ಭಾಗ-21
ಕಲ್ಲಡ್ಕ ಇಸ್ಮಾಯಿಲ್ ಕೊಲೆ: ಆರೋಪಿಗಳು ಸಿಗಲಿಲ್ಲ
ತಾ. 19-2-77 ಚುನಾವಣೆಯ ಮತದಾನದ ದಿನವಾಗಿದ್ದು, ಈ ಕೇಸಿನ ಆರೋಪಿಗಳಲ್ಲಿ ಕೆಲವರು ಮಂಗಳೂರಲ್ಲಿ ಚುನಾವಣೆಗೆ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಬಂದ ಕೂಡಲೇ ನಾನು ಮಂಗಳೂರು ಕಡೆಗೆ ಹೋಗಿ ಆರೋಪಿಗಳ ಬಗ್ಗೆ ತಪಾಸಣೆ ನಡೆಸಿದೆ. ಆದರೆ ಆರೋಪಿಗಳು ಸಿಗಲಿಲ್ಲ’ವೆಂದರು.
ಅಂದು ರಾತ್ರಿ ಸುಮಾರು 9 ಗಂಟೆಯ ಸಮಯ ದಕ್ಷಿಣಾಮೂರ್ತಿಯವರು ಈ ಕೇಸಿನ 2ನೇ ಆರೋಪಿ ಪುರಂದರ ಭಟ್ಟರನ್ನು ಬೆಳಗಾಂ ಸೆಂಟ್ರಲ್ ಜೈಲ್ ಪಕ್ಕದಿಂದ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರುಪಡಿಸಿದರೆಂದು ಹೇಳಿದ ಸಿದ್ದಲಿಂಗಪ್ಪನವರು ಆಗ ನಾನು ಪುರಂದರ ಭಟ್ಟರನ್ನೂ ದಸ್ತಗಿರಿ ಮಾಡಿದೆ’ ಎಂದು ತಿಳಿಸಿದರು.
ಪುರಂದರ ಭಟ್ಟರ ಹೇಳಿಕೆ
ಪುರಂದರ ಭಟ್ಟರು ಸ್ವ ಇಚ್ಛೆಯಿಂದ ಒಂದು ಹೇಳಿಕೆಯನ್ನು ಕೊಡಲು ಬಯಸಿದ ಮೇರೆಗೆ ಅದನ್ನು ಬರೆದುಕೊಳ್ಳಲಾಯಿತೆಂದು ಹೇಳಿದ ತನಿಖಾಧಿಕಾರಿಯವರು ಆ ಹೇಳಿಕೆಯಲ್ಲಿ ಉಳಿದ ಬೈಂಡಿಂಗ್ ವಯರ್ , ನೈಲಾನ್ ಹಗ್ಗ, ಉಳಿದ ಬಿಳಿ ಪೈಂಟ್, ಉಳಿದ ಹುರಿಹಗ್ಗ, ಉಳಿದ ಖಾಕಿ ಬಟ್ಟೆ, ಹೊಲಿಗೆ ಯಂತ್ರದಭಾಗಗಳು ಮೊದಲಾದವುಗಳನ್ನು ಪುರಂದರ ಭಟ್ಟರು ಒಪ್ಪಿದ್ದರೆಂದು ಹೇಳಿದರು.
ತಾ. 21-2-77ರಂದು ಪುರಂದರ ಭಟ್ಟರು ತಮ್ಮನ್ನು ಮತ್ತು ಸಾಕ್ಷಿಗಳನ್ನು ಅವರ ಹೇಳಿಕೆಯಲ್ಲಿ ಹೇಳಿದ ಸ್ಥಳಗಳಿಗೆ ಕರೆದುಕೊಂಡು ಹೋದುದನ್ನೂ, ಅಲ್ಲಿ ದೊರಕಿದ ವಸ್ತುಗಳ ವಿವರಗಳನ್ನೂ, ಆ ಸಂಬಂಧ ತಾವು ನಡೆಸಿದ ಪ್ರಯತ್ನಗಳನ್ನೂ ಅವರು ವಿವರಿಸಿದರು.
