ಸುರತ್ಕಲ್ ಫಾಝಿಲ್ ಕೊಲೆ ಆರೋಪಿಯ ಮರ್ಡರ್

Picture of RB NEWS

RB NEWS

Bureau Report

ಕೊಲೆಗೀಡಾದ ಸುಹಾಸ್ ಶೆಟ್ಟಿ

ಸುಹಾಸ್ ಶೆಟ್ಟಿ ಗ್ಯಾಂಗ್ ನಿಂದ ಕೊಲೆಗೀಡಾಗಿದ್ದ ಫಾಝಿಲ್

ಮಂಗಳೂರು : ಸುರತ್ಕಲ್‌ನ ಮುಹಮ್ಮದ್ ಫಾಝಿಲ್‌ನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿ ಕೊಲೆಗೈದ ಘಟನೆ ಬಜಪೆಯಲ್ಲಿ ನಡೆದಿದೆ.

ಸುಮಾರು 4ರಿಂದ 5 ಮಂದಿ ಇದ್ದ ತಂಡವು ಸಾರ್ವಜನಿಕರ ಎದುರಲ್ಲೇ ತಲವಾರಿನಿಂದ ದಾಳಿ ನಡೆಸಿರುವುದು ಮೊಬೈಲ್‌ನಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ.

ಪ್ರವೀಣ್ ನೆಟ್ಟಾರು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ಹತ್ಯೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಸುರತ್ಕಲ್​ನಲ್ಲಿ ಫಾಜಿಲ್ ಕೊಲೆ ನಡೆಯಿತು.  ಫಾಜಿಲ್ ಕೊಲೆಗೆ ಹಾಕಿದ ಸಂಚಿನ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ.‌

ಫಝಾಲ್ ಸುರತ್ಕಲ್

ಸುಹಾಸ್ ಶೆಟ್ಟಿ

ಆರೋಪಿ ಸುಹಾಸ್ ಅಭಿಷೇಕ್​ನೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಓರ್ವನನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡುತ್ತಾನೆ. 2022 ಜು.27ರಂದು ಸುರತ್ಕಲ್​ನ ಒಂದು ಕಡೆಯಲ್ಲಿ ಅಭಿಷೇಕ್ ಸುಹಾಸ್ ಉಳಿದವರನ್ನು ಸೇರಿಸಿಕೊಂಡು ಮಾತುಕತೆ ನಡೆಸಿ ಕೃತ್ಯಕ್ಕೆ ಕಾರಿನ ಅವಶ್ಯಕತೆ ಬಗ್ಗೆ ಹೇಳಿಕೊಂಡಿದ್ದಾರೆ. ಅದರಂತೆ ಮೋಹನ್ ಮತ್ತು ಗಿರಿಧರ್ ಮಧ್ಯಾಹ್ನದ ವೇಳೆಗೆ ಅಜಿತ್ ಕ್ರಾಸ್ತಾ ಅವರ ಕಾರನ್ನು 15 ಸಾವಿರ ರೂಪಾಯಿಗೆ ಡೀಲ್ ಮಾಡಿ ತರುತ್ತಾರೆ.

ಹತ್ಯೆ ಸಂಚಿನಂತೆ ಜು.27ರಂದು ಸಂಜೆ ಸುಹಾಸ್ ಗಿರಿಧರ್ ಮೋಹನ್ ಚರ್ಚೆ ನಡೆಸಿ ತಮಗೆ ಆಗದವರ ಹೆಸರಿನ ಪಟ್ಟಿ ತಯಾರಿಸುತ್ತಾರೆ. 28ರ ಬೆಳಗ್ಗೆ ಸುಹಾಸ್ ಮಾರಕಾಸ್ತ್ರಗಳನ್ನು ಸಿದ್ಧಪಡಿಸುತ್ತಾನೆ. ಅಂದು ಮತ್ತೆ ಚರ್ಚೆ ನಡೆಸಿದಾಗ ಹತ್ಯೆಗೆ ಫಾಜಿಲ್ ಹೆಸರನ್ನು ಫೈನಲ್ ಮಾಡುತ್ತಾರೆ. ನಂತರ ಫಾಜಿಲ್​ನ ಚಲನವಲನಗಳ ಮೇಲೆ ಆರೋಪಿಗಳು ನಿಗಾ ಇಡಲು ಆರಂಭಿಸಿದ್ದಾರೆ.

