
ಗುಪ್ತಾಂಗ ಪ್ರದರ್ಶನ : ಗ್ರಾ.ಪಂ.ಉಪಾಧ್ಯಕ್ಷ “ಪದ್ಮ”ನಾಭ ವಿರುದ್ಧ ಕ್ರಮ ಕೈಗೊಂಡ ಬಿಜೆಪಿ !
ಗುಪ್ತಾಂಗ ಪ್ರದರ್ಶನ : ಗ್ರಾ.ಪಂ.ಉಪಾಧ್ಯಕ್ಷ “ಪದ್ಮ”ನಾಭ ವಿರುದ್ಧ ಕ್ರಮ ಕೈಗೊಂಡ ಬಿಜೆಪಿ !
ವಿಟ್ಲ: ಇಕ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪಳ ಎಂಬಲ್ಲಿ ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಪಂಚಾಯತ್ ಉಪಾಧ್ಯಕ್ಷನ ಪದ್ಮನಾಭ ಸಫಲ್ಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಸೂಕ್ತ ಕ್ರಮ ಕೈ ಗೊಂಡ ಬಿಜೆಪಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಫಲ್ಯನನ್ನು ಪಕ್ಷದಿಂದ ಉಚ್ಚಾಟಿಸಿದೆ.
ಮಹಿಳೆಯೊಬ್ಬರ ಮನೆಗೆ ಹೋಗುವ ಸಂಪರ್ಕ ರಸ್ತೆಗೆ ಸ್ಥಳೀಯ ನಿವಾಸಿ ಪದ್ಮನಾಭ ಸಪಲ್ಯ ಎಂಬಾತ ಗೇಟ್ ಹಾಕಿ ಬೀಗ ಜಡಿದು ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತು ವಿಚಾರಿಸಲು ಹೋದ ಮಹಿಳೆಯ ಮುಂದೆಯೇ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ತನ್ನ ಚಡ್ಡಿ ಜಾರಿಸಿ ಗುಪ್ತಾಂಗವನ್ನು ತೋರಿಸಿ ವಿಕೃತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಘಟನಾ ಸಂಬಂಧ ಪದ್ಮನಾಭ ಸಪಲ್ಯ ವಿರುದ್ಧ ಮಹಿಳೆ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಪದ್ಮ”ನಾಭ ವಿರುದ್ಧ ಶಿಸ್ತುಕ್ರಮ ಕೈಗೊಂಡ ಬಿಜೆಪಿ

ಬಿಜೆಪಿ ಸದಸ್ಯ ಪದ್ಮನಾಭನ ವಿಕೃತ ಚೇಷ್ಟೆ, ಮಹಿಳೆಯೊಂದಿಗೆ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಚಡ್ಡಿ ಜಾರಿಸಿ ಮಹಿಳೆಗೆ ಗುಪ್ತಾಂಗ ತೋರಿಸಿದ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿಜೆಪಿ ಕಾರ್ಯಕರ್ತ ಪದ್ಮನಾಭ ಸಪಲ್ಯನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.
ಮಹಿಳೆಯ ಘನತೆ, ಗೌರವಕ್ಕೆ ಧಕ್ಕೆ ತಂದ ಆರೋಪ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಲ್ಲಿ ಪದ್ಮನಾಭ ಸಪಲ್ಯ ಉಚ್ಚಾಟನೆ ಮಾಡಲಾಗಿದೆ. ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲು ಸೂಚಿಸಲಾಗಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ದಯಾನಂದ ಶೆಟ್ಟಿ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.

