ತಾ. 26-2-77ರಂದು 1ನೇ ಆರೋಪಿ ಶ್ರೀಧರ ಭಟ್ಟರ ದೇಹದ ಅಳತೆಗಳನ್ನು ಟೈಲರ್ ಮೂಲಕ ತೆಗೆದುಕೊಳ್ಳಲಾಯಿತಲ್ಲದೆ ಅವರ ಲಿಖಿತ ಮಾದರಿ ಕೈಬರಹವನ್ನು ಪಡೆಯಲಾಯಿತೆಂದೂ, ತಾ. 27-2-77ರಂದು ಆರೋಪಿ ಪುರಂದರ ಭಟ್ಟರ ದೇಹದ ಅಳತೆಗಳನ್ನು ಪಡೆಯಲಾಯಿತಲ್ಲದೆ, ಆ ಬಳಿಕ ಸಾಕ್ಷಿ ಮುತ್ತಪ್ಪ ಪೂಜಾರಿ ಮತ್ತಿತರರ ಸಂಗಡ ಬಡಕಾಯಿಕೊಂಬಿಗೆ ಹೋಗಿ ಅಲ್ಲಿ ಪುರಂದರ ಭಟ್ಟರ ಮನೆಯನ್ನು ಹುಡುಕಾಡಿ ಈ ಕೇಸಿನಲ್ಲಿ ಈ ಮೊದಲೇ ಗುರುತಿಸಲಾದ ತಾ. 4-6-75ನೇ ತಾರೀಕಿನ, 24-8-75ನೇ ತಾರೀಕಿನ ಹಾಗೂ ತಾ. 20-8-75ನೇ ತಾರೀಕಿನ ಪತ್ರಗಳನ್ನು, ಹೆಲ್ಮೆಟನ್ನು, ಜರ್ಕಿನ್ನ್ನು ರೆಕಾರ್ಡ್ ಮೂಲಕ ಸ್ವಾಧೀನಪಡಿಸಲಾಯಿತೆಂದೂ ಅವರು ತಿಳಿಸಿದರು.
ತಾ. 28-2- 77ರಂದು ರಾಜಗೋಪಾಲ ಹೆಬ್ಬಾರರು ಹಾಜರುಮಾಡಿದ ಡೈರಿಯನ್ನು ರೆಕಾರ್ಡ್ ಮೂಲಕ ಸ್ವಾಧೀನಪಡಿಸಲಾಯಿತಲ್ಲದೆ ಬೆಳ್ತಂಗಡಿಗೆ ಬಂದು ಅಲ್ಲಿ ಎಚ್.ಎಸ್. ಕರ್ಣಯ್ಯ, ಕೆ.ವಿ. ಕರುಣಾಕರನ್ ಮತ್ತು ನಿರಂಜನ್ ನರಾಯಣ ಅವರ ಹೇಳಿಕಸಗಳನ್ನೂ ಪಡೆಯಲಾಯಿತೆಂದೂ ಅವರು ಹೇಳಿದರು. ತಾ. 4-3-77ರಂದು ಯಲಹಂಕದ ಏರ್ಫೋರ್ಸ್ ಕೇಂದ್ರಕ್ಕೆ 2ನೇ ಆರೋಪಿ ಪುರಂದರ ಭಟ್ಟರ ಜೊತೆಯಲ್ಲಿ ತಾವು ಹೋಗಿ ಅಲ್ಲಿ ದೋಬಿಗಳಾದ ನಾರಾಯಣ, ದೊರೈರಾಜ್, ರೂಮ್ಬಾಯ್ ನಂಜಪ್ಪನವರ ಹೇಳಿಕೆಗಳನ್ನು ಪಡೆಯಲಾಯಿತೆಂದೂ ಅವರು ನ್ಯಾಯಾಲಯದಲ್ಲಿ ಹೇಳಿದರು. ತಾ. 6-3-77ರಲ್ಲಿ 2ನೇ ಆರೋಪಿ ಪುರಂದರ ಭಟ್ಟರನ್ನು ಬಂಟ್ವಾಳಕ್ಕೆ ಕಳುಹಿಸಿ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಅವರಿಗೆ ರಿಮಾಂಡ್ ಕೂಡಾ ಕೊಡಲಾಯಿತೆಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ದಸ್ತಗಿರಿ ಈ ಕೇಸಿನಲ್ಲಿ ಸ್ವಾಧೀನಪಡಿಸಲಾದ ವಸ್ತುಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಯಿತೆಂದೂ, ತಾ. 10-3-787ರ ತನಕ ಈ ಕೇಸಿನ ಇತರ ಆರೋಪಿಗಳ ಬಗ್ಗೆ ತಪಾಸಣೆ ಮಾಡಲಾಯಿತೆಂದೂ ತಿಳಿಸಿದ ಅವರು, ತಾ. 12-3-77ರಂದು ಈ ಕೇಸಿನ ಆರೋಪಿಗಳಲ್ಲಿ ಒಬ್ಬರಾದ ಈಶ್ವರ ಭಟ್ಟರು ಮತ್ತು ಇತರ ಮೂವರು ಬೆಂಗಳೂರಿನಲ್ಲಿ ಇದ್ದಾರೆಂಬ ವರ್ತಮಾನ ತಿಳಿ ಕೂಡಲೇ ವಯರ್ಲೆಸ್ ಮೆಸೇಜ್ ಮೂಲಕ ದಕ್ಷಿಣಾಮೂರ್ತಿಗೆ ಅವರನ್ನು ಬೆೆಂಗಳೂರಲ್ಲಿ ಹುಡುಕುವಂತೆ ಆದೇಶ ಕಳುಹಿಸಿದೆ. ಅದರಂತೆ ದಕ್ಷಿಣಾಮೂರ್ತಿಯವರು ತಾ. 