



ಪರಾಭವ ಸಂವತ್ಸರದಲ್ಲಿ ಮೇಷಾದಿ ದ್ವಾದಶ ರಾಶಿಯವರ ವರ್ಷ ಭವಿಷ್ಯ
ಮೇಷ : ಈ ವರ್ಷ ದೈವ ಬಲ ಕಡಿಮೆ.ವರ್ಷದ ಬಹುಪಾಲು ಗುರುವು ಸುಖ ಸ್ಥಾನದಲ್ಲಿ ಪ್ರತಿಕೂಲನು.ಶನಿಯು ವರ್ಷ ಪೂರ್ತಿ ವ್ಯಯ ಸ್ಥಾನದಲ್ಲಿ ಸಂಚರಿಶ್ಚಾ ನಷ್ಟ ಕಷ್ಟ ಅಪಘಾತ ಭಯ ಇತ್ಯಾದಿಗಳಿಗೆ ಕಾರಣನಾಗುವನು. ಕುಟುಂಬದಲ್ಲಿ ದು :ಖಕರ ಪ್ರಸಂಗಗಳು ಅನಾರೋಗ್ಯ ವಾಹನಗಳಿಂದ ತೊಂದರೆ ಬರುವ ಸಾಧ್ಯತೆ, ಹಿರಿಯರಿಗೆ ಬೇಸರ ಪಡಿಸುವಿಕೆ ನಡೆಯಲಿದೆ. ಶನಿ ಶಾಂತಿ ಬಡವರಿಗೆ ಅನ್ನದಾನ ಶಿವ ವಿಷ್ಣು ಕ್ಷೇತ್ರದಲ್ಲಿ ಯಥಾ ಶಕ್ತಿ ಸೇವೆ ಸಲ್ಲಿಸುತ್ತಾ ಬರುವುದರಿಂದ ತಕ್ಕ ಮಟ್ಟಿಗೆ ಕಷ್ಟ ಪರಿಹಾರವಾಗಲಿದೆ.
ವೃಷಭ :ಗುರುವು ಜನ್ಮ ರಾಶಿಯಿಂದ ತೃತೀಯ-ಚತುರ್ಥದಲ್ಲಿ ಸಂಚರಿಸುವುದರಿಂದ ದೈವ ಬಲ ಕಡಿಮೆ. ರಾಹುವೂ ಪ್ರತಿಕೂಲನು. ಸುಖ ಸಂತೋಷಗಳು ಮರೀಚಿಕೆಯಾದಾವು. ವೃತ್ತಿ-ಉದ್ಯೋಗಗಳಲ್ಲಿ ಸ್ಪರ್ಧೆ-ಬದಲಾವಣೆ. ಬಂಧು ಜನರಿಂದ /ಸಹೋದ್ಯೋಗಿಗಳಿಂದ ಕೇಶಗಳು, ಪ್ರೀತಿಪಾತ್ರರು ಅಥವಾ ಸಮೀಪದ ಬಂಧುವೊಬ್ಬರು ತೊಂದರೆಗೆ ಸಿಲುಕುವರು. ಸಹೋದರ ವರ್ಗದವರಿಂದ ವಿಶೇಷ ಸಹಕಾರ ಒದಗಿ ಬರಲಿದೆ. ರಾಹು ನಿಮಗೆ ಧರ್ಮ ಸಮ್ಮತವಲ್ಲದ ಕೆಲಸಗಳಿಗೆ ಪ್ರಚೋದನೆ ನೀಡಲಿದ್ದಾನೆ. ಗುರು -ರಾಹು-ಕೇತುಗಳ ಪ್ರೀತ್ಯರ್ಥ ಯಥಾ ಶಕ್ತಿ ವಿಷ್ಣು -ಸುರಹ್ಮಣ್ಯ-ಗಣಪತಿ ದೇವತಾರಾಧನೆ ನಡೆಸುವುದರಿಂದ ಶುಭವಾಗಲಿದೆ.
