ಸುಹಾಸ್ ಶೆಟ್ಟಿ ಕೊಲೆ ಕೃತ್ಯದ ಹಿಂದೆ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಎಂದು ಆರೋಪಿಸಿದ ಹಿಂದು ಮುಖಂಡರಿಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಮಂಗಳೂರು ಬಜಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಜಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ರಶೀದ್ ಕೂಡ ಪರೋಕ್ಷವಾಗಿ “ಕೈ”ಜೋಡಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ನೇರ ಆರೋಪ ಮಾಡಿತ್ತು. ಇದರ ಹಿನ್ಬಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಡ್ ಕಾನ್ಸ್‌ಟೇಬಲ್ ರಶೀದ್ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಗಳು ಹರಿಹಾಡುತ್ತಿದ್ದು ಈ ಕುರಿತು ಹೆಡ್ ಕಾನ್ಸ್‌ಟೇಬಲ್ ರಶೀದ್ ಅವರು ಬಜಪೆ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನನ್ವಯ ಹಿಂದು ಸಂಘಟನೆಯ ಇಬ್ಬರು ಪ್ರಮುಖರ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದೂ ಮುಖಂಡ ಮೂಡಬಿದಿರೆಯ ಸಮಿತ್ ರಾಜ್ ದರೆಗುಡ್ಡೆ, ಹಿಂದೂ ಜಾಗರಣ ವೇದಿಕೆ ಮುಖಂಡ ಕೆ.ಟಿ.ಉಲ್ಲಾಸ್ ಇವರು ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವಿನಾಕಾರಣ ನನ್ನ ಹೆಸರು ತಂದಿದ್ದಾರೆ. ಯಾವುದೇ ಆಧಾರ ಇಲ್ಲದೆ ನನ್ನ ಹೆಸರು ಹಾಕಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೆಡ್ ಕಾನ್ಸ್‌ಟೇಬಲ್ ರಶೀದ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದು ಸಂಘಟನೆಯ ಮುಖಂಡರ ವಿರುದ್ಧ ಬಜೈ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೆಡ್ ಕಾನ್ಸ್‌ಟೇಬಲ್ ರಶೀದ್ ವಿರುದ್ಧ ಗಂಭೀರ ಆರೋಪ
ಮಂಗಳೂರಿನ ಬಜ್ಜೆ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್ ಈ ಕೃತ್ಯದ ಹಿಂದೆ ಇರುವ ಅನುಮಾನವಿದೆ.
ಸುಹಾಸ್ ಶೆಟ್ಟಿ ಸ್ನೇಹಿತರು ಆ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಕೆಟಿ ಉಲ್ಲಾಸ್ ಆರೋಪಿಸಿದ್ದರು.
ಸುಹಾಸ್ ಶೆಟ್ಟಿಗೆ ರಶೀದ್ ಬಹಳಷ್ಟು ಟಾರ್ಚರ್ ಕೊಡುತ್ತಿದ್ದರು. ಮೂರು ದಿನದ ಹಿಂದಷ್ಟೇ ಶಸ್ತ್ರಾಸ್ತ್ರ ತೆಗೆಸಿದ್ದರು. ಆ ಸುದ್ದಿ ಆರೋಪಿಗಳಿಗೆ ಹೇಗೆ ಗೊತ್ತಾಯಿತು? ಬಲವಾದ ಮಾಹಿತಿಯನ್ನು ರಶೀದ್ ಆರೋಪಿಗಳಿಗೆ ನೀಡಿರಬೇಕು. ರಶೀದ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಕೆಟಿ ಉಲ್ಲಾಸ್ ಆಗ್ರಹಿಸಿದ್ದರು





































