ಹಾಸಿಗೆ ಹಿಡಿದ ಮಹಿಳೆ : ಮಾನವೀಯತೆ ತೋರಿ….
ಕಾರ್ಕಳ : ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಾಲ್ ಬೆಟ್ಟು ಗ್ರಾಮದ ಮಲೆನಾಡಿನ ತಪ್ಪಲಲ್ಲಿ ವಾಸಿಸುತ್ತಿರುವ ದೇವಿ ಕೃಪಾ (ಪಾಲೆ ಮನೆ)ನಿವಾಸಿ ವಾಸುದೇವಾಡಿಗ ಇವರ ಮೂರು ಮಕ್ಕಳ ಪೈಕಿ ಎರಡನೇ ಮಗಳು ವಿವಾಹಿತೆಯಾಗಿರುವ ಮಮತಾ (40) ಹಾಸಿಗೆ ಹಿಡಿದಿದ್ದಾರೆ.
ಇವರಿಗೆ ಎಂಟು ತಿಂಗಳ ಹಿಂದೆ ನಾಲಗೆ ಮೇಲೆ ಸಣ್ಣ ಗುಳ್ಳೆ ಎದ್ದು ಕಾಲಕ್ರಮೇಣ ದೊಡ್ಡದಾಗುತ್ತಾ ಹೋದಾಗ ವೈದ್ಯರನ್ನು ಸಂಪರ್ಕಿಸಿದರು ಇದು ಕ್ಯಾನ್ಸರ್ ಲಕ್ಷಣ ಎಂದು ವೈದ್ಯರು ತಿಳಿಸಿದರು.
ಕೂಲಿ ಕಾರ್ಮಿಕರಾದ ಇವರಿಗೆ ಇದರಿಂದ ದಿಕ್ಕೆ ತೋಚದಂತಾಯಿತು . ಇಂಗ್ಲಿಷ್ ಮದ್ದು ಮಾಡಲು ಕಷ್ಟ ಆದ ಕಾರಣ ಹಳ್ಳಿಯ ಮದ್ದು ಮೊರೆ ಹೋದರು. ಆದರೂ ಇದರ ಲಕ್ಷಣ ಜೋರಾದಾಗ ಬಿಸಿ ರೋಡಿನ ಆಯುರ್ವೇದಿಕ್ ಡಾಕ್ಟರ್ ರನ್ನು ಭೇಟಿ ಮಾಡುತ್ತಾ ಇದ್ದಾಗ ಸ್ವಲ್ಪ ಗುಣಮುಖರಾಗಿದ್ದರು.
ಆದರೆ ಇದೀಗ ಮತ್ತೆ ಸಮಸ್ಯೆ ಉಲ್ಭಣಿಸಿದಾಗ ಸೋಮವಾರಪೇಟೆಯ ಆಯುರ್ವೇದಿಕ್ ಡಾಕ್ಟರನು ಮಾಡಿದಾಗ ನಾಲ್ಕನೇ ಸ್ಟೇಜ್ ನಲ್ಲಿ ಇರುವುದು ದೃಢಪಟ್ಟಿತ್ತು .
ಈಗಾಗಲೇ ಚಿಕಿತ್ಸೆಗೆ 5 ಲಕ್ಷಕ್ಕಿಂತ ಮಿಕ್ಕಿ ಖರ್ಚಾಗಿದ್ದು, ಇವರು ಎಲ್ಲಾ ಕಡೆ ಸಾಲ ಮೂಲ ಮಾಡಿದ್ದು ಇನ್ನು ಮುಂದಿನ ಚಿಕಿತ್ಸೆ ಮತ್ತು ತನ್ನ ಮುದ್ದಿನ ಮಗಳು ಏಳನೇ ತರಗತಿ ಕಲಿತಿರುವ ಈ ಬಾಲಕಿಯ ಭವಿಷ್ಯದ ಬಗ್ಗೆ ಎನಿಸಿದಾಗ ದಿಕ್ಕೆ ತೋಚದಂತಾಗಿ ಇವರು ತಮ್ಮೆಲ್ಲರ ಮುಂದೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ ಪತಿ ಸಂಜೀವ ದೇವಾಡಿಗ.
ತನ್ನ ಹೆಂಡತಿಯ ಚಿಕಿತ್ಸೆಗೆ ಸಹಾಯ ಮಾಡುವಿರಾ ನೀವು ಕೊಡುವ ಒಂದೊಂದು ರೂಪಾಯಿ ಅಮೂಲ್ಯ ವಾದುದು ಎಂದು ಬೇಡಿಕೊಳ್ಳುತ್ತಿದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೆರವುಹಸ್ತ ಚಾಚುವವರು ಸಂಪರ್ಕಿಸಬಹುದು….
ಸಂಜೀವ ದೇವಾಡಿಗ (ಗಂಡ)
ಮೊಬೈಲ್ 7892275853
ಮಮತ a/c 520291021207108
IFSC COD,.UBIN0575026041
NARAVI BRANCH






