ಮಿಥುನ : ಈ ವರ್ಷ ದ್ವಿತೀಯದ ಗುರುವು ಉತ್ತಮ ದೈವಬಲವೊದಗಿಸುವನು, ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲ ಉಂಟಾಗುವುದು. ಸಾರ್ವಜನಿಕ ಸೇವಾ ಕಾರ್ಯಗಳಿಂದ ಪ್ರಶಂಸೆ ಗಳಿಸುವಿರಿ, ಮಕ್ಕಳಿಗೂ ಅನುಕೂಲವುಂಟಾಗುವುದು. ವಿವಿಧ ಮೂಲಗಳಿಂದ ಧನಲಾಭ ಪತಿಪತ್ನಿಯರ ನಡುವೆ ಅನ್ನೋನ್ಯತೆ,ಮನೆಯಲ್ಲಿ ಶುಭ ಮಂಗಳ ಕಾರ್ಯಗಳು ನಡೆಯುವುವು.ವೃತ್ತಿ ಉದ್ಯೋಗದಲ್ಲಿ ಸ್ಪರ್ಧೆ-ಬದಲಾವಣೆ ಆರ್ಥಿಕ ಅಡಚಣೆ ಕಂಡು ಬರಲಿದೆ. ಸುಬ್ರಹ್ಮಣ್ಯ ಆರಾಧನೆ, ಮಹಾ ವಿಷ್ಣು ಸೇವೆ, ಅನಾತರಿಗೆ ಅಕ್ಕಿ ದಾನ ಮಾಡಿರಿ.
ಕರ್ಕಾಟಕ :ಗುರುವು ಜನ್ಮ-ದ್ವಿತೀಯಾದಲ್ಲಿ ಶನಿಯು ನವಮಾದಲ್ಲಿ ರಾಹುವು ಸಪ್ತಮ ಅಷ್ಟಮಗಳಲ್ಲಿ ಸಂಚರಿಸುವುದರಿಂದ ಗುಣ ದೋಷಗಳಿಂದ ಮಿಶ್ರ ಫಲ ಉಂಟಾಗುವುದು. ಸ್ಥಾನ ಭ್ರಂಶ -ಧನ ಕ್ಷಯ -ಕಲಹ ಉಂಟಾಗಲಿದೆ. ನವಮಾದ ಶನಿಯಿಂದ ಮನಸ್ಸಿಗೆ ನೆಮ್ಮದಿ ಕಡಿಮೆ ಉಂಟಾಗಲಿದೆ. ಅನ್ಯರಿಂದ ಮನಸ್ಸಿಗೆ ಕೇಶ ಗುಹ್ಯ ವ್ಯಾಧಿಯ ಬಗ್ಗೆ ಜಾಗ್ರತೆ ವಹಿಸಬೇಕು .ಸುಳ್ಳು ಅಪವಾದಗಳೂ ಎದುರಾಗುವುವು. ವಿದ್ಯುತ್ತಿನ ಉಪಕರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪತ್ನಿಯ ಆರೋಗ್ಯದ ಬಗ್ಗೆ ಗಮನವಿರಬೇಕು. ರಾತ್ರಿ ಸಂಚಾರ ಉತ್ತಮವಲ್ಲ ಗುರು ಶನಿ ರಾಹು ಪ್ರೀತ್ಯರ್ಥ ಯಥಾ ಸಹಾಕ್ತಿ ದೇವತಾರಾಧನೆ ನಡೆಸುಕುದರಿಂದ ಶುಭವಾಗಲಿದೆ.