17-3-77ರಂದು 3ನೇ ಆರೋಪಿ ಈಶ್ವರ ಭಟ್ಟರನ್ನು ನನ್ನ ಮುಂದೆ ಹಾಜರುಪಡಿಸಿದರಲ್ಲದೆ ಅವರನ್ನು ದಸ್ತಗಿರಿ ಮಾಡಿದ ಬಗ್ಗೆ ಗಣೇಶ್ ಲಾಡ್ಜ್ನಲ್ಲಿದ್ದ ರಿಜಿಸ್ಟರ್ಗಳು ಹಾಗೂ ಇತರ ರೆಕಾರ್ಡ್ಗಳನ್ನೂ ಹಾಜರುಪಡಿಸಿದರು. ಈ ಕೇಸಿನಲ್ಲಿ ಆರೋಪಿಯಾಗಿರುವ ಭೋಜರಾಜ ಸೇಮಿತರನ್ನು ಬೆಂಗಳೂರು ಮ್ಯಾಜೆಸ್ಟ್ರೇಟರ ಮುಂದೆ ಹಾಜರುಮಾಡಲಾಗಿ ಅವರು ರಿಮಾಂಡ್ನಲ್ಲಿದ್ದಾರೆಂದು ತಿಳಿಸಿದರು’ ಎಂದು ವಿವರಿಸಿದರು. ಅಷ್ಟು ಮಾತ್ರವಲ್ಲದೆ 3ನೇ ಮತ್ತು 5ನೇ ಆರೋಪಿಗಳು ಸ್ವಇಚ್ಛೆಯಿಂದ ಕೊಟ್ಟ ಹೇಳಿಕೆಗಳನ್ನು ತನ್ನ ಮುಂದೆ ಹಾಜರುಪಡಿಸಿದಾಗ, ಈಶ್ವರ ಭಟ್ಟರ ತಮ್ಮ ಹೇಳಿಕೆಯಲ್ಲಿ ತಿಳಿಸಿದಂತೆ ತನ್ನನ್ನು ಹಾಗೂ ಸಾಕ್ಷಿಗಳನ್ನು ಕರೆದೊಯ್ದು, ಬೂದಿ ರಾಶಿಯನ್ನು ತೋರಿಸಿದರೆಂದೂ, ಅದರಲ್ಲಿ ದೊರಕಿದ ಅರ್ಧ ಹೊತ್ತಿದ್ದ ಶರ್ಟ್ ಕಾಲರ್, ಒಂದು ಗೆರೆಯ ಬಟ್ಟೆ ಮತ್ತಿತರ ವಸ್ತುಗಳನ್ನು ಹಾಜರುಪಡಿಸಿದಾಗ ಅವುಗಳನ್ನು ರೆಕಾರ್ಡು ಮೂಲಕ ಸ್ವಾಧೀನಪಡಿಸಲಾಯಿತು ಎಂದೂ ತಿಳಿಸಿದರು.
ತಾ. 14-2-77ರಂದು ಮಧ್ಯಾಹ್ನ 2.30 ಗಂಟೆಯ ಸಮಯ ಸಾಕ್ಷಿಗಳು ಮತ್ತು ನನ್ನನ್ನು 1ನೇ ಆರೋಪಿ ಶ್ರೀಧರ ಭಟ್ಟರು ಜೀಪಿನಲ್ಲಿ ನೆರಿಯಕ್ಕೆ ಕರೆದುಕೊಂಡು ಹೋದರು. ಅಲ್ಲಿ ಹೆಬ್ಬಾರರ ಜೀಪನ್ನು (ಎಂವೈಜಿ 3501) ತೋರಿಸಿದರು. ಆ ಜೀಪನ್ನು ಪರೀಕ್ಷಿಸಿ ಮಹಜರು ಪ್ರಕಾರ ಸ್ವಾಧೀನಪಡಿಸಲಾಯಿತು. ಆ ಬಳಿಕ ಹೆಬ್ಬಾರ್ ಚಂದ್ರಶೇಖರ ಭಟ್ಟ, ಜಯರಾಜ ಭಟ್ಟ, ಅಬ್ದುಲ್ ಮುನಾಫ್ ಮೊದಲಾದವರ ಹೇಳಿಕೆಗಳನ್ನು ಪಡೆದುಕೊಂಡೆ. ಜೀಪನ್ನು ಹಾಗೂ ಶ್ರೀಧರ ಭಟ್ಟರನ್ನು ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟೆ. ತಾ. 15-2-77ರಂದು 1ನೇ ಆರೋಪಿ ಶ್ರೀಧರ ಭಟ್ಟರನ್ನು ರಿಮಾಂಡ್ ರಿಪೋರ್ಟ್ನ ಸಹಿತ ಬಂಟ್ವಾಳ ಮ್ಯಾಜೆಸ್ಟ್ರೇಟ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟೆ. ಶ್ರೀಧರ ಭಟ್ಟರಿಗೆ ತಾ. 23-2-77ರವರೆಗೆ ಪೊಲೀಸ್ ಕಸ್ಟಡಿ ಕೊಟ್ಟರು’ ಎಂದು ವಿವರಿಸಿದರು.
