ಜೆ.ಇ.ಇ.(ಬಿ. ಆರ್ಕ್ )2025 ಅರ್ಹತಾ ಪರೀಕ್ಷೆ ಫಲಿತಾಂಶ : ಪ್ರಗತಿ ಸಾಧಿಸಿದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ

Picture of RB NEWS

RB NEWS

Bureau Report

ಕಾರ್ಕಳ: ದೇಶದ ಪ್ರತಿಷ್ಠಿತ ಆರ್ಕಿಟೆಕ್ಚರ್ 

ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ

 ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ.(ಬಿ. ಆರ್ಕ್ )2025 ಅರ್ಹತಾ ಪರೀಕ್ಷೆಯ ಫಲಿತಾಂಶ 

ಪ್ರಕಟವಾಗಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ

 ಮೋಹಿತ್-99.4093359 ಪರ್ಸೆಂಟೈಲ್ ನೊಂದಿಗೆ

  ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಎರಡರಲ್ಲೂ ರಾಷ್ಟ್ರಕ್ಕೆ 

ಕೆಟಗರಿ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿ ವಿಶಿಷ್ಟಸಾಧನೆಗೈದಿದ್ದಾರೆ.  

ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ (AIR

101), ಟಿ ಪ್ರದೀಪ್ (AIR  117),ಮೋನಿಕಾ ಕೆ ಎ(AIR

140), ಸುಧಾಂಶು ಪಾಲೇಕರ್ (AIR

268), ಪ್ರತಿಕ್ ಎನ್ ಶೆಟ್ಟಿ (AIR  362),

 ತ್ರಿಶ್ಲಾ ಗಾಂಧಿ (AIR 423), ರೋಹಿತ್ ಜಿ ಬಿ -(AIR

461), ಸಾಚಿ ಶಿವಕುಮಾರ್ -(AIR 484), 

ಚಿನ್ಮಯಿ ಆರ್-(AIR 519), ಮನೋಜ್ ಎಂ ಆರ್ –

(AIR   846), ಚೇತನ್ ಗೌಡ -(AIR

867), ಆಕಾಶ್ ದೇವಾಡಿಗ -(AIR

980) ಕೆಟಗರಿ ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ್ದಾರೆ.

500 ರ‍್ಯಾಂಕ್ ಒಳಗೆ 10 ಮಂದಿ, 1000 ರಾಂಕ್ ಒಳಗೆ 14 ಮಂದಿ ವಿದ್ಯಾರ್ಥಿಗಳು 

ತೇರ್ಗಡೆ ಪಡೆಯುವ ಮೂಲಕ ರಾಷ್ಟ್ರದ ಪ್ರತಿಷ್ಠಿತ 

ಸಂಸ್ಥೆಗಳಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಐ.ಐ.ಟಿ. 

ಹಾಗೂ ಇನ್ನಿತರ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ 

ಬಿ. ಆರ್ಕ್ ಕೋರ್ಸಿಗೆ ಪ್ರವೇಶ ಪಡೆಯಲು 

ಈ ಪರೀಕ್ಷೆಗೆ ಕ್ರಿಯೇಟಿವ್ ಸಂಸ್ಥೆಯು ವಿದ್ಯಾರ್ಥಿಗಳಿಗೆ

 ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯು

 ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ 

ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ 

ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ

 ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ 

ವರ್ಗದವರು ಹಾಗೂ ಜೆ.ಇ.ಇ. ಬಿ. ಆರ್ಕ್ ಪರೀಕ್ಷೆಯ

 ಸಂಯೋಜಕರಾದ  ಸುಮಂತ್ ದಾಮ್ಲೆ,

 ರಕ್ಷಿತ್ ಬಿ.ಎಸ್, ಶರತ್ ರವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top