ಶಿವಮೊಗ್ಗ : ನಗರದಲ್ಲಿ ರಸ್ಕಿನ್ ಮೌಲ ಸರ್ಕಲ್ ನಲ್ಲಿ ಮಟನ್ ಅಂಗಡಿಯ ಮಾಲಿಕ ರೌಡಿಶೀಟರ್ ಯಾಸಿನ್ ಅನ್ನು ಹೊಡೆಯಲು ಬಂದ ಇಬ್ಬರನ್ನು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಕೊಲೆಯಾದವರನ್ನು ನಗರದ ಕವಿರತ್ನ ಕಾಳಿದಾಸ ರಸ್ತೆಯ ನಿವಾಸಿಗಳಾದ ಶೋಹಿಬ್ ಅಲಿಯಾಸ್ ಸೆಬು ಹಾಗೂ ಗೌಸ್ ಕೊಲೆಗೀಡಾದವರು.
ನಗರದ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಯಾಸಿನ್ ಗ್ಯಾಂಗ್ ಈ ಕೃತ್ಯ ಎಸಗಿದ್ದಾರೆಂದು ಶಂಕೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಅಗಮಿಸಿ ತನಿಖೆ ನಡೆಸಿದ್ದಾರೆ.


ಯಾಸೀನ್ ಖುರೇಷಿ ಗುಂಪು ಹಾಗೂ ಶೋಹಿಬ್ ಗುಂಪುಗಳ ನಡುವೆ ಜಗಳವಾಗಿದೆ. ಈ ಎರಡು ಗುಂಪುಗಳ ನಡುವೆ ಮೊದಲು ಅಣ್ಣ ನಗರದಲ್ಲಿ ಜಗಳ ಪ್ರಾರಂಭವಾಗಿದ್ದು, ಒಂದು ಗುಂಪನ್ನು ಇನ್ನೊಂದು ಗುಂಪು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಲಷ್ಕರ್ ಮೊಹಲ್ಲಾದಲ್ಲಿ ದಾಳಿ ಮಾಡಿದೆ. ಈ ವೇಳೆ ಯಾಸೀನ್ ಖುರೇಷಿ ಹಾಗೂ ಆತನ ಗುಂಪು ಶೋಹಿಬ್ ಹಾಗೂ ಗೌಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.






































