
ದಿನಾಂಕ 15.03.2026 ರಿಂದ 21.03.2026ರ ತನಕ
ವಿಶೇಷ ದಿನಗಳು : 19.03.2026…ಚಾಂದ್ರ ಯುಗಾದಿ : ಪರಾಭವ ಸಂವತ್ಸರ ಆರಂಭ
ಮೇಷ : ರವಿ,ಶನಿ,ಶುಕ್ರ ವ್ಯಯದಲ್ಲಿ ಇರುವ ಈ ಸಂದರ್ಭದಲ್ಲಿ ಬಹಳ ಎಚ್ಚರದಿಂದ ಇರಬೇಕಾಗಿರುವುದು ಅಗತ್ಯವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಪೂರ್ವ ತಯಾರಿ ಚೆನ್ನಾಗಿರಲಿ.
ವೃಷಭ : ಅನೇಕ ದಿನಗಳ ನಂತರ ಮನೆಯಲ್ಲಿ ಸಂತಸ ನೆಲೆಯಾಗಲಿದೆ. ಅಹಿತಕರ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗುವ ಲಕ್ಷಣವಿದೆ. ನಿಮ್ಮ ಅತಿಯಾದ ಕೋಪ ನಿಮಗೆ ಹಾನಿ ಮಾಡಲಿದೆ.
ಮಿಥುನ :ಉತ್ತಮ ಕೆಲಸ ಕಾರ್ಯಗಳಿಂದ ಕೀರ್ತಿ ಯಶಸ್ಸು ಲಭಿಸಲಿದೆ. ಅನಾವಶ್ಯಕ ಖರ್ಚುಗಳಿಂದ ಆರ್ಥಿಕ ಸಮಸ್ಯೆ ಸಮಸ್ಯೆ ಬರಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.
ಕರ್ಕಾಟಕ : ನಿಮ್ಮ ವೃತ್ತಿರಂಗದಲ್ಲಿ ಒತ್ತಡವಿದ್ದರೂ ಸಂತಸ ಸಮಾಧಾನದಿಂದಿರಿ. ಹಿರಿಯರಿಗೆ ಗೌರವ ಕೊಡುವುದು ನಿಮ್ಮ ಕರ್ತವ್ಯವಾಗಿದೆ. ಮಕ್ಕಳ ವಿವಾಹ ಪ್ರಯತ್ನಗಳಿಗೆ ಜೂನ್ 2 ರವರೆಗೆ ಕಾಯುವುದು ಅಗತ್ಯವಾಗಿದೆ.
ಸಿಂಹ : ಉತ್ತಮ ದೈವಾನುಗ್ರಹ ಇರುವುದರಿಂದ ಯಶಸ್ಸು ನಿಮಗೆ ಸಿಗಲಿದೆ, ನಿಕಟ ಬಂಧುಗಳೊಂದಿಗೆ ವಿರಸ ಹೆಚ್ಚಾಗಲಿದೆ. ದಾಂಪತ್ಯ ಜೀವನಲ್ಲಿ ಹೊಂದಾಣಿಕೆ ಅತೀ ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳುವ ಸಮಯವಾಗಿದೆ.
ಕನ್ಯಾ : ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಲಾಭವಿದೆ. ಮಕ್ಕಳ ವಿಷಯದಲ್ಲಿ ಗಮನವನ್ನು ಕೊಡುವುದು ಅತೀ ಅಗತ್ಯವಾಗಿದೆ. ನಿಮ್ಮ ಆತ್ಮವಿಶ್ವಾಸವು ಇತಿಮಿತಿಯಲ್ಲಿ ಇರಲಿ.
ತುಲಾ : ಹೊಸ ವಾಹನ ಖರೀಧಿ ಅಥವಾ ಗೃಹ ನಿರ್ಮಾಣ ನಿಮ್ಮ ಅದೃಷ್ಟದಲ್ಲಿ ಗುರು ಕರುಣಿಸುವ ಸಮಯವಾಗಿದೆ. ನಿಮ ಕಷ್ಟ ಕಾಲದಲ್ಲಿ ಸಹೋದರರ ಸಹಕಾರ ಸಿಗಲಿದೆ. ನಿಮ್ಮ ನಡೆ ನುಡಿಗಳು ಇತರರು ಅನುಸರಿಸುವಂತಿರಲಿ.