ಸಿಂಹ : ವ್ಯವಸ್ಥಾನ -ಜನ್ಮರಾಶಿಗಳ ಗುರು ಮತ್ತು ಅಷ್ಟಮದ ಶನಿಯಿಂದಾಗಿ ಈ ವರ್ಷ ದೈವ ಬಲವಿರುವುದಿಲ್ಲ.ಕುಟುಂಬದಲ್ಲಿ ದುಃಖಕಾರ ಪ್ರಸಂಗಗಳನ್ನು ಎದುರಿಸಬೇಕಾಗುವುದು. ಸ್ವಲ್ಪ ಮಟ್ಟಿನ ಮನಸ್ತಾಪಗಳು ಕಂಡುಬರುತ್ತದೆ. ಆರೋಗ್ಯಕ್ಕೂ ಉತ್ತಮವಲ್ಲ.ವಾಹನಾದಿಗಳಿಂದ ತೊಂದರೆಗಳುಂಟಾಗುವ ಸಂದರ್ಭವಿರುವುದರಿಂದ ಜಾಗ್ರತೆವಹಿಸಬೇಕು.ಕುಲದ ಉತ್ತಮ ಆಚರಣೆಗಳಿಂದ ಹಿಂದೆ ಬರುವ ಸಾಧ್ಯತೆ ಇದೆ. ಸಂಪತ್ತಿನ ನಷ್ಟ,ಕಾರ್ಯಗಳಿಗೆ ವಿಘ್ನ, ಅನಿರೀಕ್ಷಿತ ಕಷ್ಟಗಳು ಉಂಟಾಗುವ ಕಾಲವಾಗಿರುತ್ತದೆ ಗುರು-ಶನಿ-ರಾಹು-ಕೇತುಗಳ ಪ್ರೀತ್ಯರ್ಥಯಥಾ ಶಕ್ತಿ ದೇವತಾರಾಧನೆಯಿಂದ ಶುಭವಾಗಲಿದೆ.
ಕನ್ಯಾ : ಲಾಭ ಸ್ಥಾನದ ಗುರುವು ದೈವಬಲವನ್ನು ಒದಗಿಸುವನು. ರಾಹು ಕೇತುಗಳು ಅನುಕೂಲರು .ಎಲ್ಲಾ ರೀತಿಯಲ್ಲಿ ಅನುಕೂಲಗಳು ಉಂಟಾಗುವುದು.ಕುಟುಂಬದಲ್ಲಿ ಹೊಸಬರ ಆಗಮನದ ಸಾಧ್ಯತೆಯಿದೆ. ಆರ್ಥಿಕವಾಗಿಯೂ ಅಭಿವೃದ್ಧಿ ಉಂಟಾಗುವುದು.ಉನ್ನತ ಸ್ಥಾನ ಮಾನಗಳು,ಸಿಗುವ ಸಾಧ್ಯತೆಯಿದೆ. ಗೃಹದಲ್ಲಿ ಶುಭಸಮಾರಂಭಗಳು ನಡೆಯಲಿವೆ. ವಿವಿಧ ಮೂಲಗಳಿಂದ ಧನ ಪ್ರಾಪ್ತಿಯಿದೆ. ಕೆಲಸ ಕಾರ್ಯಗಳಲ್ಲಿ ಮೊದಲಿಗಿಂದ ಅಧಿಕ ಉತ್ಸಾಹಿಯಾಗುವಿರಿ,ಆಂಜನೇಯನಿಗೆ ಪವಮಾನ ಸೇವೆ ವಿಷ್ಣು ಸೇವೆ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ನಡೆಸುವುದರಿಂದ ಶುಭ ಫಲ ಬರಲಿದೆ.
ತುಲಾ : ಈ ವರ್ಷ ದೈವ ಬಾಲ ಕಡಿಮೆ. ಜನ್ಮ ರಾಶಿಯಿಂದ ದಶಮದ ಗುರು,ಚತುರ್ಥ-ಪಂಚಮಗಳ ರಾಹು, ಆರ್ಥಿಕವಾಗಿಯೂ ವ್ಯಾವಹಾರಿಕವಾಗಿಯೂ ಕಷ್ಟ ನಷ್ಟಗಳು ಅಧಿಕವಾಗಲಿವೆ.ಸ್ಥಾನ ಮಾನಾಡಿಗಳಿಗೆ ಹಾನಿ. ಧನ ಹಾನಿ ಅಶುಭಗಳ ಅನುಭವ,ಸಂತಾನ ಸಂಬಂಧ ದು:ಖ, ಮಾತಿನಲ್ಲಿ ಹಾಗೂ ಚಟುವಟಿಕೆಗಳಲ್ಲಿ ವ್ಯತ್ಯಾಸಗಳು ತೋರುವುದು.ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಯತ್ನ ಅಗತ್ಯವಿರುತ್ತದೆ. ಭೂಮಿ ಗೃಹ,ವಾಹನಾದಿ ವ್ಯವಹಾರಗಳಲ್ಲಿ ಪ್ರತಿಕೂಲಫಲವಿರುತ್ತದೆ ಕುಟುಂಬದ ಹಿರಿಯ ವ್ಯಕ್ತಿಗಳ ಕುರಿತು ವಿಶೇಷ ಎಚ್ಚರಿಕೆ ಅಗತ್ಯವಿರುತ್ತದೆ.
