ಕಾರ್ಕಳ : ಕಥೊಲಿಕ್ ಸಭಾ ಕಣಜಾರು ಹಾಗೂ ನೀತಿ ಮತ್ತು ಶಾಂತಿ ಆಯೊಗ ವತಿಯಿಂದ “ಸಂವಿಧಾನದಾನತ್ಮಾಕ ಮೌಲ್ಯ” ಬಗ್ಗೆ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಕಣಜಾರು ಲೂರ್ದು ಮಾತೆ ದೇವಾಲಯದ ಧರ್ಮಗುರುಗಳು ರೆ.ಪಾ.ಹೆರಾಲ್ಡ್ ಪಿರೆರಾ ವಹಿಸಿದರು.
ಪ್ರಧಾನ ಭಾಷಣ ಉಡುಪಿ ಧರ್ಮಪ್ರಾಂತ್ಯದ ನೀತಿ ಮತ್ತು ಶಾಂತಿ ಆಯೋಗದ ನಿರ್ದೇಶಕ ಲಾರ್ಸನ್ ಡಿಸೊಜಾ ರವರು ದೇಶದ ಸಂವಿಧಾನದ ಬಗ್ಗೆ ಮಾಹಿತಿ ನೀಡಿದರು.
ಕಥೊಲಿಕ ಸಭಾ ಕಣಜಾರು ಅಧ್ಯಕ್ಷ ಅಂತೋನಿ ಮಿರಾಂದ ಸ್ವಾಗತಿಸಿದರು. ಕಾರ್ಯದರ್ಶಿ ಮರಿಯ ಸಲ್ಡಾಹ್ನ ವಂದಿಸಿದರು. ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟಾನಿ ಸಲ್ಡಾಹ್ನ, ಕಾರ್ಯದರ್ಶಿ ಅನಿತಾ ಕ್ವಾಡ್ರಸ್ ಹಾಗೂ ನೀತಿ ಮತ್ತು ಶಾಂತಿ ಆಯೊಗದ ಸಂಚಾಲಕಿ ಪ್ರಮಿಳ ಡಿಸೊಜಾ ಹಾಜರಿದ್ದರು.ಮಮತಾ ಬರ್ಬೊಜಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಕಾರ್ಯಕ್ರಮಕ್ಕೆ 80 ಮಂದಿ ಹಾಜರಿದ್ದರು.






































