ವಾರಭವಿಷ್ಯ 10.05.2026 ರಿಂದ 16.05.2026ರ ತನಕ
ವಿಶೇಷ ದಿನಗಳು :
11.05.2026.. ಮೇಷ ರಾಶಿಗೆ ಕುಜ ನ ಪ್ರವೇಶ
14.05.2026.. ವೃಷಭ ರಾಶಿಗೆ ಬುಧ ನ ಪ್ರವೇಶ
ಮಿಥುನ ರಾಶಿಗೆ ಶುಕ್ರನ ಪ್ರವೇಶ
15.05.2026… ವೃಷಭ ಸಂಕ್ರಮಣ
ಮೇಷ :ಅದ್ಭುತ ಪರಿವರ್ತನಾ ಯೋಗ ಆರಂಭವಾಗಿದೆ. ಈ ವರೆಗೆ ಅನುಭವಿಸಿದ ಕಷ್ಟ ನಷ್ಟಗಳೆಲ್ಲವೂ ದೂರವಾಗುವ ಸಮಯ ಬಂದಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವಿರಿ, ಹಿರಿಯರ ಜೊತೆಗಿದ್ದ ವೈಮನಸ್ಸು ದೂರವಾಗಲಿದೆ. ಮಾನಸಿಕ ಒತ್ತಡ ನಿವಾರಣೆಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ವೃಷಭ :ವೃತ್ತಿ ವ್ಯವಹಾರ ಕ್ಷೇತ್ರದಲ್ಲಿ ನಿಮಗೆ ಅನುಕೂಲವಾದ ಪರಿಸ್ಥಿತಿ ಇರಲಿದೆ. ವ್ಯಯಕ್ಕೆ ಕುಜ ಬರುತ್ತಿರುವುದು ಸಂಸಾರದಲ್ಲಿ ಕಿರಿಕಿರಿಯನ್ನು ತರುವ ಸೂಚನೆ ಬರಲಿದೆ. ಗುರುವಿನೊಂದಿಗೆ ಶುಕ್ರ ನ ಸಂಯೋಗ ಶುಭ ಫಲವನ್ನು ನೀಡಲಿದ್ದು ಆದಾಯದಲ್ಲಿ ಚೇತರಿಕೆ ಕಂಡು ಬರಲಿದೆ.
ಮಿಥುನ :ರವಿ ವ್ಯಯಕ್ಕೆ ಬರುತಿದ್ದು ಚಿನ್ನ ಬೆಳ್ಳಿ ಮುಂತಾದ ಲೋಹದ ವ್ಯಾಪಾರಿಗಳಿಗೆ ಒಳ್ಳೆಯ ಸಮಯ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇರಲಿದೆ. ಬರಲಿರುವ ದಿನಗಳು ಶುಭ ಸೂಚಕವಾಗಲಿವೆ. ಮಕ್ಕಳ ಬೆಳವಣಿಗೆ ಮನಸ್ಸಿಗೆ ಸಂತೋಷ ತರಲಿದೆ.
ಕರ್ಕಾಟಕ : ಕಷ್ಟದ ದಿನಗಳು ದೂರವಾಗುವ ಸಮಯ, ಶನಿಯಿಂದ ಕುಜಬಿಡುಗಡೆಯಾಗಲಿದ್ದಾನೆ. ಹಿರಿಯರ ಅನಾರೋಗ್ಯ ಸ್ಥಿತಿ ದೂರವಾಗಲಿದೆ. ಬರಬೇಕಾಗಿರುವ ಹಣ ನಿಮ್ಮ ಕೈ ಸೇರಲಿದೆ. ಕೆಟ್ಟ ಜನರ ಸಹವಾಸದಿಂದ ಹೊರಗೆ ಬನ್ನಿರಿ, ನಾಗ ದೇವರ ಪ್ರಾರ್ಥನೆ ಅಗತ್ಯವಿದೆ. ಹಲವಾರು ಸಮಸ್ಯೆಗಳ ಪರಿಹಾರ ನಿಮ್ಮಮಾತಿನಲ್ಲಿಯೇ ಇರಲಿದೆ.
ಸಿಂಹ :ಕಾಳ ಸರ್ಪ ದೋಷದ ಕಾಲವು ಬಂದಿದೆ. ಸಂಸಾರದಲ್ಲಿ ವೃಥಾ ಅಪವಾದಗಳನ್ನು ಎದುರಿಸುವಿರಿ, ಕುಜ ಭಾಗ್ಯಕ್ಕೆ ಬರುತ್ತಿರುವುದು ಹಿರಿಯರ ಬೇಸರಕ್ಕೆ ಕಾರಣವಾಗಲಿದೆ. ಉದ್ಯೋಗದಲ್ಲಿ ಎಚ್ಚರವಾಗಿರಿ. ಶುಕ್ರನ ಮಿಥುನ ರಾಶಿ ಪ್ರವೇಶ ನಿಮಗೆ ಶುಭವಾಗಲಿದೆ.
ಕನ್ಯಾ : ಕುಜ ಮೇಷ ರಾಶಿಯ ಪ್ರವೇಶ ನಿಮ್ಮ ಸಹೋದರನ ಅನಾರೋಗ್ಯಕ್ಕೆ ಕಾರಣವಾಗಲಿದೆ, ವೈ ಮನಸ್ಸು ಬರಲಿದೆ. ಪಿತ್ರಾರ್ಜಿತ ಆಸ್ತಿ ವಿಭಾಗ ಆಗುವ ಸೂಚನೆ ಇದೆ. ನಡಿಗೆಯಲ್ಲಿ ಮಾತಿನಲ್ಲಿ ಎಚ್ಚರ ತಪ್ಪದಂತೆ ಜಾಗ್ರತೆಯಿಂದಿರಿ. ನೌಕರರಿಗೆ ಭಡ್ತಿ ಯೋಗವಿದೆ.