ವೃಶ್ಚಿಕ : ಭಾಗ್ಯ ಸ್ಥಾನದ ಗುರುವಿನಿಂದಾಗಿ,ದೈವಬಲವಿದ್ದು ಮನೋ ನಿಶ್ಚಿತ ಕೆಲಸಗಳು ನಿರ್ವಿಘ್ನವಾಗಿ ನಡೆಯುವುದು. ವಿವಾಹಾದಿ ಶುಭ ಸಮಾರಂಭಗಳು ನಡೆಯುವುದು ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲಗಳು ಉಂಟಾಗುವುದು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿರುತ್ತದೆ. ಮನೆಯಲ್ಲಿ ಶಾಂತಿ ಸುಖ ಸಂತೋಷ ಲಭಿಸಲಿದೆ. ಉಳಿದಂತೆ ಪಂಚಮ ಸ್ಥಾನದ ಶನಿ ಅನಿಷ್ಟ ಸ್ಥಾನದ ರಾಹು ಕೇತುಗಳು, ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಕರ್ಮ ಸ್ಥಾನದ ಗುರು ಕೆಲಸಕಾರ್ಯಗಳಲ್ಲಿ ವಿವಿಧ ರೀತಿಯ ಅಡಚಣೆಗಳೆದುರಾಗಿ ನಿರೀಕ್ಷಿತ ಫಲ ಸಿಗದು. ಶನಿ ಶಾಂತಿ, ಶನಿ-ರಾಹು-ಕೇತುಗಳ ಪ್ರೀತ್ಯರ್ಥ ಯಥಾ ಶಕ್ತಿ ದೇವತಾ ಸೇವೆಗಳಿಂದ ಶುಭವಾಗಲಿದೆ.
ಧನು: ಗುರುವು ಈ ಸಮಯದಲ್ಲಿ ನಿಮ್ಮ ಜನ್ಮಾಷ್ಟಮ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಈ ಕಾಲದಲ್ಲಿ ದೈವ ಬಲವಿರದು. ಚತುರ್ಥದ ಶನಿಯು ನವಮ-ಅಷ್ಟಮದ ಕೇತುವು ಅಶುಭಫಲದಾಯಕರು. ಆರೋಗ್ಯದಲ್ಲಿ ತೊಂದರೆಗಳು ತೋರುವುದು. ವೃತ್ತಿಕ್ಷೇತ್ರದಲ್ಲಿ ಉದ್ಯೋಗ -ವ್ಯವಹಾರಗಳಲ್ಲಿ ಸೋಲು ಉಂಟಾಗಬಹುದು. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ತೋರಬಹುದು. ಆರ್ಥಿಕವಾಗಿ ಖರ್ಚು ಹಾಗೂ ನಷ್ಟಗಳು ಉಂಟಾಗಬಹುದು.ಮನಸ್ಸು ಹೆಚ್ಚು ಚಂಚಲವಾಗಿ ನೆಮ್ಮದಿ ಕಡಿಮೆಯಾಗಬಹುದು.
