ಕರ್ನಾಟಕ ವಿಧಾನಸಬಾಧ್ಯಕ್ಷ ಯು. ಟಿ. ಖಾದರ್ ಅವರು ಆ ಹುದ್ದೆಯಲ್ಲಿ ವಿರಾಜಿಸುವಷ್ಟು ಪ್ರೌಢನಲ್ಲ ಎನ್ನುವುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿದುಕೊಂಡಿದ್ದಾರಾದರೂ ರಾಜಕೀಯ ಜಿದ್ದು ಹಾಗೆ ನೇಮಕ ಮಾಡಿಸಿತು ಅನ್ನೋಣ.
ಆದರೆ, ಸ್ವತಃ ಯು. ಟಿ. ಖಾದರ್ ಅವರು ತಾನು ಇನ್ನೂ ಆ ಆಸನಕ್ಕೆ ಪ್ರೌಢನಲ್ಲ ಎಂಬುದನ್ನು ಪ್ರತಿ ಮಾತಿಗೆ ಮೊದಲು ಯೋಚಿಸಬೇಕು.ಸಾಂವಿಧಾನಿಕ ಗೌರವವಿದೆ,ಇನ್ನೊಂದು ರೀತಿಯಲ್ಲಿ ವಿಧಾನ ಸಭಾ ಕಲಾಪದೊಳಗಿನ ನ್ಯಾಯಾಧೀಶನೇ ಆಗಿರುವುದಾದರೂ ಆ ಪೀಠವೇನೋ ಮೌನ ಹಾಗೂನಿರ್ಲಿಪ್ತವಾಗಿರುತ್ತದೆ ಯಾಕೆಂದರೆ ಕುಳಿತವನು ಸಾವಕಾಶವಾಗಿ,ಸಂವಿಧಾನಬದ್ಧವಾಗಿ ,ಅಂದವಾಗಿ ಮಾತಾಡಲಿ ಎಂದು.
ಯು. ಟಿ. ಖಾದರ್ ಅವರು ಇನ್ನೂ ಕೂಡ ಚೈಲ್ಡಿಶ್ ತರಹ. ಯು. ಟಿ. ಖಾದರ್ ಮತ್ತು ನಳಿನ್ ಕುಮಾರ್ ಕಟೀಲ್ ಅವರಿಬ್ಬರ ರಾಜಕೀಯ ಮರ್ಜಿ ಒಂದೇ ರೀತಿ ಅದೇನೊ ಡಿಟೋ ಅನ್ನುತ್ತಾರೆ ,ಹಾಗೆ! ಮುಖ್ಯವಾದ ಕಾರಣವೆಂದರೆ ತನ್ನ ತಾನು ತಿದ್ದಿಸಿಕೊಳ್ಳುವುದಕ್ಕೆ ಎಂದೇ ಒಬ್ಬ ಆಪ್ತನ ನೇಮಕ ಮಾಡಿಟ್ಟುಕೊಳ್ಳುವುದಿಲ್ಲ.
ಪಿ. ಎ. ಗಳೆಲ್ಲ ವ್ಯವಾಹಾರಿಕವಾಗಿಯೆ (ಜನರಲ್ ಮತ್ತು ಲೋಕಲ್!)ಕೆಲಸ ಮಾಡುವವರು.ಯಾವನೇ ಶಾಸಕ ಅಥವಾ ಮಂತ್ರಿ ತನ್ನ ಚಟುವಟಿಕೆಯ ಕುರಿತಾದ ಪುಟಗಳನ್ನು ದಿನಾ ತೆರೆದು ನೋಡುತ್ತಾನೆ ಎಂದಾದರೆ ಆತನೊಬ್ಬ ಪ್ರಬುದ್ಧತೆಯುಳ್ಳವನು,ಗುಣಮಟ್ಟದ ನಾಯಕನಾಗುವವನು ಎಂದು ಪರಿಗಣಿಸಬಹುದು , ಬಾಕಿ ಎಲ್ಲರೂ ಗೆಲ್ಲಿಸಿಕೊಂಡು ಬಂದವರು ಅಷ್ಟೆ.