ತುಲಾ : ಸಪ್ತಮಕ್ಕೆ ಕುಜನ ಪ್ರವೇಶ ಸಂಸಾರದಲ್ಲಿ ಕಿರಿಕಿರಿ ಬರಲು ಕಾರಣವಾಗಲಿದೆ. ರವಿ ಅಷ್ಟಮಕ್ಕೆ ಬರುತ್ತಿರುವುದು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಲಿದೆ. ಚಿನ್ನಾಭರಣಗಳ ಬಗ್ಗೆ ಎಚ್ಚರವಾಗಿರಿ. ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.
ವೃಶ್ಚಿಕ : ಕುಜ ಆರನೆಯ ಭಾವಕ್ಕೆ ಬರುತ್ತಿರುವುದು, ಮಕ್ಕಳ ಮೇಲಿನ ಬೇಸರ ಉಪಶಮನ ಗೊಳ್ಳಲು ಸಹಕಾರಿಯಾಗಲಿದೆ. ವೃಷಭ ರಾಶಿಗೆ ಬುಧ ರವಿ ಬರುತ್ತಿರುವುದು ಸಂಸಾರದಲ್ಲಿ ಕಿರಿಕಿರಿ ಬರಲು ಕಾರಣವಾಗಲಿದೆ. ಕಷ್ಟಗಳೆಲ್ಲವೂ ದೂರವಾಗಲಿದೆ ಜೂನ್ 2 ರಂದು ಗುರು ಕರ್ಕಾಟಕ ರಾಶಿಗೆ ಬಂದಾಗ ಶುಭವಾಗಲಿದೆ.
ಧನು : ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ, ಕುಜ ಪಂಚಮ ಭಾವಕ್ಕೆ ಬರುತ್ತಿರುವುದು ಮಕ್ಕಳಲ್ಲಿ ವೃಥಾ ವೈಮನಸ್ಸು ಬರಲು ಕಾರಣವಾಗಲಿದೆ. ರವಿ ವೃಷಭ ರಾಶಿಗೆ ಬರುತ್ತಿರುವುದು ನಿಮ್ಮ ಆದಾಯ ಹೆಚ್ಚಾಗಲು ಕಾರಣವಾಗಲಿದೆ. ಶುಕ್ರ ಮಿಥುನ ರಾಶಿಗೆ ಬರುತ್ತಿರುವುದು ಅನ್ಯ ಮಹಿಳೆಯರ ಬಗ್ಗೆ ಎಚ್ಚರವಾಗಿರಿ ಎಂಬ ಸೂಚನೆಯನ್ನು ನೀಡುತ್ತಿದ್ದಾನೆ.
ಮಕರ : ರವಿ ಪಂಚಮಕ್ಕೆ ಬರುತ್ತಿರುವುದರಿಂದ ಮಕ್ಕಳಬಗ್ಗೆ ಎಚ್ಚರವಾಗಿರಿ. ಶುಕ್ರ ಆರನೆಯ ಮನೆಗೆ ಬರುತ್ತಿರುವುದರಿಂದ ಆರೋಗ್ಯದ ಬಗ್ಗೆ ಎಚ್ಚರವಾಗಿರಿ, ಕುಜ ನಾಲ್ಕನೆಯ ಭಾವಕ್ಕೆ ಬರುತ್ತಿರುವುದರಿಂದ ಹೊಸ ಮನೆ ನಿವೇಶನ,ವಾಹನ ಖರೀಧಿ ಮಾಡುವ ಸೂಚನೆ ಸಿಗುತ್ತಿದೆ. ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ.
ಕುಂಭ : ಗ್ರಹಗಳ ಭಾವ ಬದಲಾವಣೆ ನಿಮಗೆ ಅನುಕೂಲವನ್ನು ತರಲಿದೆ. ಭೂಮಿಯ ವ್ಯವಹಾರ ಮಾಡುವವರಿಗೆ ಒಮ್ಮೆಲೇ ಉತ್ತಮ ಲಾಭವನ್ನು ತರಲಿದೆ. ರವಿ ವೃಷಭ ರಾಶಿಗೆ ಬರುತ್ತಿರುವುದು ತಾಯಿಯವರ,ಪತ್ನಿಯವರ ಅನಾರೋಗ್ಯಕ್ಕೆ ಕಾರಣವಾಗಲಿದೆ. ಈಶ್ವರ ದೇವರ ಪ್ರಾರ್ಥನೆ ಅಗತ್ಯವಾಗಿದೆ.
ಮೀನಾ : ರಾಜಕಾರಣಿಗಳ ಒಡನಾಟದಿಂದ ಅನೇಕ ಕಾರ್ಯಗಳು ಕೈ ಗೂಡಲಿವೆ. ದ್ವಿತೀಯಾದ ಕುಜ ಅನಾವಶ್ಯಕ ಮಾತುಗಳಿಂದ ಶತ್ರುಗಳು ಸೃಷ್ಟಿ ಆಗುವಂತೆ ಮಾಡಲಿದ್ದಾನೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಬೆಲೆ ಬಾಳುವ ವಸ್ತ್ರ ಆಭರಣಗಳನ್ನು ಖರೀಧಿ ಮಾಡಲಿದ್ದೀರಿ.