ಮಕರ : ಗುರುವು ಸಪ್ತಮದಲ್ಲಿದ್ದು ಉತ್ತಮ ದೈವಬಲವಿದೆ. ಶನಿಯು ವರ್ಷವಿಡೀ ತೃತೀಯ ಸ್ಥಾನದಲ್ಲಿ ಸಂಚರಿಸುತ್ತಾ ಕೆಲವೊಂದು ಅನುಕೂಲಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವಿವಾಹ ಶುಭ ಶೋಭಾನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಉತ್ತಮ ಕಾಲವಾಗಿರುತ್ತದೆ .ಭೂಮಿ ವಾಹನಾದಿ ಸುಖಗಳು ಉಂಟಾಗುವುದು. ಪತ್ನಿಗೂ ಅನುಕೂಲ ಕಾಲವಾಗಿರುತ್ತದೆ ದಾಂಪತ್ಯದಲ್ಲಿ ಸುಖ ಸಂತೋಷಗಳು ಸಂತಾನ ಲಾಭ ಧನ ಲಾಭ, ಗಣಪತಿ ಸುಬ್ರಹ್ಮಣ್ಯ – ವಿಷ್ಣು ಕ್ಷೇತ್ರದಲ್ಲಿ ಯಥಾ ಶಕ್ತಿ ಸೇವೆ ಸಲ್ಲಿಸುವುದರಿಂದ ಶುಭವಾಗಲಿದೆ.
ಕುಂಭ : ದ್ವಿತೀಯ ಸ್ಥಾನದ ಶಾಯಿ,ಜನ್ಮ-ವ್ಯಯಸ್ಥಾನದ ರಾಹು-ಸಪ್ತಮದ ಕೇತು ಶತ್ರು ಸ್ಥಾನದ ಗುರು -ದೇವಕೃಪೆಯ ಅಭಾವ ತೋರಿ ಬರಲಿದೆ. ಮಾನಸಿಕ ಖಿನ್ನತೆಯಿಂದ ಬಳಲುವಿರಿ.ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಇಷ್ಟ ಪಡುವಿರಿ ಆರೋಗ್ಯದ ವಿಚಾರವಾಗಿ ಜಾಗ್ರತೆ ವಹಿಸಬೇಕು. ಕೆಲವು ವಿಚಾರಗಳಲ್ಲಿ ಅನ್ಯರೊಂದಿಗೆ ಮನಸ್ತಾಪ ಉಂಟಾಗಬಹುದು ಸ್ತ್ರೀ ಸುಖ ಗೃಹಸುಖಾದಿ ಹಾನಿ ಮಾನಸಿಕ ಅಶಾಂತಿ ಶತ್ರು ಪೀಡೆ, ರೋಗಭಯ ಕಾಣಿಸಲಿದೆ. ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವು ಔಕೂಲನಾಗಿ ವಿವಾಹ ಶುಭ ಶೋಭಾನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಉತ್ತಮ ಕಾಲವಾಗಿರುತ್ತದೆ.
ಮೀನ :ಗುರುವು ಈ ವರ್ಷ ಪಂಚಮದಲ್ಲಿ ಸಂಚರಿಸುವುದರಿಂದ ದೈವ ಬಲವಿರುತ್ತದೆ. ಗೃಹದಲ್ಲಿ ಶುಭ ಕಾರ್ಯಗಳು ನಡೆಯುವುದು. ಸಾಂಸಾರಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯಿದೆ. ನೂತನ ವೃತ್ತಿ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ಮನೆ ಅಥವಾ ಹೊಸ ಪರಿಸರಕ್ಕೆ ಹೋಗಬೇಕಾಗುವುದು. ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು. ಮಕ್ಕಳಿಂದ ಸಂತೋಷ ಸಿಗಲಿದೆ. ಕೆಲವು ಸಮಯದಿಂದ ನಡೆಯದೆ ಬಾಕಿ ಇರುವ ಕಾರ್ಯಗಳು ನಡೆಯಲು ಅನುಕೂಲ ಸಮಯವಾಗಿದೆ. ಶನಿ ಶಾಂತಿ ಸುಬ್ರಹ್ಮಣ್ಯ ಸೇವೆ ಗಣಪತಿ ಸೇವೆ ವಿಷ್ಣು ಸೇವೆ ಶಿವ ಸೇವೆ ಯಥಾ ಶಕ್ತಿ ನಡೆಸುವುದರಿಂದ ಶುಭವಾಗಲಿದೆ.



































