[t4b-ticker]

ಹಿಂ. ಜಾ. ವೇದಿಕೆ ಜಿಲ್ಲಾ ಸಹಸಂಯೋಜಕ ಸಮಿತ್‌ರಾಜ್ ದರೆಗುಡ್ಡೆ ವಿರುದ್ಧ ಪೊಲೀಸ್ ಇಲಾಖೆ ಬ್ರಹ್ಮಾಸ್ತ್ರ?!

Picture of RB NEWS

RB NEWS

Bureau Report

ಮಂಗಳೂರು :ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹಸಂಯೋಜಕ ಸಮಿತ್‌ರಾಜ್ ದರೆಗುಡ್ಡೆ ಅವರ ಗಡಿಪಾರು ಆದೇಶಕ್ಕೆ ಪೊಲೀಸ್ ಇಲಾಖೆ ನಡೆಸುತ್ತಿರುವ ಸಿದ್ದತಾ ಕ್ರಮದ ವಿರುದ್ಧ ಹಿಂದು ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿಂಜಾವೇ ಮಂಗಳೂರು ಗ್ರಾ. ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಮಾತನಾಡಿ ಪ್ರಕರಣವಿಲ್ಲದೆ ಕಾನೂನು ಬಾಹಿರವಾಗಿ ಗಡಿಪಾರಿಗೆ ಆದೇಶ ಮಾಡಿದ್ದಲ್ಲಿ ಆದೇಶದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಚಿತ್ರಹಿಂಸೆ ನೀಡಿ ಅವರ ತೇಜೋವಧೆ ಮತ್ತು ಮನೋಬಲವನ್ನು ಕುಗ್ಗಿಸುವ ಕಾರ್ಯ ನಡೆಸುತ್ತಾ ಬಂದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಂಘಟನೆ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ಎರಡುವರೆ ವರ್ಷದಿಂದ ಸಮಿತ್‌ರಾಜ್ ದರೆಗುಡ್ಡೆ ವಿರುದ್ಧ ಯಾವುದೇ ಪ್ರಕರಣ ದಾಖಲಾಗದೇ ಇದ್ದರೂ ರಾಜಕೀಯ ಒತ್ತಡಕ್ಕೊಳಗಾಗಿ ಕಾನೂನು ಬಾಹಿರವಾಗಿ ಗಡಿಪಾರು ಆದೇಶಕ್ಕೆ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಸಂಘಟನೆ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಜಾಗರಣದ ಪ್ರಾಂತ ಸಮಿತಿ ಸದಸ್ಯ ಹರೀಶ್ ಶಕ್ತಿನಗರ, ಜಿಲ್ಲಾ ನ್ಯಾಯ ಜಾಗರಣ ಸಂಯೋಜಕ ರಾಜೇಶ್, ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ, ಗಣೇಶ್ ಕೆದಿಲ, ಮೂಡುಬಿದಿರೆ ತಾಲೂಕು ಸಂಯೋಜಕ ಸಂದೀಪ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top