ಆ ಬಳಿಕ ಶ್ರೀಧರ ಭಟ್ಟರು ನಮ್ಮನ್ನು ಪುತ್ತೂರಿನಲ್ಲಿರುವ ಮೋಡರ್ನ್ ಮೆಕ್ಯಾನಿಕ್ ವರ್ಕ್ ಶಾಪ್ಗೆ ಕರೆದುಕೊಂಡು ಹೋದರು. ಅಲ್ಲಿ ಎಂಇಎಕ್ಸ್ 850 ಮೋಟಾರ್ ಸೈಕಲ್ ತೋರಿಸಿದರು. ಅದನ್ನು ಮಹಜರು ಮೂಲಕ ಸಾಕ್ಷಿಗಳ ಮುಂದೆ ಸ್ವಾಧೀನಪಡಿಸಿಕೊಳ್ಳಲಾಯಿತು. ಅಲ್ಲಿಂದ ಶ್ರೀಧರ ಭಟ್ಟರು ನಮ್ಮನ್ನು ಬಿ.ಸಿ.ರೋಡಿಗೆ ಕರೆದುಕೊಂಡು ಹೋಗಿ ಅಲ್ಲಿ ರಾಜಾ ಸೈಕಲ್ ಅಂಗಡಿಯ ಯಾದವ ಎಂಬವರನ್ನು ತೋರಿಸಿದರು. ಅವರ ಹೇಳಿಕೆಯನ್ನು ಪಡೆದೆ. ಆ ಬಳಿಕ 1ನೆ ಆರೋಪಿಯು ಅಟೋರಿಕ್ಷಾ ಚಾಲಕ ಅಬೂಬಕರ್ ಹಾಗೂ ಅವರ ರಿಕ್ಷಾ ತೋರಿಸಿದರು. ಸದ್ರಿ ಅಬೂಬಕರ್ ಅವರ ಹೇಳಿಕೆಯನ್ನು ಪಡೆದೆ. ಅಲ್ಲಿಂದ ಎಂ.ಎ. ಕೃಷ್ಣ ನಾಯಕ್ ಪೆಟ್ರೋಲ್ ಬಂಕ್ನಲ್ಲಿ ವಿಜಯ ಕುಮಾರರ ಹೇಳಿಕೆ ಪಡೆದುಕೊಂಡೆ’ ಎಂದು ಸಿದ್ದಲಿಂಗಪ್ಪ ವಿವರಿಸಿದರು.