ಖಾದರ್ ಮಾತಿನ ಉಚ್ಚಾರವೂ ತುಂಬಾ ಖುಷಿ ಮತ್ತು ಹಾಸ್ಯಾಸ್ಪದವಾಗಿರುತ್ತದೆ.ಖಾದರ್ ಅವರಿಗೆ ತಾನು ಕೂಡಾ ಹಾಸ್ಯಪ್ರಜ್ಞೆಯವನು ಅಂತ ತೋರಿಸಿಕೊಂಡು ಸಭಾಸದನವನ್ನು ಗೆಲ್ಲುವುದಕ್ಕೆ ಅವರ ಮಾತಿನ ಉಚ್ಚಾರಗಳೇ ಸಾಕಾಗುತ್ತದೆ.ಅದನ್ನು ಬಳಸಿಕೊಳ್ಳದೆ ರಮೇಶ್ ಕುಮಾರ್ ಮಾತಾಡುತ್ತಿದ್ದ ಮರ್ಜಿಗೆ ಪ್ರಯತ್ನಿಸದರೆ ಅದು ವ್ಯಕ್ತಿತ್ವವನ್ನೇ ಮಸಿ ನುಂಗಿಕೊಳ್ಳುವ ಅಪಾಯ.ರಮೇಶ್ ಕುಮಾರ್ ಮಾತಾಡುತ್ತಿದ್ದರು ಯಾವಾಗ? ಕಾಲ ಹರಣದ ಚರ್ಚೆಯ ವೇಳೆ ಕತೆ ,ಚರಿತ್ರೆ ಅದನ್ನೆಲ್ಲ ಬಳಸಿ ಕಡೇಗೆ ಶಾಸಕನಿಗೂ ಚೂರು ತಾಗುವಂತೆ ಮಾತಾಡಿ ಎಲ್ಲರ ಗಮನ ಸೆಳೆಯುತ್ತಿದ್ದರು.ಅವರು ಆ ಸೀಟಲ್ಲಿ ಕುಳಿತಾಗ ಏಕವಚನ ಬಳಸಿತ್ತಿರಲಿಲ್ಲ,ಚಡ್ಡಿ ದೋಸ್ತಿಯನ್ನೂ ಬಹುವಚನದಲ್ಲಿ ಸಂಬೋಧಿಸಿತ್ತಿದ್ದರು.
ಕೆಳಗಿರುವ ಮುಖ್ಯಮಂತ್ರಿ ಸಹಿತ ಎಲ್ಲರೂ ಏಕವಚನದಲ್ಲಿ ಮಾತಾಡಿಕೊಂಡು ಕಾಲೆಳೆಯುತ್ತಾರೆ.ಅದು ಮನರಂಜನೆಯೂ ,ಸಿಟ್ಟು ಎರಡೂ ಆಗುತ್ತದೆ.ಆದರೆ ಸಭಾಧ್ಯಕ್ಷನಾಗಿ ತನ್ನ ಮಾತಿನ ಘನತೆಯನ್ನು ಕಾಲಡಿಗೆ ಹಾಕಿಕೊಳ್ಳುವುದು ಅದು ವೈಯಕ್ತಿಕವಾಗಿಯೂ ಅಗೌರವವೇ ಸರಿ.
ನೀವು ಎಲ್ ಎಲ್ ಬಿ ತರಗತಿಗೆ ಹೋದವರು,ಸಂವಿಧಾನ ಗೊತ್ತಿದ್ದವರು.ಆದರೆ ನೀವಿನ್ನೂ ಗೌರವದ ನಡವಳಿಕೆಯನ್ನು ಮೈಗಂಟಿಸಿಕೊಂಡಿಲ್ಲ ,ನಾಲಗೆಯಲ್ಲಿಟ್ಚುಕೊಂಡಿಲ್ಲ.
ನೀವು ಉರ್ದು ಪಾಠ ಓದಿದವರು.ಉರ್ದು ಭಾಷೆಯಲ್ಲಿರುವ ಶಾಹಿರಿಗಳು ಉಳಿದ ಭಾಷೆಯಲ್ಲಿಲ್ಲ.ಅದನ್ನು ನಿತ್ಯ ಓದಿ ನಮನ ಮಾಡಿಕೊಂಡು ಕೆಲವು ಸಂದರ್ಭಗಳಲ್ಲಿ ಸದನದಲ್ಲಿ ಉಚ್ಚರಿಸಿ ಕನ್ನಡ ಅನುವಾದ ಹೇಳುವುದರೊಂದಿಗೆ ಸದನವನ್ನ ನಿಯಂತ್ರಿಸಬೇಕು ಅಥವಾ ಯಾರಿಗಾದರೂ ಅದರ ಮೂಲಕ ಚಾಟಿ ಬೀಸಬೇಕು.
