ಸಾಣೂರು ಮುರತಂಗಡಿ ರಾ.ಹೆ-169 ಸರ್ವಿಸ್ ರಸ್ತೆ ಬದಿ ಭೂಕುಸಿತ : “ಆರ್.ಬಿ.ನ್ಯೂಸ್” ವರದಿಗೆ ಸ್ಪಂದನೆ : ಜಲ್ಲಿ ಹಾಕಿ ತಾತ್ಕಾಲಿಕ ಪರಿಹಾರ

Picture of RB NEWS

RB NEWS

Bureau Report

ಕಾರ್ಕಳ : ರಾ. ಹೆ 169 ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪ್ರಶಾಂತ್ ಕಾಮತ್ ರವರ ಮನೆಯ ಮುಂಭಾಗದ ಸರ್ವಿಸ್ ರಸ್ತೆ ಬದಿಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.

ಈ ಕುರಿತು ಆರ್ .ಬಿ.ನ್ಯೂಸ್ ಸಮಗ್ರ ವರದಿ ಪ್ರಕಟಿಸಿದ ಬಳಿಕ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ವಿಶೇಷ ಭೂಸ್ವಾದಿನಾಧಿಕಾರಿ ಮಹಮ್ಮದ್ ಇಸಾಕ್ ,ಕಾರ್ಕಳ ತಹಶೀಲ್ದಾರ್ ಪ್ರದೀಪ್, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ , ತಾಪಂ ಕಚೇರಿ ವ್ಯವಸ್ಥಾಪಕ ಹರೀಶ್ ಕೆ.ಬಿ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಅಭಿವೃದ್ಧಿ ಅಧಿಕಾರಿ ಮಧು ಎಂಸಿ , ಸಾಣೂರು ಗ್ರಾಮಕರಣಿಕ ಸಂಗಮೇಶ್ ಮೊದಲಾದವರು ಸ್ಥಳ ಪರಿಶೀಲನೆ ನಡೆಸಿದವರಲ್ಲಿ ಪ್ರಮುಖರು.

ಗುತ್ತಿಗೆದಾರ ಕಂಪನಿಯ ಕನ್ ಸ್ಟ್ರಕ್ಚರ್ ಮ್ಯಾನೇಜರ್ ಬಾಲಾಜಿ* ಯವರನ್ನು ಸ್ಥಳಕ್ಕೆ ಕರೆಯಿಸಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಆರ್.ಬಿ.ನ್ಯೂಸ್‌ ವರದಿಯ ಪರಿಣಾಮ

ದಿನಂಪ್ರತಿ ಮಳೆ ಸುರಿಯುತ್ತಿರುವುದರಿಂದ ಮಣ್ಣು ಕೊಚ್ಚಿಕೊಂಡು ಹೋಗಿರುವಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಕಾರ್ಯ ಪ್ರವೃತ್ತರಾದ ಗುತ್ತಿಗೆದಾರ ಕಂಪನಿಯು ಸಣ್ಣ ಜಲ್ಲಿತುಂಡುಗಳು ಮತ್ತು ಜೆಲ್ಲಿ ಹುಡಿಯನ್ನು ಮಣ್ಣು ಕುಸಿದಿರುವ ಸ್ಥಳಕ್ಕೆ ಹಾಕಿ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುತ್ತಾರೆ.

ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಸುರಿಯುತ್ತಿರುವ ಭಾರಿ ಮಳೆಗೆ ಜಲ್ಲಿ ಹುಡಿ ಕೊಚ್ಚಿ ಹೋಗಿ, ಒಂದೆರಡು ದಿನಗಳಲ್ಲಿ ಮತ್ತೆ ಮೊದಲಿನಂತೆಯೇ ಮಳೆಯ ನೀರಿಗೆ ಮಣ್ಣು ಕೊಚ್ಚಿಕೊಂಡು ಹೋಗಿ ಅಪಾಯಕಾರಿ ಸ್ಥಿತಿಗೆ ಮರಳಲಿದೆ. ಆದುದರಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಅಗತ್ಯ ಇದೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ ಮಾಜಿ ಸಾಣೂರು ಗ್ರಾಪಂ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top