ಕಾಸರಗೋಡು: ಅಶಕ್ತರ ಆಶಾಜ್ಯೋತಿಯಾಗಿ ಬೆಳಗುತ್ತಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರ ಬಗೆಗೆ ರವಿ ನಾಯ್ಕಪು ಬರೆದಿದ್ದ ‘ಸ್ನೇಹಗಂಗೆ ‘ ಕೃತಿಯ ಸಂಕ್ಷಿಪ್ತ ರೂಪವು ಇದೀಗ ಮಂಗಳೂರು ವಿಶ್ವವಿದ್ಯಾಲಯದ BCA 4th ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ವಿಷಯವಾಗಿ ಬಂದಿದೆ.
ಬರವಣಿಗೆ, ಸಾಹಿತ್ಯ ಸೇವೆಯಲ್ಲಿ ಮುಂದುವರಿಯುತ್ತಿರುವಂತೆ ಬಂದೊಲಿದ ಮಹಾಭಾಗ್ಯವಿದು. ರವಿ ನಾಯ್ಕಾಪು ಅವರ ಕೃತಿ ಪಠ್ಯ ಪುಸ್ತಕಕ್ಕೆ ಆಯ್ಕೆ ಮಾಡಿರುವ ವಿ. ವಿ ಪಠ್ಯಪುಸ್ತಕ ಆಯ್ಕೆ ಸಮಿತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ .ಅಧ್ಯಕ್ಷರಾಗಿ ರವಿ ನಾಯ್ಕಾಪು ಗುರುತಿಸಿಕೊಂಡಿದ್ದಾರೆ






































