ಕಾರ್ಕಳ: ಕೋಟಕ್ ಇನ್ಸುರೆನ್ ವಿಮಾ ಕಚೇರಿ ಉದ್ಘಾಟನೆ

Picture of RB NEWS

RB NEWS

Bureau Report

ಕಾರ್ಕಳ: ಕೋಟಕ್ ಇನ್ಸುರೆನ್ಸ್ ಸಂಸ್ಥೆಯ ವಿಮಾ ಕಚೇರಿ ಮತ್ತು ತರಬೇತಿ ಕೇಂದ್ರವು ಪಟ್ಟಣದ ಅನಂತಶಯನ ವೃತ್ತದ ಬಳಿಯ ಅನಂತಪದ್ಮನಾಭ ಟವರ್ಸ್‌ನ ಪ್ರಥಮ ಮಹಡಿಯಲ್ಲಿ ಆರಂಭಗೊಂಡಿತು.

ಸಂಸ್ಥೆಯ ಪ್ರಮುಖರಾದ ಫ್ರಾಂಕ್ಲಿನ್ ಫೆರ್ನಾಂಡಿಸ್ ಮಾತನಾಡಿ, ಕೋಟಕ್ ಇನ್ಸುರೆನ್ಸ್ ಖಾಸಗಿ ವಿಮಾ ವಲಯದಲ್ಲಿ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ ಹಣಕಾಸು ಉಳಿತಾಯ, ಆರ್ಥಿಕ ರಕ್ಷಣೆ ಎಂಬ ಆಶಯಗಳೊಂದಿಗೆ ಜನರ ಮೆಚ್ಚುಗೆ ಗಳಿಸಿದೆ ಎಂದರು.

ಕಾರ್ಕಳದಲ್ಲಿ ಕೋಟಕ್ ಇನ್ಸುರೆನ್ಸ್ ಉತ್ತಮ ಸೇವೆ ನೀಡುತ್ತಿದ್ದು, ಹಲವು ವಿಮಾದಾರರನ್ನು ಹೊಂದಿದೆ. ಇದೀಗ ಉತ್ತಮ ಕಚೇರಿ, ಹಲವು ಸೌಕರ್ಯ ಗಳೊಂದಿಗೆ ವಿಮಾ ಸಲಹೆಗಾರರಿಗೆ ತರಬೇತಿ ವ್ಯವಸ್ಥೆ ಇದೆ ಎಂದರು.

ಕೋಟಕ್ ಇನ್ಸುರೆನ್ಸ್‌ನ ಪ್ರಕಾಶ್ ಶೆಣೈ, ಸಂದೀಪ್ ನಾಯಕ್ ಮತ್ತು ಕಾರ್ಕಳ ವಿಮಾ ವ್ಯವಸ್ಥಾಪಕಿ ಗೀತಾ ಶೆಣೈ, ಪ್ರಮುಖರಾದ ದಿವ್ಯಾ ಡಿ. ಪೈ, ದಿನೇಶ್ ಪೈ, ಸ್ಟೀಫನ್ ವಲೇರಿಯನ್ ಗೋಮ್ಸ್ ಹರೀಶ್ಚಂದ್ರ ನಾಯಕ್, ಉಮೇಶ್ ಆಚಾರ್ಯ ಭಾಗವಹಿಸಿದ್ದರು.

ಶೈಕ್ಷಣಿಕ ಸಾಧನೆಗೈದ ಸ್ವಸ್ತಿ ಕಾಮತ್, ಮನೋಜ್ ಕಾಮತ್ ಅವರನ್ನು ಸಮ್ಮಾನಿಸಲಾಯಿತು. ರಾಜೇಂದ್ರ ಭಟ್ ನಿರೂಪಿಸಿದರು. ಅನಂತಕೃಷ್ಣ ಶೆಣೈ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top