ಜಾವಾ ಮೋಟಾರ್ ಸೈಕಲ್ ಸ್ವಾಧೀನ ಎಂವೈಜಿ 3501 ಜೀಪನ್ನು ಎಫ್ಎಸ್ಎಲ್ ಬೆಂಗಳೂರಿಗೆ ತನಿಖೆ ಮಾಡುವರೆ ಕಳುಹಿಸಿಕೊಟ್ಟ ಇತರ ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳ ತಪಾಸಣೆಗೆ ಕಳುಹಿಸಿ ಬಳಿಕ ತಾ. 16-2-77ರಲ್ಲಿ ಶ್ರೀಧರ ಭಟ್ಟರ ಜತೆಯಲ್ಲಿ ನಾನು ಸುಳ್ಯಕ್ಕೆ ಹೋದುದಾಗಿ ತಿಳಿಸಿದ ಅವರುಅಲ್ಲಿ ಸಾಕ್ಷಿ ಪಿ.ಕೆ. ಮೂಸಾ ಮತ್ತು ಗಿರಿಯಪ್ಪ ಅವರನ್ನು ಬರಕೊಂಡ ಮೇಲೆ ಶ್ರೀಧರ ಭಟ್ಟರು ನಮ್ಮೆಲ್ಲರನ್ನು ತೋಡಿಕಾನದಲ್ಲಿರುವ ಶ್ರೀನಿವಾಸ ಭಟ್ಟರ ಮನೆಗೆ ಕರೆದೊಯ್ದರು. ಅಲ್ಲಿ ಒಂದು ಜಾವಾ ಮೋಟಾರ್ ಸೈಕಲ್ ಎಂಇಎಕ್ಸ್ 1911 ತೋರಿಕೊಟ್ಟರು. ಅದನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡೆ. ಅಲ್ಲಿಂದ ನಾರಾಯಣ ಭಟ್ಟರ ಮನೆಗೆ ಹೋದೆವು. ಅವರ ಮನೆ ಜಪ್ತಿ ಮಡಿದಾಗ ಹಲವು ಕಾಗದ ಪತ್ರಗಳು ಸಿಕ್ಕಿದವು. ಅವುಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡೆವು. ಅಲ್ಲಿಂದ 1ನೇ ಆರೋಪಿ ಶ್ರೀಧರ ಭಟ್ಟರು ಪೆರಾಜೆಯಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋದರು. ಅವರ ಮನೆ ಹುಡುಕಾಡಿದಾಗ ಈ ಕೇಸಿನಲ್ಲಿ ಈಗಾಗಲೇ ಗುರುತಿಸಲಾದ ಎಕ್ಸಿಬಿಟ್ 62(10-9-76) ಕಾಗದವನ್ನು ಸ್ವಾಧೀನಪಡಿಸಿಕೊಂಡೆ. ಅಲ್ಲಿನ ಕೆಲಸದವರ ಹೇಳಿಕೆ ಪಡೆದುದಲ್ಲದೆ ಶ್ರೀನಿವಾಸ ಭಟ್ಟ, ನಾರಾಯಣ ಭಟ್ಟ ಮತ್ತು ಆನಂದ ರಾವ್ ಅವರ ಹೇಳಿಕೆಗಳನ್ನು ಕಡೆದೆ. ಅನಂತರ ಶ್ರೀಧರ ಭಟ್ಟರ ಜೊತೆ ಬಂಟ್ವಾಳಕ್ಕೆ ಮರಳಿದೆವು’ ಎಂದು ತಿಳಿಸಿದರು.
ತಾ. 18-2-77ರಂದು ಶ್ರೀಧರ ಭಟ್ಟರ ಜೊತೆ ಸುಳ್ಯಕ್ಕೆ ಬಂದು ಅಲ್ಲಿ ಕೆ.ಎ. ಅಬೂಬಕರ್, ವೈ. ಎಂ. ಬಿದ್ದಪ್ಪ ಅವರನ್ನು ಬರಮಾಡಿಕೊಂಡ ಮೇಲೆ ಶ್ರೀಧರ ಭಟ್ಟರು ನಮ್ಮೆಲ್ಲರನ್ನು ಮೋಹನ ಭಟ್ಟರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಜೀಪು ಎಂವೈಎಕ್ಸ್ 3821ನ್ನು ತೋರಿಸಿದ ಪ್ರಕಾರ ಅದನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಯಿತು. ಮೋಹನ ಭಟ್ಟರ ಹೇಳಿಕೆಗಳನ್ನು ಪಡೆಯಲಾಯಿತು. ಸುಳ್ಯಕ್ಕೆ ಬಂದದಾಗ ಬಿ. ಭಾಸ್ಕರ ಮೆಕ್ಯಾನಿಕ್ ಅವರನ್ನು ಶ್ರೀಧರ ಭಟ್ಟರು ತೋರಿಸಿಕೊಟ್ಟರು. ಅವರ ಹೇಳಿಕೆಯನ್ನು ಪಡೆದೆ. ಆ ಬಳಿಕ ಬಂಟ್ವಾಳಕ್ಕೆ ಮರಳಿದೆ. ಸಾಕ್ಷಿದರರಾದ ಮುತ್ತಪ್ಪ ಪೂಜಾರಿ ಹಾಗೂ ಅಬ್ದುಲ್ ಖಾದರ್ ಅವರನ್ನು ಬರಮಾಡಿಕೊಂಡಾಗ ನಮ್ಮೆಲ್ಲರನ್ನು ಶ್ರೀಧರ ಭಟ್ಟರು ಉಪ್ಪಿನಂಗಡಿಗೆ ಕರೆದೊಯಯ್ದು ಅಲ್ಲಿಂದ ನಿಡಿಂಗಲ್ ಬ್ರಿಜ್ಗೆ ಕರೆದುಕೊಂಡು ಹೋದರು. ಅಲ್ಲಿ ನಂಬರ್ ಪ್ಲೇಟ್ ಎಸೆದ ಸ್ಥಳವನ್ನು ತೋರಿಸಿದರು. ಆ ಬಗ್ಗೆ ಮಹಜರು ಮಾಡಿದೆ. ಆಗ ರಾತ್ರಿ ಸಮಯವಾದ ಕಾರಣ ಹುಡುಕಲು ಸಾಧ್ಯವಾಗಿಲ್ಲ. ಅಲ್ಲಿ ಕಾವಲು ಮಾಡಲು ಪೊಲೀಸರನ್ನು ನಿಲ್ಲಿಸಿ ಬಂಟ್ವಾಳಕ್ಕೆ ಮರಳಿದೆವು’ ಎಂದವರು ವಿವರಿಸಿದರು. ನಂಬರ್ ಪ್ಲೇಟ್ ತಪಾಸಣೆ ತಾ. 19-2-77ರಲ್ಲಿ ನಿಡಿಂಗಲ್ ಬ್ರಿಜ್ಗೆ ವಾಪಸ್ ಹೋಗಿ ಅಲ್ಲಿ ನಂಬರ್ ಪ್ಲೇಟ್ ಹುಡುಕಲಾಯಿತು. ಆದರೆ ನಂಬರ್ ಪ್ಲೇಟ್ ಸಿಗಲಿಲ್ಲ. ಆ ಬಗ್ಗೆ ಮಹಜರು ಮಾಡಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಿಕಿಯವರಿಗೆ ಮಂಗಳೂರಿಗೆ ಹೋಗಿ ಕಸ್ಟಮ್ಸ್ ಅಸಿಸ್ಟೆಂಟ್ ಕಲೆಕ್ಟರ್ರನ್ನು ಕಂಡು ಮೆಟಲ್ ಡಿಟೆಕ್ಟರ್ ತರುವಂತೆ ಆದೇಶ ನೀಡಿದೆ. ಸಿದ್ದಿಕಿಯವರು ರಾತ್ರಿ ಸಮಯ ಮೆಟಲ್ ಡಿಟೆಕ್ಟರ್ ತಂದರು. ಮಾರನೇ ದಿನ 2-2-77ರಂದು ಸಬ್ ಇನ್ಸ್ಪೆಕ್ಟರ್ ಚೆಯ್ಯಣ್ಣ ಮೂಲಕ ಮೆಟಲ್ ಡಿಟೆಕ್ಟರ್ ಕೊಟ್ಟು ನಿಡಿಂಗಲ್ ಬ್ರಿಜ್ಗೆ ಕಳುಹಿಸಿ ಅಲ್ಲಿ ಕಾದುಕೊಂಡಿರುವ ಹಿರೇಮಠ್ ಅವರಿಗೆ ನಂಬರ್ ಪ್ಲೇಟ್ ಹುಡುಕಲು ಆದೇಶ ವೀಡಿದೆ’ ಎಂದು ಸಿದ್ದಲಿಂಗಪ್ಪ ಅವರು ಹೇಳಿದರು.
ತಾ. 20ರಂದು ರಾತ್ರಿ ಸಮಯ ಹಿರೇಮಠ್ ಅವರು ಮೆಟಲ್ ಡಿಟೆಕ್ಟರ್ ಸಹಾಯದಿಂದ ನಿಡಿಂಗಲ್ ಬ್ರಿಜ್ ಬಳಿಯಲ್ಲಿ ಸಿಕ್ಕಿದ ನಂಬರ್ ಪ್ಲೇಟ್ನ್ನು , ಜಾಲಿಯನ್ನು, ಮಹಜರನ್ನು ತಮ್ಮ ಮುಂದೆ ಹಾಜರುಪಡಿಸಿದರೆಂದು ಅವರು ತಿಳಿಸಿದರು.
ತಾ. 20-2-77ರಂದು ದಸ್ತಗಿರಿ ಮಾಡಿದ ಪುರಂದರ ಭಟ್ಟರವರು ಸ್ವ ಇಚ್ಛೆಯಿಮದ ಒಂದು ಹೇಳಿಕೆಯನ್ನು ಬರೆದುಕೊಟ್ಟಿದ್ದರೆಂದು, ಅದರಲ್ಲಿ ಅವರು ಒಪ್ಪಿದ ಪ್ರಕಾರ ಕೆಲವು ಕಡೆಗಳಿಗೆ ತಮ್ಮನ್ನು ಕರೆದೊಯ್ದು ಅವರು ಹೇಳಿಕೆಯಲ್ಲಿ ತಿಳಿಸಿದ ವಸ್ತುಗಳನ್ನು ತೋರಿಸಿದರೆಂದೂ ಅವರು ಹೇಳಿದರು.