ಅಂದು ಸಂಜೆ ಆರು ಜನರು ಕಾರಿನಲ್ಲಿ ಬಂದು ಫಾಜಿಲ್​ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಸರಿಯಾದ ಸ್ಥಳದಲ್ಲಿ ಫಾಜಿಲ್ ಕಣ್ಣಿಗೆ ಬೀಳುತ್ತಿದ್ದಂತೆ ಸುಹಾಸ್, ಮೋಹನ್, ಅಭೀಷೇಕ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಪರಾರಿಯಾಗಿದ್ದಾರೆ. ಕೃತ್ಯದ ವೇಳೆ ಗಿರಿಧರ್ ಕಾರು ಚಾಲಕನಾಗಿದ್ದನು, ದೀಕ್ಷಿತ್ ಕಾರಿನಲ್ಲೇ ಕುಳಿತಿದ್ದನು, ಶ್ರೀನಿವಾಸ್ ಕೃತ್ಯ ನಡೆಸಿ ಪರಾರಿಯಾಗುವ ಸಂದರ್ಭದಲ್ಲಿ ಯಾರು ಕೂಡ ಅಡ್ಡಿ ಬರುಬಾರದೆಂದು ಕಾರಿನ ಬಳಿ ನಿಲ್ಲುತ್ತಾನೆ.

ಕೃತ್ಯ ನಡೆಸಿದ ಬಳಿಕ ಕಾರಿನಲ್ಲೇ ಪರಾರಿಯಾದ ಆರೋಪಿಗಳು, ಕಾರ್ಕಳಕ್ಕೆ ಹೋಗಿದ್ದಾರೆ. ಬೆಳ್ಮಣ್ ಸಮೀಪದ ಇನ್ನಾದ ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಬೇರೋಂದು ಕಾರಿನಲ್ಲಿ ಓಡಾಟ ನಡೆಸಿದ್ದರು.

ಅದಾಗ್ಯೂ ಬೇರೆಬೇರೆ ಕಡೆಗಳಲ್ಲಿ ಆರೋಪಿಗಳು ನೆಲೆಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ನಡುವೆ ಇಂದು ಬೆಳಗ್ಗೆ 2 ಗಂಟೆ ಸುಮಾರಿಗೆ ಪೊಲೀಸರಿಗೆ ಹಂತಕರ ಸುಳಿವು ಸಿಗುತ್ತದೆ. ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು ಉದ್ಯಾವರದಲ್ಲಿ ಬೆಳಗ್ಗೆ 5.30ರ ಸುಮಾರಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೃತ್ಯ ಎಸಗಿದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಸುಹಾಸ್ ಶೆಟ್ಟಿ (29) ಮೋಹನ್​ (26) ಗಿರಿಧರ್ (23) ಅಭಿಷೇಕ್ (21) ಶ್ರೀನಿವಾಸ್ (23) ದೀಕ್ಷಿತ್ (21) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಬಂಧಿತರೆಲ್ಲರೂ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ
ಮೋಹನ್ ವಿರುದ್ಧ ಸುರತ್ಕಲ್ ಮತ್ತು ಕಾವೂರಿನಲ್ಲಿ ಎರಡು ಪ್ರಕರಣಗಳು, ಸುರತ್ಕಲ್ ನಿವಾಸಿ ಗಿರಿಧರ್ ವಿರುದ್ಧ 2 ಪ್ರಕರಣಗಳು, ಕಾಟಿಪಳ್ಳ ನಿವಾಸಿ ಅಭಿಷೇಕ್ ವಿರುದ್ಧ ಸುರತ್ಕಲ್​ನಲ್ಲಿ 2 ಪ್ರಕರಣಗಳು, ಕಾಟಿಪಳ್ಳದ ನಿವಾಸಿ ಶ್ರೀನಿವಾಸ್ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ 1 ಸುರತ್ಕಲ್​ನಲ್ಲಿ 3 ಪ್ರಕಣಗಳು ಹಾಗೂ ದೀಕ್ಷಿತ್ ವಿರುದ್ಧ 3 ಪಕ್ರರಣಗಳು ದಾಖಲಾಗಿವೆ

ಬಜ್ಪೆ ನಿವಾಸಿ  ಸುಹಾಸ್ ಶೆಟ್ಟಿ ವಿರುದ್ಧ ಬಜ್ಪೆ ಮತ್ತು ಬೆಳ್ತಂಗಡಿಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, 2010ರಲ್ಲಿ ನಡೆದ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದನು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top