ಮಾರುವೇಷದಲ್ಲಿ ಪತಿಯ ಕೊಲೆಗೆ ಯತ್ನಿಸಿದ ಪತ್ನಿ

Picture of RB NEWS

RB NEWS

Bureau Report

ಮಾರುವೇಷದಲ್ಲಿ ಪತಿಯ ಕೊಲೆಗೆ ಯತ್ನಿಸಿದ ಪತ್ನಿ

ಬಂಟ್ವಾಳ: ಮಾರುವೇಷದಲ್ಲಿ ಬಂದ ಮಹಿಳೆಯೋರ್ವರು ತನ್ನ ಪತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಬಿ.ಸಿ.ರೋಡ್ ನಲ್ಲಿ ನಡೆದಿದೆ‌.

ಬಿಸಿರೋಡ್ ನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ.

ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯ ಮಾಲಕ ಕೃಷ್ಣ ಕುಮಾ‌ರ್ ಸೋಮಯಾಜಿ ಗಾಯಗೊಂಡಿದ್ದು, ಪ್ರಕರಣದ ಆರೋಪಿ ಅವರ ಪತ್ನಿ ಜ್ಯೋತಿ ಸೋಮಯಾಜಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ರಾತ್ರಿ ವೇಳೆ ಏಕಾಏಕಿ ಪತಿಯ ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಗೆ ಬುರ್ಖಾ ಧರಿಸಿ ಬಂದ ಪತ್ನಿ ಜ್ಯೋತಿ ಸೋಮಯಾಜಿ ಅವರು ಅಂಗಡಿಯ ಕ್ಯಾಶ್ ಕೌಂಟರಿನಲ್ಲಿದ್ದ ಪತಿಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ತಕ್ಷಣ ಆರೋಪಿ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದ್ದು ಹೆಚ್ಚಿನ ವಿವರ ತಿಳಿದುಬಂದಿಲ್ಲ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top