ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ.) ಬೆದ್ರ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇವರ ವತಿಯಿಂದ ಪುಸ್ತಕ ವಿತರಣೆ
ಮೂಡುಬಿದಿರೆ : ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ.) ಬೆದ್ರ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇವರ ವತಿಯಿಂದ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪ್ರಾಥಮಿಕ ಶಾಲೆ ಧರೆಗುಡ್ಡೆಯ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ 57,000 ರೂಪಾಯಿ ಮೌಲ್ಯದ ಬರೆಯುವ ನೋಟ್ ಬುಕ್ ಗಳನ್ನು ಉಚಿತವಾಗಿ ವಿತರಿಸಲಾಯಿತು.


ಮೂಲ್ಕಿ- ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ನೋಟ್ ಬುಕ್ ವಿತರಿಸಿ, ಮಾತನಾಡಿ, ಕರಾವಳಿ ಕೇಸರಿ ಟ್ರಸ್ಟ್ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕ ಸ್ಥಾಪಕಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ಅವರ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆಯನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದು, ಅನಾರೋಗ್ಯದಲ್ಲಿ ಇರುವವರಿಗೆ ಸಹಾಯಧನವನ್ನು ನೀಡುತ್ತಾ ಇಲ್ಲಿಯವರೆಗೆ ಟ್ರಸ್ಟ್ 2000 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಿರುವುದು ಅತ್ಯಂತ ಸಂತೋಷದಾಯಕ ವಿಚಾರ ಎಂದು ಸಮಾಜಮುಖಿ ಕೆಲಸದ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು.
ಕರಾವಳಿ ಕೇಸರಿ ಸೇವಾ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ದರೆಗುಡ್ಡೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ಬೆಲೋಟ್ಟು, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಮಧುರ, ಧರೆಗುಡ್ಡೆ ಗ್ರಾಮಪಂಚಾಯತ್ ನ ಉಪಾಧ್ಯಕ್ಷೆ ನಳಿನಿ, ದರೆಗುಡ್ಡೆ ಪಂಚಾಯತ್ ಸದಸ್ಯರು, ಉದ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಕೊಡುಗೈ ದಾನಿ ಆರ್ ಆರ್ ಫ್ಯಾಶನ್ ನ ಮಾಲಕ ರಾಜೇಶ್ ಕೊಟ್ಯಾನ್, ಸದಾನಂದ ಶೆಟ್ಟಿ ಮುನಿರಾಜ್ ಹೆಗ್ಡೆ ಉಪಸ್ಥಿತರಿದ್ದರು. ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ದೇವಾಡಿಗ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಮೀರಾ ಡಯಾಸ್ ವಂದನಾರ್ಪಣೆ ಮಾಡಿದರು. ಗಣೇಶ್ ಅಳಿಯೂರು ನಿರೂಪಣೆ ಮಾಡಿದರು.






































