[t4b-ticker]

ಅಭಯಹಸ್ತ ಚಾರಿಟೇಬಲ್ ಟ್ರಸ್ಟ್: ಒಣಹುಲ್ಲು ಪಿಂಡಿಯನ್ನು ನೀಲಾವರ ಗೋಶಾಲೆ ಮತ್ತು ಹೆಬ್ರಿ ಗಿಲ್ಲಾಳಿಯ ವಿಶ್ವೇಶಕೃಷ್ಣ ಗೋಶಾಲೆಗೆ ಸಮರ್ಪಣೆ

Picture of RB NEWS

RB NEWS

Bureau Report

ಕಾರ್ಕಳ : ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕಾರ್ಕಳ ವತಿಯಿಂದ ಗೋಗ್ರಾಸ ಗೋನಿಧಿ ಯೋಜನೆಯ ಪ್ರಥಮ ಹಂತದ ಕಾರ್ಯವಾಗಿ ದಿನಾಂಕ 17 ಫೆಬ್ರವರಿ ಭಾನುವಾರ 2024 ರಂದು ದಾನಿಗಳ ಸಹಾಯದಿಂದ ಡಿಸ್ಕೌಂಟ್ ಕ್ರಯದಲ್ಲಿ ಖರೀದಿಸಿದ 260 ಕಟ್ಟು ಒಣಹುಲ್ಲು ಪಿಂಡಿಯನ್ನು ನೀಲಾವರ ಗೋಶಾಲೆ ಮತ್ತು ಹೆಬ್ರಿ ಗಿಲ್ಲಾಳಿಯ ವಿಶ್ವೇಶಕೃಷ್ಣ ಗೋಶಾಲೆಗೆ ಸಮರ್ಪಿಸಲಾಗಿತ್ತು.

2024 ಮಾರ್ಚ್ 12 ರ ಮಂಗಳವಾರ ಬೆಳಗ್ಗೆ 5 ಗಂಟೆಯಿಂದ ಗೋಗ್ರಾಸ ಗೋನಿಧಿಯ ದ್ವಿತೀಯ ಹಂತದ ಕಾರ್ಯವಾಗಿ ಸುಮಾರು 12 ಟನ್ನ್ ರಸಮೆವು( ಸೈಲೆಜ್) ನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಈ ಕೆಳಗೆ ತಿಳಿಸಲ್ಪಟ್ಟ ಉಡುಪಿ ಜಿಲ್ಲೆಯ ಗೋಶಾಲೆಗಳಿಗೆ ತಲುಪಿಸಲಾಯಿತು.

  1. ಅಗ್ರಹಾರ ಗೋಶಾಲೆ ಕಾರ್ಕಳ – 240 ಕೆಜಿ
  2. ಶ್ರೀ ಅನಂತಕೃಷ್ಣ ಗೋಶಾಲೆ ಕಾರ್ಕಳ – 290 ಕೆಜಿ
  3. ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಬಜಗೋಳಿ, ಕಾರ್ಕಳ – 250 ಕೆಜಿ
  4. ಅಭಿನಂದನ್ ಗೋಕುಲ ಗೋಶಾಲೆ, ಚಿಕ್ಕಲ್ ಬೆಟ್ಟು ಕಾರ್ಕಳ – 250 ಕೆಜಿ
  5. ಶ್ರೀ ವಿಶ್ವೇಶಕೃಷ್ಣ ಗೋಶಾಲೆ ಹೆಬ್ರಿ – 2 ಟನ್
  6. ಕಾಮಧೇನು ಗೋಶಾಲೆ ಬ್ರಹ್ಮಾವರ – 2 ಟನ್
  7. ನೀಲಾವರ ಗೋಶಾಲೆ – 7 ಟನ್

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top