ತಾ. 21-2-77ರಂದು ಸಾಕ್ಷಿಯವರಾದ ಮುತ್ತಪ್ಪ ಹೂಜಾರಿ ಮತ್ತು ಅಬ್ದುಲ್ ಖಾದರ್ರವರನ್ನು ಬರಮಾಡಿಸಿದ ಬಳಿಕ 2ನೇ ಆರೋಪಿ ಪುರಂದರ ಭಟ್ಟರು ನಮ್ಮೆಲ್ಲರನ್ನು ಅವರ ಮನೆಯಿರುವ ಬಡಕಾಯಿಕೊಂಬಿಗೆ ಕರೆದುಕೊಂಡು ಹೋದರು. ಅಲ್ಲಿ ಅವರು ಬೈಂಡಿAಗ್ ವಯರ್, ನೈಲಾನ್ ಹಗ್ಗ, ಹುರಿ ಹಗ್ಗ, ಬಿಳಿ ಪೈಂಟ್ ಡಬ್ಬಿ, ಖಾಕಿ ಬಟ್ಟೆ, ಉಷಾ ಹೊಲಿಗೆ ಯಂತ್ರದ ಭಾಗಗಳನ್ನು ಹಾಜರುಪಡಿಸಿದರು. ಅವುಗಳನ್ನು ಒಂದು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡೆ’ ಎಂದು ವಿವರಿಸಿದರು.
ಅನಂತರ ಅವರು ನಂಬರ್ ಪ್ಲೇಟು ಹಾಕಿದ ಬಾವಿಯನ್ನು ತೋರಿಸಿದರು. ಆ ಬಳಿಕ ಪುರಂದರ ಭಟ್ಟರ ಮನೆಯನ್ನು ಹುಡುಕಿದಾಗ ಅಲ್ಲಿ ಖಾಕಿ ಬಟ್ಟೆ, ಹಾಗೂ ಇತರ ಬಟ್ಟೆಬರೆಗಳು ಸಿಕ್ಕಿದವು. ಅವುಗಳನ್ನು ಸ್ವಾಧೀನಪಡಿಸಿಕೊಂಡೆ ಹಾಗೂ ಮಹಜರು ತಯಾರಿಸಿದೆ’ ಎಂದು ಹೇಳಿ ಬಟ್ಟೆ ಮೇಲಿದ್ದ ದೋಬಿ ಮಾರ್ಕನ್ನು ವಿವರಿಸಿದರು.
ತಾ. 22-2-77ರಲ್ಲಿ ಸೈಂಟಿಫಿಕ್ ಆಫೀಸರ್ ಅವರನ್ನು ಬೆಂಗಳೂರಿನಿAದ ಬರುವಂತೆ ಆದೇಶ ಕಳುಹಿಸಿದೆ. ನಾನು ಪುರಂದರ ಭಟ್ಟರ ಪತ್ನಿ ಪರಮೇಶ್ವರಿ ಮತ್ತಿತರರ ಹೇಳಿಕೆ ಪಡಕೊಂಡೆ. ಪುರಂದರ ಭಟ್ಟರ ಬಾವಿಯಿಂದ ನೀರು ಆರಿಸಲು ಫಯರ್ ಸ್ಟೇಶನ್ನಿಂದ ಫಯರ್ ಇಂಜಿನ್ ತರುವಂತೆ ಆದೇಶಿಸಿದೆ. ಬಡಕಾಯಿಕೊಂಬಿಗೆ ಹೋಗಿ ನೀರು ಆರಿಸಲು ಪ್ರಯತ್ನಪಟ್ಟಾಗ ಪಂಪ್ ಹಾಳಾದ ಕಾರಣ ಅಷ್ಟರಲ್ಲಿ ನಿಲ್ಲಿಸಬೇಕಾಯಿತು. ಆ ಬಳಿಕ ಮಾರನೆ ದಿನ ಇನ್ನೊಂದು ಪಂಪನ್ನು ಫಯರ್ ಸ್ಟೇಶನ್ನಿಂದ ತರಿಸಿ ನಂಬರ್ ಪ್ಲೇಟನ್ನು ತಪಾಸಣೆ ಮಾಡಲಾಯಿತು. ಆ ಕೆಲಸವನ್ನು ಸಿಓಡಿ ಸರ್ಕಲ್ ಇನ್ಸ್ಪೆಕ್ಟರ್ ಮಾಯಾರಂಗಯ್ಯ ಅವರಿಗೆ ವಹಿಸಿಕೊಟ್ಟೆ’ ಎಂದು ಹೇಳಿದರು.
