ಸಿಓಡಿ ಪೊಲೀಸರಿಂದ ತನಿಖೆ ಆರಂಭ

Picture of RB NEWS

RB NEWS

Bureau Report

ಅಕ್ಕಿ ಸಾಗಾಟ ನಿರ್ಬಂಧವನ್ನು ತೆಗೆಯಬೇಕೆಂದು ಜನಸಂಘದ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದರು. ರಾಜ್ಯ ಸರಕಾರದ ಸಚಿವ ಕೆ.ಎಚ್. ರಂಗನಾಥ್ ಅವರು ದ.ಕ. ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಜನಸಂಘ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದು ಸಚಿವ ರಂಗನಾಥ್ ಅವರ ತಲೆಯ ಭಾಗಕ್ಕೆ ಕಲ್ಲೇಟು ಬಿದ್ದು ಗಾಯವಾಗಿತ್ತು. ಈ ಸಂಬಂಧವಾಗಿ ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಹಲವರ ಮೇಲೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ  ಕಲ್ಲಡ್ಕ ಇಸ್ಮಾಯಿಲ್, ಸದಾನಂದ ಪೈ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿದಾರರಾಗಿದ್ದರು.

ಈ ಪ್ರಕರಣ ಬಂಟ್ವಾಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಸಂದರ್ಭದಲ್ಲಿ  ಕಲ್ಲಡ್ಕ ಇಸ್ಮಾಯಿಲ್ ಮತ್ತಿತರರು ಪ್ರಾಸಿಕ್ಯೂಷನ್ ಪರವಾಗಿ  ಸಾಕ್ಷಿ ನುಡಿದಿದ್ದರು. ಆದರೆ ಆ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗಿತ್ತು. ಈ ಹಿನ್ನೆಲೆಯಲ್ಲಿ  ಕಲ್ಲಡ್ಕ ಇಸ್ಮಾಯಿಲ್ ಅವರ ಕೊಲೆ ನಡೆದಿರಬಹುದೇ ಎಂಬ ಬಗ್ಗೆ ಸಿಓಡಿ ಪೊಲೀಸರು ತನಿಖೆಯನ್ನು ಕೇಂದ್ರೀಕರಿಸಿದ್ದರು.

ಯಾಕೆಂದರೆ ಇಸ್ಮಾಯಿಲ್ ಅವರು ನಾಪತ್ತೆಯಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿ ತಿಂಗಳು ನಾಲ್ಕು ಕಳೆದರೂ ನಿರ್ದಿಷ್ಟ ಆರೋಪಿಗಳನ್ನು ಗುರುತಿಸಲು ಸಿಓಡಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.

ರಾಜ್ಯದಲ್ಲಿ ಡಿ. ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದರೂ ಇಸ್ಮಾಯಿಲ್ ಅವರ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ಅಂದಿನ ವಿರೋಧ ಪಕ್ಷಗಳ ಶಾಸಕರು ಮತ್ತು ಆಡಳಿತ ಪಕ್ಷದ ಶಾಸಕರೂ ಸರಕಾರದ ಮೇಲೆ ಒತ್ತಡ ತಂದಿದ್ದರು.

ರಾಜ್ಯ ವಿಧಾನಸಭೆಯ ಅಧಿವೇಶನದಲ್ಲೂ ಸಹ ಈ ವಿಚಾರ ಪ್ರಸ್ತಾಪವಾಗಿ ಸರಕಾರಕ್ಕೆ ಮುಜುಗರವಾಗಿತ್ತು. ಸರಕಾರದ ಪರವಾಗಿ ನಿರ್ದಿಷ್ಟ ರೀತಿಯಲ್ಲಿ ಉತ್ತರ ಕೊಡುವಲ್ಲಿ ಅಂದಿನ ಮುಖ್ಯಮಂತ್ರಿ, ಗೃಹ ಸಚಿವರು ವಿಫಲರಾಗಿದ್ದರು. ಇದರಿಂದ ಸರಕಾರದ ಪ್ರಮುಖರು ಸಿಓಡಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಸಿಓಡಿ ತನಿಖಾಧಿಕಾರಿಗಳು ಅತ್ಯಂತ ಜಟಿಲವಾಗಿದ್ದಂತಹ ಮತ್ತು ಸಾರ್ವಜನಿಕವಾಗಿ ಕುತೂಹಲ ಕೆರಳಿಸಿದ್ದಂತಹ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೋ ಫಿಕ್ಸ್ ಮಾಡುವಂತಿರಲಿಲ್ಲ.

ಈ ಪ್ರಕರಣದ ಆರೋಪಿಗಳೂ ಪತ್ತೆಯಾಗಿರಲಿಲ್ಲ. ಆದ್ದರಿಂದ ಈ ಮೂರೂ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ಥಳೀಯ  ಆರೆಸ್ಸೆಸ್ ಕಾರ್ಯಕರ್ತರ ಕೈವಾಡ ಇರಬಹುದೆಂದು ಸಿಓಡಿ ಪೊಲೀಸರು ಶಂಕಿಸಿ ತನಿಖೆಯನ್ನು ಕೇಂದ್ರೀಕರಿಸಿದ್ದರು. ಈ ಹಿಂದೆ ಹಲವಾರು ಸಂಶಯಗಳ ಬಗ್ಗೆ ತನಿಖೆ ನಡೆಸಿದ್ದರೂ ನೈಜ ಆರೋಪಿಗಳ ಗುರುತು ಪತ್ತೆ ಯಾಗದೇ ಇದ್ದುದರಿಂದ ಇಸ್ಮಾಯಿಲ್ ಅವರನ್ನು ಪೊಲೀಸ್ ಜೀಪಿನಂತೆ ಹೋಲುವ ಜೀಪಿನಲ್ಲಿ ಬಂದು ಕರೆದಿದ್ದ ವ್ಯಕ್ತಿಯನ್ನು ಇಸ್ಮಾಯಿಲ್ ಅವರ ಅಂಗಡಿ ಪಕ್ಕದ ಲಾಂಡ್ರಿ ಅಂಗಡಿಯ ನರಸಿಂಹ ಮಡಿವಾಳ ನೋಡಿದ್ದರು.

ಆ ವ್ಯಕ್ತಿಯ ಕಣ್ಣು ಮೆಳ್ಳೆಗಣ್ಣು ಆಗಿತ್ತು ಎಂಬುದನ್ನು ಅವರು ಸಿಓಡಿ  ಪೊಲೀಸರಿಗೆ ತಿಳಿಸಿದ್ದರು. ಈ ಒಂದು ಚಿಕ್ಕ ಸುಳಿವನ್ನು ಆಧರಿಸಿಯೇ ತನಿಖೆ ನಡೆಸಲು ಸಿಓಡಿ  ಪೊಲೀಸರು ನಿರ್ಧರಿಸಿದ್ದರು. ಇಸ್ಮಾಯಿಲ್ ಅವರನ್ನು ಆರೆಸ್ಸೆಸ್ ಹಿನ್ನೆಲೆಯ  ಕಾರ್ಯಕರ್ತರ ತಂಡವೇ ಭಾರೀ ಸಂಚು ರೂಪಿಸಿ ಹತ್ಯೆಗೈದಿದೆ ಎಂಬ ನಿರ್ಧಾರಕ್ಕೆ ಬಂದಂತಹ ಸಿಓಡಿ  ಪೊಲೀಸರು  ಮೆಳ್ಳೆಗಣ್ಣಿನ ಆರೆಸ್ಸೆಸ್ ಕಾರ್ಯಕರ್ತನ ಬೇಟೆಗೆ ಇಳಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top