ಗರ್ಭಿಣಿಯರಿಗೆ ಹಾಗೂ ಹಿರಿಯ ನಾಗರಿಕ ಸಂಚಾರಕ್ಕೆ ಅಪಾಯಕಾರಿಯಾದ ರಸ್ತೆ

Picture of RB NEWS

RB NEWS

Bureau Report

ಕಾರ್ಕಳ : ಅಮೃತ (ಜಲ)ಯೋಜನೆಯು ಕಾರ್ಕಳ ನಾಗರಿಕರ ಪಾಲಿಗೆ ವಿಷವಾಗಿ ಪರಿಣಮಿಸಿದ್ದು, ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಚಳುವಳಿ ಆರಂಭಿಸಿದ್ದಾರೆ.

ಮೇ-ಜೂನ್ ತಿಂಗಳ ಅವಧಿಯಲ್ಲಿ ಕಾರ್ಕಳ ನ್ಯಾಯಾಲಯ ರಸ್ತೆ, ತೆಳ್ಳಾರ್ ರಸ್ತೆಗಳಲ್ಲಿ ಅಮೃತ ಯೊಇಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾರ್ಯ ಆರಂಭಿಸಲಾಗಿತ್ತು.

ಸಮರ್ಪಕವಾಗಿ ಇದ್ದ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆದು ಹಾಕಿ ಪೈಪ್ ಅಳವಡಿಸಿ ಹೊಂಡವನ್ನು ಮುಚ್ಚಲಾಗಿತ್ತೇ ಹೊರತು ಮಾನವನ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲಕರವಾಗಿ ರಸ್ತೆಯ ಗುಂಡಿ ಮುಚ್ಚಿ ಜಲ್ಲಿ ಹೊದಿಸುವ ಕಾಮಗಾರಿ ನಡೆಸದೇ ಹೋದುದರಿಂದ ಅಳಿದ ಉಳಿದ ರಸ್ತೆಯಲ್ಲೂ ಹೊಂಡ-ಗುಂಡಿ ನಿರ್ಮಾಣಕ್ಕೆ ಕಾರಣವಾಗಿತ್ತು.

ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸಂಬಂಧ ಪಟ್ಟ ಇಲಾಖಾಧಿಕಾರಿಗಳ ಹಾರಿಕೆ ಉತ್ತರವೂ ಕೇಳಿಬಂತಾದರೂ ಜನಪ್ರತಿನಿಧಿಗಳು ಮಾತ್ರ ಖಡಕ್ ಆಗಿ ತಮ್ಮ ನಿಲುವು ಹೇಳದೇ ಹೋದುದರಿಂದ ಸಮಸ್ಸೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ರೋಸಿ ಹೋದ ನಾಗರಿಕರು.‌..


ಅಮೃತ ಯೋಜನೆಯಡಿಯಲ್ಲಿ ರಸ್ತೆ ಅಗದು ಹಾಕಿರುವುದರಿಂದ ರಸ್ತೆ ಪೂರ್ತಿ ಕೆಸರುಮಯವಾಗಿದೆ.
ಇದರಿಂದ ಕೆರಳಿದ ನಾಗರಿಕರು ಇದೀಗ ತಮ್ಮ ಹೋರಾಟವನ್ನು ವಿನೂತನ ರೀತಿಯಲ್ಲಿ ಆರಂಭಿಸಿದ್ದಾರೆ.
ಬ್ಯಾನರ್ ಅಳವಡಿದ್ದು, ಗರ್ಭಿಣಿ ಹಾಗೂ ಹಿರಿಯ ನಾಗರಿಕ ಸಂಚಾರಕ್ಕೆ ರಸ್ತೆ ಅಪಾಯಕಾರಿ ಎಂದು ಉಲ್ಲೇಖಿಸಿ ಎಚ್ಚರಿಕೆ ನೀಡಲಾಗಿದೆ.

ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಕಾಮಗಾರಿ ವಹಿಸಿದ ಕಂಟ್ರಾಕ್ಟರ್ ದಾರರಿಂದ ಗುಣಮಟ್ಟದ ರಸ್ತೆ ನಿರ್ಮಿಸಬೇಕಾಗಿದೆ.
ಸಾವಿನ ಘಟನೆಗಾಗಿ ಕಾಯದೇ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳುವುದು ಅತ್ಯಗತ್ಯ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top