ರೈತನು ಕಾಯುತ್ತಿರುವ ಮಳೆಯ ದಾರಿಯನು
“ರೈತನು ಕಾಯುತ್ತಿರುವ ಮಳೆಯ ದಾರಿಯನು”/
ಮುಂಗಾರು ಬಿತ್ತನೆಗೆ ಭೂಮಿ ಸ್ವಚ್ಛಗೊಳಿಸಿದನು/
ಸತತ ಬಿಡದ ಮುಂಗಾರು ಮಳೆಯನು/
ಬೀಜ ಬಿತ್ತಲು ಬರು ವೇಳೆಕಾಯುತಿರುವನು //{೦೧}//
ಪಕ್ಷಿಗಳು ಆಕಾಶದಲ್ಲಿ ಕುಣಿಯುತ ಮಳೆಯಲ್ಲಿ/
ಸೊಗಸಾದ ಹಾಡುತ ಇಂಪಾದ ರಾಗದಲ್ಲಿ/
ಕುಣಿದ ಕುಪ್ಪಳಿಸಿದ ಸಂಭ್ರಮ ಸಡಗರದಲ್ಲಿ/
ಸೊಬಗಿನ ಪ್ರಕೃತಿ ನಾಚಿಕೆ ಆನಂದದಲ್ಲಿ//{೦೨}//
ಬರದಿಂದ ಸಾಗಿದೆ “ಮುಂಗಾರು ಮಳೆ”/
ತುಂತುರು ಹನಿಗಳಿಂದ ಕೂಡಿದ ಮಳೆ/
ಕಿಚಿ ಪಿಚಿ ಕೆಸರದಿಂದ ಕೂಡಿದ ಮಳೆ/
ಜಿಟಿ ಜಿಟಿ ಸೂಸುವ ಗಾಳಿಯ ಮಳೆ/
ತಂಪಾದ ಪ್ರಕೃತಿ ಸೊಬಗಿನ ಮಳೆ//{೦೩}//
ಮಕ್ಕಳು ಮಳೆ ನೋಡುವುದು ಸಡಗರ/
ಬೀದಿ ವ್ಯಾಪಾರಿಗಳಿಗೆ ಇದೆಂಥ ಬೇಸರ/
ನನ್ನಂತಕವಿ ಮನಸ್ಸುಗಳಿಗೆ ಸಂತಸದ ಅಗರ/
ಸೂಸುವ ಹನಿಗಳ ನೆನಪು ಸುಮಧುರ//{೦೪}//

✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ,






