ವೃಶ್ಚಿಕ : ಆರ್ಥಿಕ ಸ್ಥಿತಿ ಗತಿ ಸುಧಾರಿಸುವ ಸಮಯ ಬಂದಿದೆ. ದಾಂಪತ್ಯ ಜೀವನದಲ್ಲಿ ಕಲಹಗಳು ಬಾರದಂತೆ ಎಚ್ಚರವಹಿಸಿರಿ. ಅನಾವಶ್ಯಕ ಮಾತುಗಳಿಂದ ಕಲಹಗಳು ಬರಲಿವೆ. ನವಗ್ರಹ ಜಪ ಪಾರಾಯಣ ಅಗತ್ಯವಿದೆ.
ಧನು : ವ್ಯರ್ಥ ಬೇಸರ ಪಡುವ ಅಗತ್ಯವಿಲ್ಲ. ಆರೋಗ್ಯದ ಕಡೆಗೆ ಗಮನವಿರಲಿ. ಕಷ್ಟಗಳು ನಿಧಾನವಾಗಿ ಪರಿಹಾರವಾಗಲಿವೆ. ಇನ್ನೊಬ್ಬರನ್ನು ಟೀಕಿಸುವ ವಿಷಯದಿಂದ ದೂರವಿರುವುದು ಒಳ್ಳೆಯದು. ಆರ್ಥಿಕವಾಗಿ ಲಾಭದಾಯಕ ವಾತಾವರಣವಿರುತ್ತದೆ.
ಮಕರ : ವ್ಯಾಪಾರ ವಹಿವಾಟುಗಳು ಮಂದಗತಿಯಲ್ಲಿ ಇರುವ ಸಮಯವಾಗಿದೆ. ಜೂನ್ 2 ರ ವರೆಗೆ ಕಾಯಬೇಕಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ತಮ್ಮ ಪ್ರಯತ್ನವನ್ನು ಮುಂದುವರಿಸಬೇಕು. ತಾಳ್ಮೆ ಸಂಯಮದಿಂದ ಎತ್ತರಕ್ಕೆ ಬೆಳೆಯಲಿದ್ದೀರಿ.
ಕುಂಭ : ಆಸ್ತಿ ಸಂಬಂಧ ರವಿ ಮತ್ತು ಶನಿ ಕೋರ್ಟ್ ಕಚೇರಿ ಅಲೆದಾಟವನ್ನು ಮಾಡಲಿದ್ದಾನೆ. ಯೋಜಿತ ಕಾರ್ಯಗಳಲ್ಲಿ ದಾರಿ ತಪ್ಪದಂತೆ ಮುಂದುವರಿಯಿರಿ. ನಿಮ್ಮ ಮುಂಗೋಪದಿಂದ ಸ್ನೇಹಿತರು ಶತ್ರುಗಳಾಗಬಹುದು.
ಮೀನ : ನಿಮ್ಮ ಉತ್ತಮ ಕೆಲಸಗಳಿಗೆ ತಡವಾಗಿಯಾದರೂ ಗೌರವ ಸಿಗಲಿದೆ .ಜನ್ಮ ರಾಶಿಯಲ್ಲಿ ರವಿ ಶನಿ ಶುಕ್ರ ಇರುವುದರಿಂದ ಪ್ರೀತಿ ಪಾತ್ರರೊಂದಿಗೆ ಮನಸ್ತಾಪ ಬಾರದಂತೆ ಎಚ್ಚರವಾಹಿಸುವುದು ಅಗತ್ಯವಿರುತ್ತದೆ, ಖಡ್ಗ ಮಾಲಾ ಸ್ತೋತ್ರವನ್ನುಪಾರಾಯಣ ಮಾಡಿರಿ.



































