ರ ಬುಧ ಗುರು ಲಾಭದಲ್ಲಿ ಇದ್ದು,ಇಡೀ ಸಮಾಜ ನಿಮ್ಮನ್ನು ಮೆಚ್ಚುವಂತೆ ಮಾಡಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗಲಿದೆ. ಬರುವ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಶನಿಗೆ ಪರಿಹಾರ ಅಗತ್ಯವಿದೆ.
ತುಲಾ : ಸಂಗಾತಿಯೊಂದಿಗೆ ಜಗಳ ಬರುವಂತೆ, ಅದರಿಂದಾಗಿ ರಕ್ತದೊತ್ತಡ ಉಂಟಾಗುವಂತೆ ಕುಜ ಮಾಡಲಿದ್ದಾನೆ. ರಾಜಕೀಯ ವ್ಯಕ್ತಿಗಳು ಎಚ್ಚರದಿಂದ ಇರುವುದು ಒಳ್ಳೆಯದು. ಕಠಿಣ ಪರಿಶ್ರಮ ಅಗತ್ಯವಿರುತ್ತದೆ. ಮಾತಿನಲ್ಲಿ ಹಿಡಿತವಿರಲಿ. ಸಹೋದರ ವರ್ಗದವರಲ್ಲಿ ಅಸಮಾಧಾನ ಬರುವ ಸೂಚನೆ ಇರುತ್ತದೆ.
ವೃಶ್ಚಿಕ : ಕುಜ ಸಪ್ತಮದಲ್ಲಿ ಬಂದು ಸಂಸಾರದಲ್ಲಿ ಕಿರಿಕಿರಿ ಬಂದರೂ ಭಾಗ್ಯದಲ್ಲಿ ಇರುವ ಗುರು ಶುಕ್ರ ಬುಧ ಎಲ್ಲವನ್ನೂ ಸರಿದೂಗಿಸಿಕೊಂಡು ಮುಂದುವರಿಯುವಿರಿ. ರಾಜಕೀಯದಲ್ಲಿ ಇರುವವರು ಆರೋಗ್ಯದಲ್ಲಿ ಎಚ್ಚರವಾಗಿರಬೇಕು. ಹಿರಿಯರ ಬಗ್ಗೆ ಎಚ್ಚರವಾಗಿರಿ. ಬಹು ದಿನಗಳಿಂದ ಜೀವನದಲ್ಲಿ ಅನುಭವಿಸಿಕೊಂಡು ಬರುತ್ತಿರುವ ನೋವು ದೂರವಾಗಲಿದೆ.
ಧನು : ತನ್ನವರೇ ಶತ್ರುಗಳಾಗುವ ಸಮಯವಾಗಿದೆ. ಸಾಂಸಾರಿಕವಾಗಿ ಬೇಸರ ಬರಲಿದೆ. ಅಷ್ಟಮದಲ್ಲಿ ಇರುವ ಗುರು, ಶುಕ್ರ ಬುಧ ಆರೋಗ್ಯವನ್ನು ಮಾನಸಿಕವಾಗಿ ಶಾರೀರಿಕವಾಗಿ ಕಿರಿ ಕಿರಿ ಉಂಟು ಮಾಡಲಿದ್ದಾರೆ,ಶನಿಗೆ ಪರಿಹಾರ ಅಗತ್ಯವಿದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ಮುಂದುವರಿಯಿರಿ. ಮಕ್ಕಳು ನಿಮ್ಮೊಂದಿಗೆ ಸಹಕಾರ ನೀಡಲಿದ್ದಾರೆ.
ಮಕರ : ವಿಶೇಷವಾದ ದೈವಾನುಗ್ರಹ ನಿಮ್ಮದಾಗಿದೆ. ವಿದ್ಯಾರ್ಥಿಗಳು ಹಠ ಸ್ವಭಾವ ಬಿಟ್ಟು ಓದಿನ ಕಡೆಗೆ ಗಮನ ಕೊಡುವುದು ಅಗತ್ಯವಾಗಿದೆ. ರಾಜಕಾರಣಿಗಳಿಗೆ ವಿಶೇಷ ಗೌರವ ಸಿಗಲಿದೆ. ವ್ಯವಹಾರಗಳಿಂದ ವಿಶೇಷ ಆದಾಯವಿದ್ದರೂ ಖರ್ಚುಗಳ ಬಗ್ಗೆ ಕಡಿವಾಣ ಬೇಕು. ಕಫ, ಪಿತ್ತ ಸಂಬಂಧ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ.
ಕುಂಭ : ಸಾಡೇ ಸಾತ್ ಶನಿಯ ಪ್ರಭಾವದಿಂದ ಮತ್ತು ದೈವಾನುಗ್ರಹದ ಕೊರತೆಯಿಂದಾಗಿ, ನೀವು ವ್ಯವಹಾರದಲ್ಲಿ ಎಚ್ಚರದಿಂದ ಇರುವುದು ಅಗತ್ಯವಾಗಿದೆ, ಶತ್ರುಗಳ ಕಾಟ ಇರಲಿದೆ. ಮಕ್ಕಳು ಕೂಡಾ ಹಠ ಸಾಧನೆ ಮಾಡಲಿದ್ದಾರೆ. ಸಂಗಾತಿಯ ಸಹಕಾರ ಕೂಡಾ ಸಿಗಲಾರದು. ಈಶ್ವರ ದೇವರ ಪ್ರಾರ್ಥನೆ ಅಗತ್ಯವಿದೆ.
ಮೀನಾ : ಸಾಡೇಸಾತ್ ಶನಿಯ ಪ್ರಭಾವ ನಿಮ್ಮ ಮೇಲಿದ್ದರೂ, ಪಂಚಮದಲ್ಲಿ ಇರುವ ಗುರು ಶುಕ್ರ ಬುಧರು ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಪೂರ್ಣ ಯಶಸ್ಸು ಸಿಗುವಂತೆ ಮಾದಲಿದ್ದಾರೆ. ಶುಭ ಕೆಲಸಗಳು ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿ ಆದಾಯ ಹೆಚ್ಚಾಗಲಿದೆ. ಮಾನಸಿಕ ಒತ್ತಡಗಳು ದೂರವಾಗಲಿದೆ.























