ಉಡುಪಿ ಲೋಕಸಭಾ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿಗೆ ಸಂಕಟ
ಈ ಬಾರಿಯ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಸೂಚಿಸಲು ಬಿಜೆಪಿಗೆ ಭಾರೀ ಸಂಕಟವಾಗಿದೆ, ಸೋಲುವ ಭಯ ಹುಟ್ಟಿಕೊಂಡಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಹಾಲಿ ಸಂಸದೆ ಶೋಭ ಕರಂದ್ಲಾಜೆಯವರೇ ಈ ಬಾರಿಯೂ ಸ್ಪರ್ಧಿಸುತ್ತಾರೆ ಎನ್ನುವ ಸ್ಪಷ್ಟ ವದಂತಿ ಇರುವುದೇ ಆದರೂ ಘೋಷಣೆ ಮಾಡುವ ತನಕ ಏರಿಳಿತಗಳ ಲೆಕ್ಕಾಚಾರ ನಡೆಯುತ್ತಲೇ ಇದೆ.
ಸಂಸದೆ ಕರಂದ್ಲಾಜೆಯವರಿಗೆ ಈ ಕ್ಷೇತ್ರದ ಮೇಲಿನ ಮಮತೆ ಸಂಪೂರ್ಣ ಕಡಿಮೆಯಾಗಿದ್ದು ಡಿ ವಿ ಸದಾನಂದ ಗೌಡರು ಪ್ರತಿನಿಧಿಸಿರುವ ಬೆಂಗಳೂರಿನ ದಕ್ಷಿಣವನ್ನೇ ಬಯಸುತ್ತಿದ್ದಾರೆ.ಆದರೆ ಅದು ಕನ್ನಡಿಯೊಳಗಿನ ಗಂಟಾಗಿರುವುದಂತೂ ಸತ್ಯ.
ಮಾಜಿ ಸಚಿವ ಹಾಗೂ ಮಾಜಿ ಸಂಸದರಾಗಿರುವ ಕೆ. ಜಯಪ್ರಕಾಶ ಹೆಗ್ಡೆಯವರೇನಾದರೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆಯೇ ಎನ್ನುವ ಭಯ ಬಿಜೆಪಿಯನ್ನಾವರಿಸಿಬಿಟ್ಚಿದೆ.
ಹೆಗ್ಡೆಯವರೇನಾದರೂ ಸ್ಪರ್ಧಿಸುವುದಾದರೂ ಅವರು ಕಾಂಗ್ರೆಸ್ಸಿಗೆ ಮರು ಸೇರ್ಪಡೆಗೊಳ್ಳಬೇಕಾಗುತ್ತದೆ. ಕಳೆದ ಬಿಜೆಪಿ ಸರಕಾರವು ಕೆ. ಜಯಪ್ರಕಾಶ ಹೆಗ್ಡೆಯವರನ್ನು ಹಿಂದುಳಿದ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು.ಅದು ಹೊಸ ಸರಕಾರ ಬಂದ ನಂತರವೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದಾಗಿ ಮುಂದುವರಿಸಲ್ಪಟಿದೆ.
2023 ರ ವಿಧಾನ ಸಭಾ ಚುನಾವಣೆಯಲ್ಲಿಯೆ ಹೆಗ್ಡೆಯವರನ್ನು ಕಾಂಗ್ರೆಸ್ಸಿಗೆ ಆಹ್ವಾನಿಸಿ ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಅವಕಾಶ ಕೊಡುವ ಲೆಕ್ಕಾಚಾರಗಳು ನಡೆದಿದ್ದರೂ ಚುನಾವಣೆ ಸಮಯದಲ್ಲಿ ಅದೂ ಕೂಡ ಕರಾವಳಿಯ ಜಿಲ್ಲೆಯಲ್ಲಿ ಸ್ಪರ್ಧಿಸುವುದಕ್ಕೆ ಬುದ್ಧಿವಂತ ರಾಜಕಾರಣಿ ಬಯಸುವುದಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದಲ್ಲಿ ಸರಕಾರ ನಡೆಸುವುದು,ಆಪ್ತ ಮಿತ್ರರೂ,ಜನತಾ ಪರಿವಾರದಲ್ಲಿ ಜೊತೆಯಾಗಿ ಕೆಲಸ ಮಾಡಿದವರೂ ಆದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿರುವುದು ಹೆಗ್ಡೆಯವರ ಕಾಂಗ್ರೆಸ್ ಸೇರುವಿಕೆಯ ಬಯಕೆಗೆ ಭಾರೀ ಬಲ ಬಂದಂತಾಗಿದೆ.
