ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸವ
ಕಾರ್ಕಳ : ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಪವಾಡವನ್ನು ಸೃಷ್ಟಿಸಿದ ಮಣಿಪಾಲದ ಬ್ರಹ್ಮ ಡಾ. ಟಿ. ಎಂ. ಎ ಪೈ ಅವರ ಕನಸು ಮತ್ತು ದೂರದರ್ಶಿತ್ವದ ಫಲಸ್ವರೂಪವಾಗಿ 1960 ರಲ್ಲಿ ಹುಟ್ಟಿದ ಸಂಸ್ಥೆ ಶ್ರೀ ಭುವನೇಂದ್ರ ಕಾಲೇಜು.
ಜೂನ್ ತಿಂಗಳ 6 ಮತ್ತು 7ನೇ ತಾರೀಕಿನಂದು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ವಾಣಿಜ್ಯ ಮತ್ತು ಕಲಾವಿಭಾಗದ ಪ್ರಾರಂಭೋತ್ಸವವನ್ನು ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಎ ಶಿವಾನಂದ ಪೈ ಹಾಗೂ ಸಿ.ಎ ಕಮಲಾಕ್ಷ ಕಾಮತ್ ಉದ್ಘಾಟಿಸಿದರು.
ನೈತಿಕ ಮೌಲ್ಯವನ್ನು ಆಧಾರವಾಗಿಟ್ಟುಕೊಂಡು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ವಿದ್ಯಾರ್ಥಿ ಜೀವನವನ್ನು ಸಫಲಗೊಳಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಉದ್ಘಾಟನೆಯ ನೆಲೆಯಲ್ಲಿ ಸಿ.ಎ ಶಿವಾನಂದ ಪೈ ಅವರು ಹೇಳಿದರು.
ಮಾನವೀಯತೆ ಸರ್ವ ಶ್ರೇಷ್ಠವಾದದ್ದು ವಿದ್ಯಾರ್ಥಿ ಜೀವನದಿಂದಲೇ ಈ ಸದ್ಗುಣವನ್ನು ಮೇಳಯಿಸಿಕೊಂಡರೆ ಜೀವನ ಸಫಲಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಕಾರ್ಕಳದ ದಾನಿ ನಿವೃತ್ತ ಲೆಕ್ಕ ಪರಿಶೋಧಕ ಸಿ.ಎ ಕಮಲಾಕ್ಷ ಕಾಮತ್ ಅಭಿಪ್ರಾಯಪಟ್ಟರು.
ಕಾಲೇಜಿನ ನೀತಿ ನಿಯಮ ಮತ್ತು ಕಾಲೇಜು ಬೆಳೆದು ಬಂದ ದಾರಿ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕರ್ತವ್ಯ ಹಾಗೂ ನಿಷ್ಠೆಯ ಬಗ್ಗೆ ಸಮಾರಂಭದ ಅತಿಥಿಯಾದ ಡಾ. ಮಂಜುನಾಥ್ ಎ ಕೋಟ್ಯಾನ್ ಇವರು ಹೇಳಿದರು.
ಇನ್ನೋರ್ವ ಅತಿಥಿ ಎಕ್ಸ್ಟ್ರಾ ಮಾರ್ಕ್ಸ್ ನ ಚೀಫ್ ಅಕಾಡೆಮಿಕ್ ಆಫೀಸರ್ ವೆಂಕಟಫಣಿಕಿರಣ್ ಇವರು ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಡುವ ನೀಟ್, ಜೆ.ಇ.ಇ ,ಮತ್ತು ಸಿ.ಇ.ಟಿತರಗತಿಗಳ ಗುಣಾತ್ಮಕ ನಿರ್ವಹಣೆಯ ಬಗ್ಗೆ ವ್ಯಾಖ್ಯಾನಿಸಿದರು.
ಸಭಾ ಕಾರ್ಯಕ್ರಮದ ನಂತರ ವಿಜ್ಞಾನ ವಿಭಾಗದವರಿಗೆ ಎಕ್ಸ್ಟ್ರ ಮಾರ್ಕ್ಸ್ ಸಂಸ್ಥೆಯ ವತಿಯಿಂದ ಡಾ. ನಿರಂಜನ್ ಮತ್ತು ತಂಡ ಹಾಗೂ ವಾಣಿಜ್ಯ ವಿಭಾಗದವರಿಗೆ ಸಿ.ಎ ಯಶಸ್ವಿನಿ ಅಮೀನ್ ಕಟೀಲ್ ಇವರು ಮತ್ತು ಕಲಾ ವಿಭಾಗದವರಿಗೆ ಮರ್ಸಿ ರಾಜ್ಯಶಾಸ್ತ್ರ ಉಪನ್ಯಾಸಕಿ ಇವರು ಓರಿಯೆಂಟಷನ್ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸಿ ಸ್ವಾಗತಿಸಿದರು. ಮಹಿಮಾ ಕಾಮತ್ ಮತ್ತು ಮಾಲತಿ ಪ್ರಭು ನಿರೂಪಿಸಿದರು.
ಮೀನಾಕ್ಷಿ ಮತ್ತು ಸಂಧ್ಯಾ ದೇವಿ ವಂದಿಸಿದರು.


























