ಕಾರ್ಕಳಕ್ಕೆ ಅಗಮಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಘ್ ಶೇಖಾವತ್
ಕಾರ್ಕಳ : ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಘ್ ಶೇಖಾವತ್ ಅವರು ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಆಗಮಿಸಿದರು.


ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು ಸಾಂಪ್ರದಾಯಿಕ ಸ್ವಾಗತ ನೀಡಿ ಸಚಿವರನ್ನು ಬರಮಾಡಿಕೊಂಡರು.ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್, ಮಹಾವೀರ್ ಜೈನ್, ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಆಂಟನಿ ಡಿಸೋಜಾ ನಕ್ರೆ , ಮಣಿರಾಜ ಶೆಟ್ಟಿ, ವ್ಯ. ಸೇ. ಸ. ಸಂಘ ನೆಲ್ಲಿಕಾರು ,ಅದರ ಅಧ್ಯಕ್ಷ ಜಯ ಕುಮಾರ್ ಮಾಪಾಲ್ , ಬಿಜೆಪಿ ಜಿಲ್ಲಾ ಮಹಿಳಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಮುಂತಾದ ಬಿಜೆಪಿ ಪ್ರಮುಖರು, ಪುರದ ನಾಗರಿಕ ಗಣ್ಯರು ಮತ್ತು ಉಡುಪಿ ಜಿಲ್ಲಾಧಿಕಾರಿ,ತಾಲ್ಲೂಕು ದಂಡಾಧಿಕಾರಿ,ಪುರಸಭಾಧಿಕಾರಿಗಳು ಸಚಿವರನ್ನು ಸ್ವಾಗತಿಸಿ ಬರಮಾಡಿಕೊಳ್ಳುವಲ್ಲಿ ಉಪಸ್ಥಿತರಿದ್ದರು.
ಕಾರ್ಕಳದ ಪ್ರಸಿದ್ಧ ತಾಣವಾಗಿರುವ ಆನೆಕೆರೆ ನಿಸರ್ಗಧಾಮಕ್ಕೆ ಮೊದಲು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಅಲ್ಲಿನ ಆನೆಕೆರೆ ಬಸದಿಗೆ ಭೇಟಿ ನೀಡಿದ ಸಚಿವರು ಬಸದಿ ನಿರ್ಮಾಣ ಮತ್ತು ಆನೆಕೆರೆ ಪರಿಸರದ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಕಳದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲ್ಲಿನ ಶಾಸಕರು ಮಾಡಿರುವ ಮನವಿಯಂತೆಯೆ ಎಲ್ಲ ರೀತಿಯ ಸಹಕಾರ ಮತ್ತು ಯೋಗ್ಯ ಮಟ್ಟದಲ್ಲಿ ಅನುದಾನ ಕೊಡುವ ಭರವಸೆ ವ್ಯಕ್ತಪಡಿಸಿದರು.
ಎರಡು ಹಂತಗಳಲ್ಲಿ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಅದಕ್ಕಾಗಿ 116ಕೋಟಿ ರೂಪಾಯಿಗಳ ಅನುದಾನವನ್ನು ಸಚಿವರು ಮಂಜೂರು ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಶಾಸಕ ವಿ .ಸುನಿಲ್ ಕುಮಾರ್ ತಿಳಿಸಿ, ಸಚಿವರಿಗೆ ಕೃತಜ್ಞತೆ ಹೇಳಿದರು.
ವಿ ಕೆ. ವಾಲ್ಪಾಡಿ