ವಿಪಕ್ಷ ನಾಯಕ ಆರ್. ಅಶೋಕ್ ರವರು ಬೆಂಗಳೂರು ದಕ್ಷಿಣವನ್ನು ತನ್ನ ಮಗನಿಗೆ ಕೊಡಿಸುವಲ್ಲಿ ಭಾರೀ ಕಸರತ್ತು ಮಾಡುತ್ತಿದ್ದಾರೆ.ಕೊನೇಯ ಃಳಿಗೆಯಲ್ಲಿ ಯೆಡಿಯೂರಪ್ಪನವರ ಕೃಪಾಕಟಾಕ್ಷ ಬಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಆ ಕ್ಷೇತ್ರವು ಬಿಜೆಪಿಗೆ ಕಟ್ಟಿಟ್ಟ ಬುತ್ತಿಯಾಗಿದ್ದರಿಂದ ಎಲ್ಲರಿಗೂ ಅದರಲ್ಲೇ ಕಣ್ಣು.
ಇತ್ತ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಜಯಪ್ರಕಾಶ ಹೆಗ್ಡೆಯವರನ್ನು ಕಾಂಗ್ರೆಸ್ಸು ಕಣಕ್ಕಿಳಿಸುವ ಭಾರೀ ಲೆಕ್ಕಾಚಾರ ಕೊನೆಗೊಂಡಿದ್ದು ಹೆಗ್ಡೆಯವರ ಅಧಿಕೃತ ಸೇರ್ಪಡೆ ಮಾತ್ರವಷ್ಟೆ ಬಾಕಿಯುಳಿದಿದೆ. ಅದೇ ವಿಚಾರವೀಗ ಬಿಜೆಪಿಗೆ ಎಲ್ಲಿಲ್ಲದ ತಲೆನೋವಾಗಿದೆ.
ಹಿಂದೆ2012 ರಲ್ಲಿ ನಡೆದ ಉಪ ಚುನಾವಣೆನಲ್ಲಿ ಹೆಗ್ಡೆಯವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದು ಸಮೀಪದ ಪ್ರತಿಸ್ಪರ್ಧಿ ಸುನಿಲ್ ವಿ. ಕುಮಾರ್ ಅವರನ್ನು ಸೋಲಿಸಿ ಸುಮಾರು 3,98,723 ಮತ ಪಡೆದು ಜಯಗಳಿಸಿದ್ದರು. ಸುನಿಲ್ ಕುಮಾರ್ ಅವರು 3 ,52,999 ರಷ್ಟು ಮತ ಗಳಿಸಿದ್ದರು.
ಜೆ. ಡಿ. ಎಸ್. ಕಡೆಯಿಂದ ಭೋಜೇ ಗೌಡರು ಸ್ಪರ್ಧಿಸಿದ್ದು ಅವರು ಸುಮಾರು72080 ಮತಗಳನ್ನು ಪಡೆದು ಗಂಭೀರ ಸವಾಲೊಡ್ಡಿದ್ದರು.
ಹೆಗ್ಡೆಯವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಚ್ಚೆ ಹೊಂದಿರುವುದಂತೂ ಸತ್ಯ, ಪಕ್ಷ ಯಾವುದೆಂಬುದೇ ಗೊಂದಲವಾಗಿತ್ತಷ್ಟೆ. ಒಂದು ಬಗೆಯಲ್ಲಿ ಬಿ. ಜೆ. ಪಿ. ಯು ಹೆಗ್ಡೆಯವರನ್ನು ರಾಜಕೀಯದಲ್ಲಿ ಜಾತಿ ಕೆಡಿಸಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ.ಏನೆಂದರೆ ಪಕ್ಷವು ಹೆಗ್ಡೆಯಂತಹ ಡೈನಮಿಕ್ ಪರ್ಸನಾಲಿಟಿಯ ರಾಜಕಾರಣಿಯನ್ನು ಯಾವ ರೀತಿಯಲ್ಲೂ ಬಿ. ಜೆ. ಪಿ. ಯು ಗುರುತಿಸಲಿಲ್ಲ.
ಕೂಡ.
