ಶಿಕ್ಷಣ -ಸಂಸ್ಕಾರ ಬದುಕಿನ ಮೂಲ ಮಂತ್ರ :ಕಮಲಾಕ್ಷ ಕಾಮತ್
ಕಾರ್ಕಳ: ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಸಭಾಗ್ರಹದ ಮೇಲ್ಛಾವಣಿ ನಿರ್ಮಾಣ ನೆಲಹಾಸು ಹಾಗೂ ಅಡುಗೆ ಪಾತ್ರೆಗಳನ್ನು ಒದಗಿಸಿದ ನಿವೃತ್ತ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ಅವರಿಗೆ ಜೂ 18 ರಂದು ಅಭಿನಂದನಾ ಸಮಾರಂಭ ಜರಗಿತು.
ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಕಮಲಾಕ್ಷ ಕಾಮತ್. ಜೀವನದಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ. ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಬದುಕಿನ ಮೂಲ ಮಂತ್ರವಾದಾಗ ಯಶಸ್ಸು ಸಾಧಿಸಲು ಸಾಧ್ಯ ಎಂದರು. ಸಮಾರಂಭದಲ್ಲಿ 2023_24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ 12 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ, ವಿಜ್ಞಾನ ಸಂಘ ,ಸಾಹಿತ್ಯ ಸಂಘ ,ಆಂಗ್ಲ ಭಾಷೆ ಸಂಘ ಹಾಗೂ ವಾಣಿಜ್ಯ ಸಂಘಗಳನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಇಡ್ಯ ಜನಾರ್ದನ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು .ಕಾಲೇಜು ಪ್ರಾಂಶುಪಾಲೆ ಅಖಿಲ ಜಿ. ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ನಿತ್ಯಾನಂದ ಪೈ, ಸದಸ್ಯರಾದ ಮೋಹನ್ ಶೆಣೈ, ಗಿರಿಧರ್ ನಾಯಕ್ ಹಾಗೂ ನಾಗೇಶ್ ದೇವಾಡಿಗ ಉಪಸ್ಥಿತರಿದ್ದರು. ಉಪನ್ಯಾಸಕರಾದ ಫ್ಯಾನಿ ಜಾಯ್ಸ್ ಸ್ವಾಗತಿಸಿ ,ಸದಾನಂದ ಕಾರ್ಯಕ್ರಮ ನಿರೂಪಿಸಿದರು. ಶೋಭಕುಮಾರಿ ವಂದಿಸಿದರು.






































