ಸಮಾಜಕ್ಕೆ ಮಾದರಿ ಎನಿಸಿಕೊಂಡ ದೈವನರ್ತಕ ರವಿ ಪಡ್ಡಂ!

ಉಡುಪಿ : ತಾನು ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಮೊತ್ತವನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕು ಎಂಬ ಇಚ್ಚೆಯನ್ನು ರವಿ ಪಡ್ಡಂ ಹೊಂದಿದ್ದರು.
ದೈವ ನರ್ತಕರಾಗಿರುವ ರವಿ ಪಡ್ಡಮ ಅವರು ಹಿರಿಯಡಕ ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದ ಅಭಿವೃದ್ಧಿಗಾಗಿ ಕೈ ಜೋಡಿಸಿದ್ದಾರೆ.

ಅಲ್ಲಿ ಮೂಲ ಸೌಕರ್ಯವನ್ನು ಸ್ವಂತ ಖರ್ಚು ಭರಿಸಿ ಕಲ್ಪಿಸಿದ್ದಾರೆ. ಅದಕ್ಕಾಗಿ ಅವರು ವಿನಿಯೋಗಿಸಿದ ಮೊತ್ತ ಬರೋಬರಿ ರೂ. 2,30,000 ( ಎರಡು ಲಕ್ಷದ ಮೂವತ್ತು ಸಾವಿರ ರೂಪಾಯಿ). ಆ ಮೂಲಕ ನೂತನ ಶವ ದಹನಿಸುವ ಸಿಲಿಕಾನ್ ಚೇಂಬರ್ ಪರಿಕರವನ್ನು ದಾನವಾಗಿ ನೀಡಿರುತ್ತಾರೆ.

ಇದೇ ಸ್ಮಶಾನದಲ್ಲಿ ಮೂಲ ಸೌಕರ್ಯದ ಕೊರತೆಯ ಕೂಗು ಹಲವು ಸಮಯಗಳಿಂದ ಕೇಳಿಬರುತ್ತಿತ್ತು. ಅದಕ್ಕೆ ಸಮಾಜ ಸೇವಕ ರವಿ ಪಡ್ಡಮ ಸ್ವಂದಿಸಿರುವುದು ಗಮನಾರ್ಹವಾಗಿದೆ. ಆ ಮೂಲಕ ಅವರೊಬ್ಬರು ಸಮಾನಕ್ಕೆ ಮಾದರಿಯಾಗಿದ್ದಾರೆ.



































