ಹೆಬ್ರಿ: ಹೆಬ್ರಿ, ಸೋಮೇಶ್ವರ,ನಾಡ್ಪಾಲು, ಸೀತಾನದಿ ಮೊದಲಾದೆಡೆಗಳಲ್ಲಿ ಆನೆ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.



ಕಾಡಿನಿಂದ ಊರಿನತ್ತ ಹೆಜ್ಜೆ ಹಾಕಿರುವ ಆನೆಯ ಹಾವಳಿಗೆ ಅಡಿಕೆ ತೋಟ, ತೆಂಗಿನ ತೋಟ ಸೇರಿದಂತೆ ಕೃಷಿ ಭೂಮಿ ಹಾನಿಯಾಗಿರುವ ಮಾಹಿತಿ ಲಭಿಸಿದೆ.
ಅರಣ್ಯ ಇಲಾಖೆ ಮುಂಜಾಗೃತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಗ್ರಾಮಸ್ಥರದಾಗಿದೆ.
ಕೃಷಿಯನ್ನೇ ಅವಲಂಬಿಸಿ ಕೊಂಡಿರುವ ರೈತರು ಆನೆ ಹಾವಳಿಗೆ ಕೃಷಿ ನಷ್ಟ ಅನುಭವಿಸುತ್ತಿದ್ದಾರೆ. ಸಂಕಷ್ಟಗೊಳಗಾದವರಿಗೆ ಸರಕಾರವು ಪರಿಹಾರ ನೀಡಬೇಕೆಂಬ ಆಗ್ರಹವು ರೈತಾಪಿ ವರ್ಗದಾಗಿದೆ.



































