ಸಾರ್ವಜನಿಕರಿಗೆ ಸಮಸ್ಸೆ ಮುಂದಿಟ್ಟ ಏರ್ಟೆಲ್
ಕಾರ್ಕಳ: ನಗರ ವ್ಯಾಪ್ತಿಯ ಕಾಳಿಕಾಂಬಾ ದೇವಸ್ಥಾನದ ಮುಖ್ಯ ರಸ್ತೆ ಬದಿ ಏರ್ಟೆಲ್ ಕಂಪೆನಿಯವರು ಪೈಪ್ ಲೈನ್ ಹಾಕಲು ತೆಗೆದ ಗುಂಡಿಯ ಕಾಮಗಾರಿಯ ವೇಳೆಗೆ ಯಾವುದೇ ಮುಂಜಾಗ್ರತೆ ವಹಿಸದ ಪರಿಣಾಮವಾಗಿ ವಾಹನ ಸವಾರರು ಹಾಗೂ ಚಾಲಕರು ಗಾಯಗೊಳ್ಳುತ್ತಿದ್ದು, ವಾಹನ ಜಖಂ ಗೊಳ್ಳುತ್ತಿವೆ.
ಕಾಮಗಾರಿಗೆ ಮುನ್ನೆಚ್ಚರಿಕೆ ನೀಡದೆ ಬ್ಯಾರಿಕೆಡ್ ಹಾಕದೆ ಕಾಮಗಾರಿ ನಡೆಸುವುದು ಈ ಅವಾಂತರಕ್ಕೆ ಕಾರಣವೆಂಬ ಆರೋಪ ಕೇಳಿಬರುತ್ತಿವೆ.
ಕಾರ್ಕಳ ಪುರಸಭೆಯ ಅನುಮತಿ ಪತ್ರ ಇದೆಯೋ ಇಲ್ಲವೋ ಎಂಬುವುದಕ್ಕಿಂತ ಮುಂಗಾರು ಪೂರ್ವದಲ್ಲಿ ಸುರಿಯುತ್ತಿರುವ ಜಡಿಮಳೆಯಲ್ಲಿ ರಸ್ತೆಯಲ್ಲಿ ಹೊಂಡ ತೆಗೆಯುತ್ತಿರುವುದು ಎಷ್ಟು ಸರಿ ಎಂಬುವುದು ಸ್ಥಳೀಯರ ವಾದವಾಗಿದೆ.
ಸ್ಥಳೀಯಾಡಳಿತದ ಮುತುವರ್ಜಿ ಶೂನ್ಯ. ಏರ್ಟೆಲ್ ಕಂಪನಿಯ ಈ ಅವಾಂತರ ಕಾಮಗಾರಿಗೆ ವಾಹನವೊಂದು ಹೊಂಡದಲ್ಲಿ ಉದುಗಿದೆ. ಈ ದೃಶ್ಯಾವಳಿ ಕಾರ್ಕಳ ನಗರದ ಕಾಳಿಕಾಂಬಾ ದೇವಸ್ಥಾನದ ಬಳಿ ನಡೆದಿದೆ.
ಸ್ಥಳೀಯಾಡಳಿತವಾಗಿರುವ ಕಾರ್ಕಳ ಪರಸಭೆಯು ಈ ಬಗ್ಗೆ ಕ್ರಮ ಕೈ ಗೊಳ್ಳಬೇಕಾಗಿ ಕಾರ್ಕಳ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಆಗ್ರಹಿಸಿದ್ದಾರೆ.






