ಅವರು ಕಾಂಗ್ರೆಸ್ ಸೇರುವ ವಿಚಾರ ಗಾಳಿಯಲ್ಲೆ ಹಾರಾಡುತ್ತಿದೆ ವಿನಹ ಅವರ ಮಾತಿನಲ್ಲಿ ಇನ್ನೂ ಬಂದಿಲ್ಲ. “ಕಾಂಗ್ರೇಸ್ ಪಕ್ಷ ಸೇರಬಾರದೇಕೆ?” ಅನ್ನುವ ಮಾತಿನ ಸವಾಲು ಅವರ ಆಪ್ತ ಸಲಹೆಗಾರರ ಕಡೆಯಿಂದ ,ಬೆಂಬಲಿಗರ ಕಡೆಯಿಂದ ಹೊರಬೀಳುತ್ತಿದ್ದುದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಪಕ್ಷ ಬದಲಾಯಿಸುವಲ್ಲಿ ತಯಾರಿ ಇರಬಹುದೇನೊ ಎಂದು ತಿಳಿಯಬಹುದು.ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಹೆಗ್ಡೆ ಅವರುಗಳು ಜನತಾ ಪರಿವಾರದಲ್ಲಿ ಜೊತೆಯಾಗಿಯೇ ಇದ್ದವರು,ಹಾಗಾಗಿಯೆ ಕಾಂಗ್ರೆಸ್ಸಿಗೆ ಬರುವ ಆಸಕ್ತಿಯನ್ನು ಪರೋಕ್ಷ ಹೇಳಿಕೆಗಳ ಮೂಲಕ ಹರಿಯಬಿಟ್ಟಿದ್ದಾರೆ.
ಈ ಬಾರಿ ಚಿಕ್ಕಮಗಳೂರು
ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಒಲಿದಿದೆ. ಶೃಂಗೇರಿಯಲ್ಲಿ ಮಾತ್ರ ಬಿಜೆಪಿ ಕಾಂಗ್ರೆಸ್ ಮತಗಳ ಶೇಕಡಾವಾರು ಗಳಿಕೆಯಲ್ಲಿ ಭಾರೀ ಅಂತರವಿಲ್ಲ.
ಉಡುಪಿ ಜಿಲ್ಲೆ ಪೂರ್ತಿ ಬಿಜೆಪಿಗೊಲಿದಿದೆ. ಜಯಪ್ರಕಾಶ ಹೆಗ್ಡೆ ಪರ ಅಲೆ ಉಡುಪಿ ಜಿಲ್ಲೆಯಲ್ಲಿ ಕೂಡಾ ತುಂಬಾ ಜಾಸ್ತಿಯೆ ಇದ್ದು ಪಕ್ಷದ ನೆಲೆ ಹೊರತು ಪಡಿಸಿ ಶೋಭರವರಿಗೆ ವೈಯಕ್ತಿಕ ಬೆಂಬಲ ಸಂಖ್ಯೆ ಬಹಳ ಕಡಿಮೆಯಾಗಿದೆ. ಪಕ್ಷದ ಕಾರ್ಯಕರ್ತರಿಂದಲೂ ಬಹಿರಂಗ ವಿರೋಧವು ಕರಂದ್ಲಾಜೆಯವರಿಗೆ ದೊರಕುತ್ತಿರುವುದನ್ನು ಪತ್ರಿಕೆಗಳು ವರದಿ ಮಾಡಿವೆ. ಜಯಪ್ರಕಾಶ ಹೆಗ್ಡೆಯವರಿಗೆ ಎರಡೂ ಜಿಲ್ಲೆಯಲ್ಲಿ ವೈಯಕ್ತಿಕ ಮತಗಳು ಅವರಲ್ಲಿನ ಅಭಿಮಾನವನ್ನು ಸಾಬೀತುಪಡಿಸುವುದರಲ್ಲಿ ಯಶಸ್ಸುಕೊಡುತ್ತದೆ.
ಶೋಭ. ಕರಂದ್ಲಾಜೆಯವರನ್ನು ರಾಜಕೀಯದಿಂದ ಮುಕ್ತಿಗೊಳಿಸುವ ರಹಸ್ಯ ಅಜೆಂಡವು ಯೆಡಿಯೂರಪ್ಪ ಮತ್ತವರ ಪುತ್ರರಲ್ಲಿ ಅಡಗಿಕೊಂಡಿರುವುದಂತೂ ನಿಜ. ಈ ಬಾರಿ ಸ್ಪರ್ಧಿಸಿದರೂ ಕರಂದ್ಲಾಜೆಯವರನ್ನು ಗೆಲ್ಲಿಸುವ ಹಠವಂತೂ ರಾಜ್ಯ ಬಿಜೆಪಿಯಲ್ಲಿ ಹುಟ್ಟಿ ಬರುವುದಿಲ್ಲ ಸತ್ಯ.
-ವಿ. ಕೆ. ವಾಲ್ಪಾಡಿ



































