ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ವಾಮಂಜೂರು ಕುಡುಪು ಪೆದಮಲೆಯ ನಿಶಾಂತ್ ಶೆಟ್ಟಿ(35) ಎಂದು ಗುರುತಿಸಲಾಗಿದೆ.
ಈತ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿಕೊಂಡು ಮಂಗಳೂರು ನಗರಕ್ಕೆ ರೈಲಿನಲ್ಲಿ ಸಾಗಾಟ ಮಾಡಿಕೊಂಡು ಮಂಗಳೂರಿನ ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು.
ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ತೊಕ್ಕೊ ಟ್ಟು ಒಳಪೇಟೆಯ ಕೃಷ್ಣನಗರ ಪರಿಸರದಲ್ಲಿ ಗೂಡ್ಸ್ ಟೆಂಪೋ ವೊಂದರಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿ ಸಾಗಿಸುತ್ತಿದ್ದ 1,50,000 ರೂ. ಮೌಲ್ಯದ 6 ಕೆಜಿ 325 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ಎಚ್ ಎಂ, ಪಿಎಸ್ಐ ಬಸವರಾಜಪ್ಪ ಮತ್ತು ಸಿಸಿಬಿ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅಕ್ರಮ ಪಿಸ್ತೂಲ್ ಹೊಂದಿದ ಪ್ರಕರಣ, ಕಳವು ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಸರಕಳ್ಳತನ ಪ್ರಕರಣ, ಉಳ್ಳಾ ಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ವಿಟ್ಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಮತ್ತು ಕಳ್ಳತನ ಪ್ರಕರಣ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹೀಗೆ ಒಟ್ಟು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಟೆಂಪೋದ ಮುಂಭಾಗದಲ್ಲಿ ಹಣ್ಣು,ತರಕಾರಿ ಸ್ಟಿಕರ್…
ಪೊಲೀಸ್ ಬಾಷೆಯಲ್ಲಿ ಹೇಳುವುದಾದರೆ, ನಿಶಾಂತ್ ಶೆಟ್ಟಿಯ ಪರಿಚಯ ಬಹುತೇಕ ಪೊಲೀಸ್ ಠಾಣೆಗಳಿಗೆ ಇವೆ.
ಒಂದಲ್ಲ ಒಂದು ರೀತಿಯಲ್ಲಿ ಪೊಲೀಸ್ ಠಾಣೆಯ ಮೆಟ್ಟಲು ಹತ್ತಿದವನು.
ತಿಳಿದೋ, ತಿಳಿಯದೆಯೋ ಮಾಡಿದ ತಪ್ಪುಗಳನ್ನು ತಿದ್ದಿ ನಡೆದು ಅದರ್ಶ ವ್ಯಕ್ತಿಯಾಗಿ ಜೀವನ ಸಾಗಿಸುವುದಕ್ಕೆ ಸಮಾಜವು ಅವಕಾಶಗಳನ್ನು ನೀಡುತ್ತದೆ.
ಆದರೆ ನಿಶಾಂತ್ ಶೆಟ್ಟಿ ಮಾತ್ರ ತಾನೊಬ್ಬ ಸಜ್ಜನನೆಂದು ಫೋಸ್ ನೀಡುತ್ತಾ ಗಾಂಜಾ ಮಾರಾಟದ ಗೂಡ್ಸ್ ಟೆಂಪೋದ ಮುಂಭಾಗದ ಗ್ಲಾಸ್ ನಲ್ಲಿ ಹಣ್ಣು, ತರಕಾರಿ ಎಂದು ಸ್ಟಿಕರ್ ಅಂಟಿಸಿ ಕಾನೂನು ಬಾಹಿರ ಚಟುವಟಿಕೆಗಳನ್ನೇ ಮುಂದುವರಿದುತ್ತಾ ಸಾಗುತ್ತಾ ಬಂದ...
ಪೊಲೀಸ್ ಬಾಷೆಯಲ್ಲಿ ಹೇಳುವುದಾದರೆ, ನಿಶಾಂತ್ ಶೆಟ್ಟಿಯ ಪರಿಚಯ ಬಹುತೇಕ ಪೊಲೀಸ್ ಠಾಣೆಗಳಿಗೆ ಇವೆ.
ಒಂದಲ್ಲ ಒಂದು ರೀತಿಯಲ್ಲಿ ಪೊಲೀಸ್ ಠಾಣೆಯ ಮೆಟ್ಟಲು ಹತ್ತಿದವನು.
ತಿಳಿದೋ, ತಿಳಿಯದೆಯೋ ಮಾಡಿದ ತಪ್ಪುಗಳನ್ನು ತಿದ್ದಿ ನಡೆದು ಅದರ್ಶ ವ್ಯಕ್ತಿಯಾಗಿ ಜೀವನ ಸಾಗಿಸುವುದಕ್ಕೆ ಸಮಾಜವು ಅವಕಾಶಗಳನ್ನು ನೀಡುತ್ತದೆ.
ಆದರೆ ನಿಶಾಂತ್ ಶೆಟ್ಟಿ ಮಾತ್ರ ತಾನೊಬ್ಬ
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದು ಯಾರಿಗೂ ತಿಳಿಯದು ಎಂದು ಭಾವಿಸಿಕೊಂಡಿತಂತೆ. ಆದರೆ ಇಲ್ಲಿ ಮಾತ್ರ ಪೊಲೀಸ್ ಇಲಾಖೆಯು ಕಣ್ಗಾವಲು ಇರಿಸಿಕೊಂಡಿತು. ಪೊಲೀಸ್ ಇಲಾಖೆಯ ಕಾರ್ಯದಕ್ಷತೆಗೆ ನಾಗರಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದು ಯಾರಿಗೂ ತಿಳಿಯದು ಎಂದು ಭಾವಿಸಿಕೊಂಡಿತಂತೆ. ಆದರೆ ಇಲ್ಲಿ ಮಾತ್ರ ಪೊಲೀಸ್ ಇಲಾಖೆಯು ಕಣ್ಗಾವಲು ಇರಿಸಿಕೊಂಡಿತು. ಪೊಲೀಸ್ ಇಲಾಖೆಯ ಕಾರ್ಯದಕ್ಷತೆಗೆ ನಾಗರಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.