ಗರ್ಭಿಣಿಯರಿಗೆ ಹಾಗೂ ಹಿರಿಯ ನಾಗರಿಕ ಸಂಚಾರಕ್ಕೆ ಅಪಾಯಕಾರಿಯಾದ ರಸ್ತೆ
ಕಾರ್ಕಳ : ಅಮೃತ (ಜಲ)ಯೋಜನೆಯು ಕಾರ್ಕಳ ನಾಗರಿಕರ ಪಾಲಿಗೆ ವಿಷವಾಗಿ ಪರಿಣಮಿಸಿದ್ದು, ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಚಳುವಳಿ ಆರಂಭಿಸಿದ್ದಾರೆ.
ಮೇ-ಜೂನ್ ತಿಂಗಳ ಅವಧಿಯಲ್ಲಿ ಕಾರ್ಕಳ ನ್ಯಾಯಾಲಯ ರಸ್ತೆ, ತೆಳ್ಳಾರ್ ರಸ್ತೆಗಳಲ್ಲಿ ಅಮೃತ ಯೊಇಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾರ್ಯ ಆರಂಭಿಸಲಾಗಿತ್ತು.
ಸಮರ್ಪಕವಾಗಿ ಇದ್ದ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆದು ಹಾಕಿ ಪೈಪ್ ಅಳವಡಿಸಿ ಹೊಂಡವನ್ನು ಮುಚ್ಚಲಾಗಿತ್ತೇ ಹೊರತು ಮಾನವನ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲಕರವಾಗಿ ರಸ್ತೆಯ ಗುಂಡಿ ಮುಚ್ಚಿ ಜಲ್ಲಿ ಹೊದಿಸುವ ಕಾಮಗಾರಿ ನಡೆಸದೇ ಹೋದುದರಿಂದ ಅಳಿದ ಉಳಿದ ರಸ್ತೆಯಲ್ಲೂ ಹೊಂಡ-ಗುಂಡಿ ನಿರ್ಮಾಣಕ್ಕೆ ಕಾರಣವಾಗಿತ್ತು.







