ಇಂಗ್ಲೀಷ್ ಕೊಟೋಶನ್ ಇದೆ,ಭಗವದ್ಗೀತೆಯಿದೆ ಹಾಗೆ ಬಹಳ ಬೇಕಾದ ಪುಸ್ತಕಗಳಿವೆ.ನಿಮ್ಮ ಮಾತುಗಳ ಆಡಿಯೋ ದಾಖಲಾಗುತ್ತದೆ,ಅದೊಂದ ಪುಣ್ಯದ ಅವಕಾಶ.
ಮೊನ್ನೆ ಮೊನ್ನೆ ಮಂಗಳೂರಿನ ಶಾಸಕ ವೇದವ್ಯಾಸ ಕಾಮತರನ್ನೂ ತೀರಾ ತುಚ್ಯವಾಗಿ ನಿಂದಿಸಿದ್ದೀರಿ.ಅದು ಹತ್ತು ರೂಪಾಯಿ ಚಹಾ ಮಾರುವ ಗೂಡಂಗಡಿ ಗಿರಾಕಿಗಳ ಭಾಷೆ. ಚಡ್ಡಿ ದೋಸ್ತಿಗಳೇ ಆಗಿದ್ದರೂ ಆ ಎತ್ತರದ ಆಸನದಲ್ಲಿ ಕುಳಿತು ಮಾತಾಡುವುದು ಶೋಭೆಯಲ್ಲ.
ಹಾಗೆ ಅನೇಕ ಮಂದಿಗೆ ಅನೇಕ ಬಾರಿ ಗುಣುಗಿದ್ದೀರಿ,ತುಳುವಿನಲ್ಲೂ ಶಪಿಸಿದ್ದೀರಿ .ಆದರೂ ಸಹ ನಿಮ್ಮ ಘನತೆ ಮೀರಬಾರದು.ಸದಸ್ಯರು ಕಚ್ಚಾಡುವ ರೀತಿ,ಬಳಸುವ ಭಾಷೆಯ ಕ್ರಮದಲ್ಲಿಯೆ ಸಭಾಧ್ಯಕ್ಷನೂ ಮಾತಾಡುವುದಾದರೆ ಅಲ್ಲಿ ಘನತೆ ಗೌರವದ ವ್ಯತ್ಯಾಸ ಎಲ್ಲಿ ಬಂತು?
ಒಳ್ಳೆಯ ಅವಕಾಶ ಸಿಕ್ಕಿದೆ ಅದನ್ನು ಬಹಳ ಅರ್ಥಪೂರ್ಣವಾಗಿ ಬಳಸಿಕೊಳ್ಳಿ.ಸದನದಿಂದ ಹೊರ ಬಂದವರು ಪುಸ್ತಕ ಓದಿ.
ಲೋಕಾಭಿರಾಮವನ್ನೇ ಮಾತಾಡಿದರೆ ಅದು ಅಭ್ಯಾಸ ಬಲವಾಗಿ ಸದನಕ್ಕೂ ಬರುತ್ತದೆ, ಬರುತ್ತಿದೆ ಕೂಡ.
ದೂರ ಪ್ರಯಾಣದ ವೇಳೆ ಸ್ನೇಹಿತರ ಬದಲಿಗೆ ಪುಸ್ತಕವನ್ನೆ ಎಡ ಬಲದಲ್ಲಿಟ್ಟುಕೊಳ್ಳಿ.
ಕನಿಷ್ಠ ಪಕ್ಷ ಹಳೆಯ ದಾಖಲೆಯನ್ನು ನಿಮ್ಮ ಗ್ರಂಥಾಲಯದಲ್ಲಿ ತಿಳಿದುಕೊಳ್ಳಿ.
ನೀವು ಮಾತಾಡುವ ಉಚ್ಚಾರ ಖುಷಿ ಯಾಗುತ್ತದೆ ಆದರೆ ಕೆಲವೊಮ್ಮೆ ಬಳಸುವ ಪದಗಳು ನೋವು ತರಿಸುತ್ತದೆ. ನೀವು ನಮ್ಮ ಕರಾವಳಿಯ ಹೆಮ್ಮೆ !ಅದಕ್ಕೆ ಧಕ್ಕೆ ಬರಬಾರದು.
ಒಮ್ಮೆ ಇದಿರಾದಾಗ ಪರಿಚಯಿಸಿಕೊಂಡು ಮಾತಾಡಬೇಕು,ನಿಮ್ಮಲ್ಲಿ.
ವಂದನೆಗಳೊಂದಿಗೆ,
-ವಿ. ಕೆ. ವಾಲ್ಪಾಡಿ



































