ಕಾರ್ಕಳ : ಉಡುಪಿ ಜಿಲ್ಲಾ ಆರೋಗ್ಯ ಕವಚ (108) ಇ ಎಂ ಆರ್ ಐ ಗ್ರೀನ್ ಹೆಲ್ತ್ ಸರ್ವಿಸ್
ಕಾರ್ಕಳ ತಾಲೂಕಿನ ಪ್ರತಿಯೊಂದು ಸಿ ಹೆಚ್ ಸಿ ಮತ್ತು ಪಿ ಹೆಚ್ ಸಿ ಆಶಾ ಮೀಟಿಂಗ್ ಗಳಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಉಚಿತ 108 ಆಂಬುಲೆನ್ಸ್ ಸೇವೆಯ ಕುರಿತು ಮಾಹಿತಿಯನ್ನು ಗ್ರಾಮಸ್ಥರ ಗಮನಕ್ಕೆ ತರಬೇಕು. ಆ ಮೂಲಕ ಗ್ರಾಮದ ಕಟ್ಟಕಡೆಯ ಜನರು ಅದರ ಸವಲತ್ತು ಪಡೆಯುವಂತಾಗಬೇಕೆಂದು ಡಿಸ್ಟಿಕ್ ಮೆನೇಜರ್ ಗುರುರಾಜ್ ಹೇಳಿದರು.
ಪ್ರತಿಯೊಂದು ತಾಲೂಕಿನ ಸರಕಾರಿ ಆಸ್ಪತ್ರೆಯ ಮೆಡಿಕಲ್ ಆಫೀಸರ್, ಕರ್ತವ್ಯನಿರತ ವೈದ್ಯರು, ನರ್ಸ್ ಗಳು ಮತ್ತು ಆಶಾ ಕಾರ್ಯಕರ್ತರು 108 ಅಂಬುಲೆನ್ಸ್ ನ ಉಚಿತ ಸಾರ್ವಜನಿಕರಿಗೆ ಮಾಹಿತಿ ನೀಡುವುದರಿಂದ ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಸಿಗಲಿದೆ ಎಂದರು.
ಇಎಂಇ ಮಹಾಬಲ, ಮೆಡಿಕಲ್ ಆಫೀಸರ್ ಶಶಿಕಲಾ
ಮತ್ತು ಮರಿನಾಪುರ ನಮ್ಮ ಕ್ಲಿನಿಕ್ ಡಾಕ್ಟರ್ ಸ್ನೇಹ ಶೆಟ್ಟಿ, ಇಎಂಟಿ ರಾಜಶೇಖರ್ ಪೈಲಟ್ ಕೊಟ್ರಪ್ಪ ಜಿ.
ಉಪಸ್ಥಿತರಿದ್ದರು.







































