ಆರ್. ಬಿ.ನ್ಯೂಸ್ ವರದಿಗೆ ಸ್ವಂದನೆ : ರಾ.ಹೆದ್ದಾರಿ ಭೂಕುಸಿತ: ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಕಾರ್ಕಳ : ರಾ ಹೆ 169: ಸಾಣೂರು ಮುರತಂಗಡಿ ಸರ್ವಿಸ್ ರಸ್ತೆ ಬದಿ ಭೂಕುಸಿತ : ಬಾಯ್ತೆರೆದ ಮೃತ್ಯುಕೂಪ?! ಎಂಬ ಶೀರ್ಷಿಕೆಯಡಿಯಲ್ಲಿ ಆರ್. ಬಿ.ನ್ಯೂಸ್ ಜೂನ್ 10ರಂದು ಸಚಿತ್ರ ವರದಿ ಪ್ರಕಟಿಸಿ ಉಡುಪಿ ಜಿಲ್ಲಾಡಳಿತಕ್ಕೆ ಎಚ್ಚರಿಸುವಂತೆ ಮಾಡಿತು.



ಘಟನಾ ಸ್ಥಳಕ್ಕೆ ಜೂ. 11ರಂದು ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಈಗಾಗಲೇ ನೀಡಿರುವ ನಿರ್ದೇಶನದನ್ವಯ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ಇರುವ ಕುರಿತು ತರಾಟೆಗೆ ತೆಗೆದುಕೊಂಡಿದ್ದು, ತುರ್ತು ಕ್ರಮ ಕೈಗೊಳ್ಳಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿರುತ್ತಾರೆ.
ಒಂದು ವೇಳೆ ಕ್ರಮವಹಿಸದೆ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂ ಸ್ವಾಧೀನ ಅಧಿಕಾರಿ ಮೊಹಮ್ಮದ್ ಇಸಾಕ್, ತಹಶೀಲ್ದಾರ್ ಪ್ರದೀಪ್, ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ರಾವ್. ತಾಲೂಕ್ ಪಂಚಾಯಿತಿ ಕಚೇರಿ ವ್ಯವಸ್ಥಾಪಕರಾದ ಹರೀಶ್ ಕೆ.ಬಿ. ಪಂಚಾಯಿತಿ ಪಿಡಿಒ ಮಧು ಎಂ ಸಿ. ಕಂದಾಯ ನಿರೀಕ್ಷಕ ಶಿವಪ್ರಸಾದ್, .ಗ್ರಾಮ ಆಡಳಿತ ಅಧಿಕಾರಿ ಸಂಗಮೇಶ್ ಜೊತೆಗಿದ್ದರು.






























