ಹಲಸು ಹಬ್ಬ ಮತ್ತು ವಿವಿಧ ಆಹಾರೋತ್ಪನ್ನಗಳ ಪ್ರಚಾರ ಪತ್ರ ಬಿಡುಗೆಡೆ
ಬಂಟ್ವಾಳ: ಬಂಟ್ವಾಳ ಸ್ಪರ್ಶ ಕಲಾ ಮಂದಿರ ದಲ್ಲಿ ಆಗಸ್ಟ್ 3,4 ರಂದು ಏರ್ಪಡಿಸಲಾದ ಬಂಟ್ವಾಳ ಬೃಹತ್ ಹಲಸು ಹಬ್ಬ-ಹಣ್ಣುಗಳ ವಿವಿಧ ಆಹಾರೋತ್ಪನ್ನಗಳ ಮಹಾಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟದ ಪ್ರಚಾರ ಪತ್ರವನ್ನು ರಾಜ್ಯಸಭಾ ಸದಸ್ಯರಾದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಇದೆರ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನೇಶನಲ್ ಸಂಸ್ಥೆಯ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಆದಿರಾಜ ಜೈನ್ ಮೇಳದ ಬಗ್ಗೆ ಪ್ರಸ್ತಾವನೆ ಗೈದರು.
ಪದ್ಮಶೇಖರ ಜೈನ್ ,ಭರತ್ ಕುಮಾರ್ ಬಲ್ಲೋಡಿಗುತ್ತು, ಮಾಯಿಲಪ್ಪ ಸಾಲಿಯಾನ್, ಶ್ರೇಯಾಂಶ ಕುಮಾರ್, ಮಾಣಿಕ್ಯ ರಾಜ್ ಜೈನ್, ಶಾಂತಿ ಪ್ರಸಾದ್ ಜೈನ್,ಸತೀಶ ಕುಮಾರ್ ಪಿಲಿಂಗಾಲು ಉಪಸ್ಥಿತರಿದ್ದರು.






































