ಏಕ್ ಪೇಡ್ ಮಾ ಕಿ ನಾಮ್ -ವಿಶ್ವ ಪರಿಸರ ದಿನಾಚರಣೆ
ಕಾಂತಾವರ : ಪರಿಸವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಕೇವಲ ಜೂನ್ ಐದು ರಂದು ಪರಿಸರ ದಿನವನ್ನು ಆಚರಿಸದೆ ಪ್ರತಿ ದಿನವನ್ನು ಪರಿಸರ ದಿನವನ್ನಾಗಿ ಆಚರಿಸೋಣ ಎಂದು ಪ್ರಕೃತಿ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಜಯಾ ಶೆಣೈ ಹೇಳಿದರು.
ಪ್ರಕೃತಿ ನ್ಯಾಷನಲ್ ಸ್ಕೂಲಿನಲ್ಲಿ ‘ಏಕ್ ಪೇಡ್ ಮಾ ಕಿ ನಾಮ್’ ಎನ್ನುವ ಶೀರ್ಷಿಕೆ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ಜಾಗೃತಿಯನ್ನು ಮೂಡಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಒಂದೊಂದು ಗಿಡವನ್ನು ನೆಟ್ಟು, ಅದರ ಮಹತ್ವವನ್ನು ತಿಳಿದುಕೊಳ್ಳುವುದರ ಜೊತೆಗೆ 6ನೇ ತರಗತಿ ವಿದ್ಯಾರ್ಥಿನಿ ಆಶಾ ಸಾಲು ಮರದ ತಿಮ್ಮಕ್ಕನ ವೇಷ ಧರಿಸಿ ಅವರ ಪರಿಸರ ಪ್ರೇಮದ ಒಲವನ್ನು ಪರಿಚಯಿಸಿದರು.
ವಿಜ್ಞಾನ ಶಿಕ್ಷಕಿ ಸೌಮ್ಯ ಸ್ವಾಗತಿಸಿದರು. ಅರುಣಾ ವಂದಿಸಿದರು.ಸುಪ್ರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.






























