ಸಿಬಿಎಸ್ಇ ಫಲಿತಾಂಶ: ಪ್ರಕೃತಿ ನ್ಯಾಶನಲ್ ಸ್ಕೂಲ್ ಉತ್ತಮ ಸಾಧನೆ
ಕಾಂತಾವರ : ಮೇ 13 ರಂದು ಸಿಬಿಎಸ್ಇ ಫಲಿತಾಂಶ
ಪ್ರಕಟಗೊಂಡಿದ್ದು, ಕಾಂತಾವರದ ಪ್ರಕೃತಿ ನ್ಯಾಷನಲ್ ಸ್ಕೂಲಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 25 ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಣವ್ ಜಿ ಶೆಟ್ಟಿ ಶೇ. 96 ಪಡೆದು ಶಾಲೆಯಲ್ಲಿ ಮೊದಲಿಗನಾಗಿದ್ದಾನೆ. ಕುಮಾರಿ ಅಕ್ಷರ ಭಂಡಾರಿ ಶೇ. 88 ಅಂಕಗಳನ್ನು ಹಾಗೂ ಸಿದ್ರಾ ಅನ್ಸ್ ಶೇ. 80 ಮತ್ತು ಕಿಶನ್ ಪಿ.ಆರ್ ಶೇ. 80ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರುತ್ತಾರೆ.
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಕ್ರಿಸ್ಪಿನ್ ಜೆರಾಲ್ಡ್ ಕ್ರಾಸ್ತ ಸಂಸ್ಥೆಯ ಕಾರ್ಯದರ್ಶಿ ಚಾರ್ಲ್ಸ ಕ್ರಾಸ್ತಾ, ಸಂಸ್ಥೆಯ ಟ್ರಸ್ಟಿಗಳಾದ ಪ್ರೊ. ಪದ್ಮನಾಭ ಗೌಡ, ಪ್ರಾಂಶುಪಾಲೆ ಜಯ ಶೆಣೈ ಹಾಗೂ ಎಲ್ಲಾ ಶಿಕ್ಷಕ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದರು






































