ಹೊಸ ವರ್ಷದ ತುರ್ತು ಸೇವೆಗಾಗಿ ಸಕಲ‌ ಸಿದ್ಧತೆಯೊಂದಿಗೆ ಆರೋಗ್ಯ ಕವಚ 108

Picture of RB NEWS

RB NEWS

Bureau Report

ಹೊಸ ವರ್ಷದ ತುರ್ತು ಸೇವೆಗಾಗಿ ಸಕಲ‌ ಸಿದ್ಧತೆಯೊಂದಿಗೆ ಆರೋಗ್ಯ ಕವಚ 108

ಬೆಂಗಳೂರು : ಹೊಸ ವರ್ಷಾಚರಣೆಯ ಸಂದರ್ಭ ಯಾವುದೇ ರೀತಿಯ ಅನಾಹುತ‌ ಸಂಭವಿಸಿದಲ್ಲಿ, ಮಾನವ ಜೀವಹಾನಿಯನು ತಡೆಯುವ ನಿಟ್ಟಿನಲ್ಲಿ 108 ಆರೋಗ್ಯ ಕವಚ ಅಂಬುಲೆನ್ಸ್ ಕರ್ನಾಟಕ ರಾಜ್ಯಾದ್ಯಂತ ಸುಸರ್ಜಿತ ಗೊಂಡಿರುತ್ತದೆ.

108 ಅಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ.
ಹೆಚ್ಚಿನ ತುರ್ತುಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ಅನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಯ ಸಾಪ್ತಾಯಿಕ ರಜೆಯನ್ನು ರದ್ದುಗೊಳಿಸಲಾಗಿದೆ ಮುಂಜಾಗೃತವಾಗಿಯೇ ಎಲ್ಲಾ ಆಂಬುಲೆನ್ಸ್ ನಲ್ಲಿ ಇಂಧನ , ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ.

ಜಿಲ್ಲೆಯಲ್ಲಿ 18 ಅಂಬುಲೆನ್ಸ್ ಗಳನ್ನು ತಜ್ಞ ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ. ತುರ್ತುಪರಿಸ್ಥಿತಿಗಳಲ್ಲಿ 108 ಫ್ರೀ ಸಂಖ್ಯೆ ಡಯಲ್ ಮಾಡಬಹುದು ಎಂದು ಜಿಲ್ಲಾ ವ್ಯವಸ್ಥಾಪಕ ಮಹಾಬಲ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top