ಸಾಣೂರು : ರಸ್ತೆ ಮಧ್ಯದಲ್ಲಿ ಬಸ್ಸು ಕಾಯಬೇಕಾದ ಶೋಚನೀಯ ಸ್ಥಿತಿ

Picture of RB NEWS

RB NEWS

Bureau Report

ಕಾರ್ಕಳ : ಮಂಗಳೂರು – ಕಾರ್ಕಳ ನಡುವೆ ಹಾದು ಹೋಗಿರುವ ರಾ. ಹೆ. 169 ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿಯಲ್ಲಿ ಪರಿಸರದಲ್ಲಿ ಬಸ್ಸು ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಯುವಂತಹ ಪರಿಸ್ಥಿತಿ‌ ಎದುರಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮುರತ್ತಂಗಡಿ ಪರಿಸರದಲ್ಲಿ ಇದ್ದ ಬಸ್ಸು ತಂಗುದಾಣ‌ ಕೆಡವವಾಗಿತ್ತು. ಈ ನಡುವೆ ಪ್ರಯಾಣಿಕರ ಸೌಜನ್ಯಕ್ಕಾದರೂ‌ ತಾತ್ಕಾಲಿಕವಾಗಿ ಬಸ್ಸು ತಂಗುದಾಣ ನಿರ್ಮಾಣಕ್ಕೂ ಮುಂದಾಗಿರಲಿಲ್ಲ.
-ಪರಿಣಾಮವಾಗಿ ಗ್ರಾಮಸ್ಥರು ಬೇಸಿಗೆಯಲ್ಲಿ ಪ್ರಖರ ಬಿಸಿಲಿಗೆ ಹಾಗೂ ಮಳೆಗಾಲದಲ್ಲಿ ಗಾಳಿ ಮಳೆಗೆ ಮೈಯೊಡ್ಡಿ ಬಸ್ಸಿಗಾಗಿ ಕಾಯುವ ದಯನೀಯ ಪರಿಸ್ಥಿತಿ ಎದುರು ನೋಡಿದ್ದರು.

ಇಚ್ಚಾಶಕ್ತಿ ಇಲ್ಲದ ಜನಪ್ರತಿನಿಧಿಗಳು
ಕೇವಲ ರಾಜಕೀಯದ ಮೇಲೆ ಮೋಹ ಇರುವ ಜನಪ್ರತಿನಿಧಿಗಳಿಗೆ ನಾಗರಿಕರ ಮೂಲಸೌಕರ್ಯ ಒದಗಿಸುವ ಬಗ್ಗೆ ಇಚ್ಛಾಶಕ್ತಿ ಕೊರತೆ‌ ಇದಂತಿದೆ. ಇವರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಬೇಜಾಬ್ದಾರಿತನಕ್ಕೆ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಗ್ರಾಮಸ್ಥರು ಹಲವೂ ಬಾರಿ ಈ ಎಲ್ಲಾ ಸಮಸ್ಸೆಗಳನ್ನು ಮುಂದಿಟ್ಟು ಹಲವು ಬಾರಿ ಶಾಸಕರು ,ಸಂಸದರು, ಜಿಲ್ಲಾಧಿಕಾರಿ ,ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ ಕಚೇರಿ ಕಚೇರಿ ಅಲೆದಾಡಿ ಪಾದರಕ್ಷೆ ಸವೇಸಿಕೊಂಡಿದ್ದಾರೆ. ಹೊರತು ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ.

ಮಳೆಗಾಲದೊಳಗಾಗಿ ಬಸ್ಸುತಂಗುದಾಣದ ಸ್ಥಳ ಗುರುತಿಸಿ ನಿರ್ಮಾಣ ಕಾರ್ಯ ಆರಂಭ ಮಾಡದಿದ್ದರೆ ಸಾಣೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮದ ಎಲ್ಲಾ ಸಂಘ-ಸಂಸ್ಥೆಗಳು, ಹೆದ್ದಾರಿ ಹೋರಾಟ ಸಮಿತಿ ರಸ್ತೆಗಿಳಿದು ಭಾರೀ ಪ್ರತಿಭಟನೆ ಮಾಡಬೇಕಾಗಿತೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top