ಹೆಸರಿಗಷ್ಟೇ ಕಾರ್ಕಳ ಪುರಸಭೆ: ಸ್ವಚ್ಚತಾ ಕಾರ್ಯದಲ್ಲಿ ಸಾರ್ವಜನಿಕರು

Picture of RB NEWS

RB NEWS

Bureau Report

ಕಾರ್ಕಳ : ಪುರಸಭೆ ವ್ಯಾಪ್ತಿಯ ಆನೆಕೆರೆ ಜಂಕ್ಷನ್ ಬಳಿ ಮಂಗಳೂರು,ಮೂಡುಬಿದ್ರಿ,ಬೆಳ್ಮಣ್,ಬಜಗೋಳಿ ,ಪಡುಬಿದ್ರಿ ,ಶೃಂಗೇರಿ, ಕಡೆಯಿಂದ ಬರುವ ಬಸ್ಸುಗಳು ಪ್ರಯಾಣಿಕರಿಗೆ ಇಳಿಸಲು ಇಲ್ಲಿ ನಿಲ್ಲಿಸುತ್ತಾರೆ.

ಎಸ್.ಎನ್.ವಿ ಪ್ರೌಢಶಾಲೆ ಹಾಗೂ ಎಸ್.ಎನ್.ವಿ ಕಾಲೇಜಿಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ಪ್ರದೇಶದಲ್ಲಿ ಬಸ್ಸಿನಿಂದ ಇಳಿಯುತ್ತಾರೆ ಹಾಗೂ ಹತ್ತುತ್ತಾರೆ.

ಇಷ್ಟಾಗಿದ್ದರೆ ತೊಂದರೆ ಇರುತ್ತಿರಲಿಲ್ಲ. ಬಸ್ಸುಗಳನ್ನು ಅದರ ಚಾಲಕರರು ನಡುರಸ್ತೆಯಲ್ಲಿ ನಿಲ್ಲಿಸುತ್ತಿರುವುದು ಹಲವು ಅಪಾಯಗಳಿಗೆ ಅಹ್ವಾನಿಸಿದಂತಾಗಿದೆ.

ಅದಕ್ಕೂ ಒಂದು ಬಲವಾದ ಕಾರಣವೂ ಇದೆ. ರಸ್ತೆಯ ಬದಿಯಲ್ಲಿ ಇರುವ ಪುಟ್ ಪಾತ್ ಪೂರ್ತಿ ಕುರುಚಲು ಗಿಡ, ಬಳ್ಳಿಗಳಿಂದ ತುಂಬಿಕೊಂಡಿದ್ದು, ಉರಗಗಳ ಕಾಟವೂ ಎಲ್ಲೆ ಮೀರಿದೆ.

ಇವೆಲ್ಲವನ್ನು ಗಮನ ಹರಿಸಿದ ಪುರಸಭಾ ಮಾಜಿ ಸದಸ್ಯ ಹಾಗೂ ವಕೀಲರ ಗುಮಸ್ತರ ಸಂಘದ ಸದಸ್ಯ ಪ್ರಕಾಶ್ ರಾವ್ ನೇತೃತ್ವದಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯನ್ನು ಮುಂದಿಟ್ಟು ಪುಟ್ ಪಾತ್ ಮೇಲೆ ಬೆಳೆದಿರುವ ಮೇಲಿನ ಗಿಡ ಗಂಟಿಗಳನ್ನು ತೆರವು ಮಾಡಿ ಹಾಸುಕಲ್ಲು ಹಾಸಿ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಗುಮಾಸ್ತರ ಸಂಘದ ಸದಸ್ಯರಾದ ಪದ್ಮಾಕರ್ ದೇವಾಡಿಗ,ಸದಾನಂದ ಶೆಟ್ಟಿಗಾರ್,ಸುಕೇಶ್ ಕುಲಾಲ್,ಶಂಕರ ಗೌಡ ಉಪಸ್ಥಿತರಿದ್ದರು.

ಇವರ ಸತ್ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top