ಪರ್ಪಲೆ ಕ್ಷೇತ್ರ ಭಕ್ತ ಜನರ ಭಕ್ತಿಯ ಕ್ಷೇತ್ರವಾಗಿ ಬೆಳಗಲಿದೆ – ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ
ಕಾರ್ಕಳ : ಪರ್ಪಲೆ ಕ್ಷೇತ್ರ ಭಕ್ತ ಜನರ ಭಕ್ತಿಯ ಕ್ಷೇತ್ರವಾಗಿ ಬೆಳಗಲಿದೆ ಎಂದು ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಗಳು ತಿಳಿಸಿದ್ದಾರೆ.
ಕಾರ್ಕಳ ಅತ್ತೂರು ಪರ್ಪಲೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಸ್ಥಾನದ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.




ಒಂದು ಕಡೆ ಗೌರಿ ಶಂಕರ ದೇವಸ್ಥಾನ ಹಾಗು ಇನ್ನೊಂದೆಡೆ ದೈವಸ್ಥಾನ ನಿರ್ಮಾಣ ಮಾಡುವ ಮಹತ್ತರವಾದ ಉದ್ದೇಶ ಇಟ್ಟುಕೊಂಡು ಇಲ್ಲಿನ ಸಮಿತಿ ಬಹಳಷ್ಟು ಶ್ರಮ ವಹಿಸಿದೆ.
ಅದ್ಭುತವಾದ ಶಿಲ್ಪ ಕಲೆ, ವಾಸ್ತು ವಿನ್ಯಾಸದ ಮೂಲಕ ಇಲ್ಲಿನ ದೈವಸ್ಥಾನ ಸುಂದರವಾಗಿ ರೂಪುಗೊಂಡಿದೆ.
ಇಲ್ಲಿನ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬರಲಿದ್ದಾರೆ. ಎಲ್ಲರ ಆರ್ಥಿಕ ಸಹಕಾರ ಜೊತೆಗೆ ಪ್ರೋತ್ಸಾಹ ಇಲ್ಲಿನ ಅಭಿವೃದ್ಧಿಗೆ ಬೇಕಿದೆ.
ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರ ಆಗಬೇಕಿದೆ. ಹಾಗಾಗಿ ಇಲ್ಲಿನ ದೈವಸ್ಥಾನ ಎಲ್ಲಾ ಭಗವದ್ ಭಕ್ತರ ಅನುಗ್ರಹ ಕ್ಷೇತ್ರವಾಗಿ ಬೆಳೆಯಲಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಅತ್ತೂರು ಪರ್ಪಲೆ ಗಿರಿ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಸುಭಾಸ್ ಚಂದ್ರ ಹೆಗ್ಡೆ ವಹಿಸಿ ಮಾತನಾಡಿ ಈ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಿ ಎಂಬ ಮನವಿ ಮಾಡಿದರು.
ಈ ಕ್ಷೇತ್ರವನ್ನು ಉಳಿಸಿ ಕೊಳ್ಳಲು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಹಿಂದೂ ಸಮಾಜವನ್ನು ಒಗ್ಗೂಡಿಸಿ ಮಾಡಿದ ಹೋರಾಟ ದಿಂದಾಗಿ ಈ ಕ್ಷೇತ್ರ ಇನ್ನಷ್ಟು ಬೆಳಗುವಂತಾಗಿದೆ ಎಂದರು.
ಪರ್ಪಲೆ ಕ್ಷೇತ್ರವನ್ನು ಬೆಳಗಿಸುವಲ್ಲಿ ಸಮಸ್ತ ಹಿಂದೂ ಸಮಾಜದ ಸಹಕಾರ ಅಗತ್ಯ. ಎಲ್ಲಾ ಆಸ್ತಿಕ ಬಂಧುಗಳು ಮೇ 19ರಂದು ನಡೆಯುವ ಪುನರ್ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳುವಂತೆ ಮನವಿ ಮಾಡಿದರು.
ಪರ್ಪಲೆ ಗಿರಿ ಪುನರುತ್ತಾನ ಸಮಿತಿ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಮಾತನಾಡಿ, ಇಲ್ಲಿನ ಪರ್ಪಲೆ ಕ್ಷೇತ್ರದಲ್ಲಿ ಅಷ್ಟ ಮಂಗಲ ಪ್ರಶ್ನೆ ಇಟ್ಟಾಗ ಇಲ್ಲಿನ ಸ್ಥಳದ ಬಗ್ಗೆ ಇರುವ ಧಾರ್ಮಿಕ ವಿಚಾರಗಳು ತಿಳಿದು ಬಂತು. ಮೇ 19ರಂದು ಇಲ್ಲಿನ ದೈವಸ್ಥಾನದ ಪುನರ್ ಪ್ರತಿಷ್ಠೆ ಕಾರ್ಯ ಆಗಲಿದ್ದು ಈ ದೈವಸ್ಥಾನ ಬೆಳಗುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಸರ್ವ ಧರ್ಮಿಯರು ಇಲ್ಲಿ ಹಿಂದೂ ಪದ್ಧತಿ ಪ್ರಕಾರ ಧರ್ಮ ಕಾರ್ಯ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಕಳೆದ ಬಾರಿ ಇಲ್ಲಿ ಧಾರ್ಮಿಕ ಕಾರ್ಯ ಆಗುತ್ತಿದ್ದಾಗ ಗರುಡಗಳು ಪ್ರದರ್ಶನೆ ಬಂದಿರುವುದನ್ನು ನೆನಪಿಸಿ ಕೊಂಡರು.
ವೇದಿಕೆಯಲ್ಲಿ ವಾಸ್ತು ತಜ್ಞ ಪ್ರಮಲ್ ಕುಮಾರ್, ಟ್ರಸ್ಟ್ ನ ಕಾರ್ಯದರ್ಶಿ ಸತ್ಯೇಂದ್ರ ಭಟ್, ದಿನೇಶ್ ಭಟ್, ರಾಜಪುರ ಸಾರಸ್ವತ ಸೊಸೈಟಿ ಅಧ್ಯಕ್ಷರಾದ ರವೀಂದ್ರ ಪ್ರಭು ಉಪಸ್ಥಿತರಿದ್ದರು.
ಮನೀಶ್ ಕಾಬೆಟ್ಟು ನಿರೂಪಿಸಿದರು.
ಮುನಿಯಾಲು ಉದಯ ಶೆಟ್ಟಿ, ಬೋಳ ಪ್ರಶಾಂತ್ ಕಾಮತ್ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

