ಪೈಂಟ್ ಉಜ್ಜಿದ ಕುರುಹು
ತಾ. 23-2-77ರಂದು ಸೈಂಟಿಫಿಕ್ ಆಫೀಸರ್ ಕೆಂಚಪ್ಪನವರು ಬಡಕಾಯಿಕೊಂಬಿಗೆ ಕರೆದುಕೊಂಡು ಹೋಗಲಾಯಿತು. ಅವರು ಮನೆಯನ್ನು ಪರೀಕ್ಷೆ ಮಾಡಿದಾÀಗ ಕಿಟಕಿಯಲ್ಲಿದ್ದ ಬಿಳಿ ಪೈಂಟ್ ಹಾಗೂ ಕೆಳಗೆ ಬಿಳಿ ಪೈಂಟ್ ಉಜ್ಜಿದ ಕುರುಹು ಕಂಡೆವು. ಅಂದು ಶಂಕರ ನಾರಾಯಣ ಭಟ್ಟ, ರಾಮಣ್ಣ ನಯ್ಕ ಮೊದಲಾದವರ ಹೇಳಿಕೆ ಪಡೆಯಲಾಯಿತು. ಕೆಂಚಪ್ಪನವರು ಮೇಲೆ ಹೇಳಿದ ಪೈಂಟಿನ ಬಗ್ಗೆ ಫೊಟೋ ತೆಗೆಯಬೇಕೆಂದು ತಿಳಿಸಿದ ಮೇರೆಗೆ ಬೆಂಗಳೂರಿನಿಂದ ಫೊಟೋಗ್ರಾಫರನ್ನು ಕಳುಹಿಸುವಂತೆ ಆದೇಶ ಕಳುಹಿಸಿದೆ’ ತಾ. 24-2-77ರಲ್ಲಿ 2ನೇ ಆರೋಪಿ ಪುರಂದರ ಭಟ್ಟರ ಜತೆಯಲ್ಲಿ ಸುಳ್ಯಕ್ಕೆ ಹೋಗಿ ಸಾಕ್ಷಿಯವರನ್ನು ಬರಮಾಡಿಸಿದೆ. ಆ ಬಳಿಕ ಪುರಂದರ ಭಟ್ಟರು ನಮ್ಮನ್ನು ತೋಡಿಕಾನಕ್ಕೆ ಕರೆದುಕೊಂಡು ಹೋದರು.ಅಲ್ಲಿ ಮೋಟಾರು ಸೈಕಲ್ ಎಂವೈಜಿ 397 ಅದನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಅಲ್ಲಿಂದ ಆಲೆಟ್ಟಿಗೆ ಹೋಗಿ ಅಲ್ಲಿ ಶಿವಪ್ಪ ಗೌಡ, ಗಂಗಮ್ಮ, ಲಲಿತ ಮೊದಲಾದವರ ಹೇಳಿಕೆಗಳನ್ನು ಪಡೆದೆ. ತಾ. 25-2-77ರಂದು ಬೆಂಗಳೂರಿನಿಂದ ಫೊಟೋಗ್ರಾಫರ್ ವೆಂಕಟರಾಜು ಅವರು ಬಂದರು. ಅವರು ಮತ್ತು ಕೆಂಚಪ್ಪ ಬಡಕಾಯಿಕೊಂಬಿಗೆ ಹೋಗಿ ಪೈಂಟಿನ ಫೊಟೊ ತೆಗೆದರು. ಅನಂತರ ಕೆಂಚಪ್ಪನವರು ಬಿಳಿ ಪೈಂಟನ್ನು ಕೆರೆದು ತೆಗೆದರು. ಅದನ್ನು ಪ್ಯಾಕ್ ಮಾಡಿ ಸೀಲ್ ಮಾಡಲಾಯಿತು’ ಎಂದರು.
1-3-77ರಲ್ಲಿ ಆರೋಪಿ ಪುರಂದರ ಭಟ್ಟರ ಜತೆ ಬೆಂಗಳೂರಿಗೆ ಹೋಗಿ ಅಲ್ಲಿ ಏರ್ ಫೋರ್ಸ್ನ ದೋಬಿಗಳು ಮತ್ತು ರೂಮ್ಬಾಯ್ ಅವರ ಹೇಳಿಕೆಗಳನ್ನು ಪಡೆದುದನ್ನು ಸಿದ್ದಲಿಂಗಪ್ಪ ವಿವರಿಸಿದರು.
ತಾ. 6-3-77ರಲ್ಲಿ ಆರೋಪಿ ಪುರಂದರ ಭಟ್ಟರನ್ನು ಬಂಟ್ವಾಳಕ್ಕೆ ಕಳುಹಿಸಿ ಅವರನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿದಾಗ ಅವರಿಗೆ ರಿಮಾಂಡ್ ಕೊಡಲಾಯಿತು ಎಂದು ತಿಳಿಸಿದರು.






































