ಶಾಸಕ ಸುನಿಲ್ ಕುಮಾರ್ ಕೆಲಸ ದೇವರು ಮೆಚ್ಚುವಂತದ್ದು: ಡಾ.ಆಳ್ವ

Picture of RB NEWS

RB NEWS

Bureau Report

ಕಾರ್ಕಳದ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ವಿ. ಕುಮಾರ್ ಅವರು ಆಯೋಜಿಸಿರುವ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮವು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದ್ದಾರೆ.

ಕಾರ್ಕಳದಲ್ಲಿ ಆಯೋಜನೆಗೊಂಡಿದ್ದ ಒಂದು ದಿನದ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಕೆಲಸ ಕಾರ್ಯಗಳಲ್ಲಿ ಯಾವುದೇ ರಾಜಕೀಯ ಇಚ್ಛಾಶಕ್ತಿಯಿಲ್ಲದೆ ಸಾರ್ವಜನಿಕ ಸೇವಾ ಭಾವನೆಯೆ ಪ್ರಧಾನವಾಗಿರುವುದು. ತಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ನೇರವಾಗಿ ಸಂಬಂಧ ಇಟ್ಟುಕೊಂಡಿದವನಲ್ಲ.ಆದರೆ ಶಾಸಕ ಸುನಿಲ್ ಕುಮಾರ್ ಮತ್ತು ನನ್ನ ನಡುವಿನ ಆತ್ಮೀಯ ಸಂಬಂಧವು ಅನೇಕ ವರ್ಷಗಳಿಂದ ಅನ್ಯೋನ್ಯವಾಗಿ ಬೆಳೆದು ಬಂದಿರುತ್ತದೆ.
ಸುನಿಲ್ ಕುಮಾರ್ ಅವರು ರಾಜ್ಯ ಸರಕಾರದಲ್ಲಿ ಸಚಿವನಾಗಿದ್ದಾಗ ಮಾಡಿರುವ ಕೆಲವೊಂದು ಅಭೂತಪೂರ್ವ ಕೆಲಸಗಳನ್ನು ಈ ಸಂದರ್ಭದಲ್ಲಿ ಡಾ.ಆಳ್ವ ಸ್ಮರಿಸಿದರು.
ಉದ್ಯೋಗ ದೊರಕಿಸುವ ಇಂಥ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತುಂಬಾ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಉದ್ಯೋಗ ದಕ್ಕಿಸಿಕೊಳ್ಳುವ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಆಳ್ವಾಸ್ ಕ್ಯಾಂಪಸ್ ನಲ್ಲಿ ಪ್ರತಿ ವರ್ಷ ನಡೆಯುವ ಪ್ರಗತಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದಕ್ಕೆ ಎಲ್ಲರಿಗೂ ಅವಕಾಶವಿದೆ ಎಂದಿರುವ ಡಾ.ಆಳ್ವ , ಈ ವಿಕಾಸ ಉದ್ಯೋಗ ಸೇತುವಿನಲ್ಲಿ ಭಾಗವಹಿಸಿದ್ದ ಹಾಗೂ ಉದ್ಯೋಗ ಪತ್ರ ಪಡೆದುಕೊಂಡ ಎಲ್ಲರನ್ನೂ ಅಭಿನಂದಿಸಿದರು.

ಉದ್ಯೋಗಾಕಾಂಕ್ಷಿ ಸಂದರ್ಶಕರ ಸಂಖ್ಯೆ ನಮ್ಮ ನಿಗದಿತ 1200 ಸಂಖ್ಯೆಗಿಂತಲೂ ಜಾಸ್ತಿಯಾಗುತ್ತಿರುವ ಸೂಚನೆ ಗೊತ್ತಾದ ಕೂಡಲೆ 1600 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ನಿಗದಿ ಮಾಡಲಾಯಿತು. ಸಂದರ್ಶನ ವ್ಯವಸ್ಥೆಯಲ್ಲಿ ಅಚ್ಚುಕಟ್ಟುತನ ಹಾಗೂ ಒಂದು ದಿನದ ಅವಧಿಯಲ್ಲಿಯೆ ಕ್ರಮವಾಗಿ ಮುಗಿಸಬೇಕಾಗುವ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಳ್ಳಲಾಯಿತು. ಇವತ್ತು ಆಯ್ಕೆಯಾಗದವರು,ಸಂದರ್ಶನಕ್ಕೆ ಅವಕಾಶ ದೊರಕದವರು ನಿರಾಶರಾಗಬೇಕಾಗಿಲ್ಲ ಮುಂದಿನ ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಇದೇ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.ಇದೊಂದು ನಿರಂತರ ಸೇವೆಯಾಗಲಿರುವುದು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನ್ನಾಡಿದ ವಿಕಾಸ ಉದ್ಯೋಗ ಸೇತುವಿನ ಆಯೋಜಕ ಸುನಿಲ್ ವಿ. ಕುಮಾರ್ ಹೇಳಿದರು.

2015ರಲ್ಲಿ ಆಯೋಜಿಸಿದ್ದ ಇದೇ ರೀತಿಯ ಉದ್ಯೋಗ ಸೇತು ಕಾರ್ಯಕ್ರಮದಲ್ಲಿ ಪ್ರತಿಷ್ಠಿತ 102 ಕಂಪನಿಗಳು ಹಾಗೂ 3000 ಮಂದಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಆವೊತ್ತು ಉದ್ಯೋಗ ದೊರಕಿಸಿಕೊಂಡವರು ಇಂದಿಗೂ ವರ್ಷದಲ್ಲೊಮ್ಮೆ ನನ್ನ ಕಚೇರಿಗೆ ಬಂದು ಭೇಟಿ ಮಾಡಿ ಕೃತಜ್ಞತೆಯನ್ನು ತೋರಿಸಿಕೊಡುತ್ತಿದ್ದಾರೆ. ಇನ್ನು ಕೆಲವರು ಬೆಂಗಳೂರಿನಲ್ಲಿ ಭೇಟಿ ಮಾಡಿತ್ತಿರುತ್ತಾರೆ. ಅದರ ಜೊತೆಗೆ ತಾನು ಹದಿನೇಳು ತಿಂಗಳುಗಳ ಕಡಿಮೆ ಅವಧಿಗೆ ಸಚಿವನಾಗಿದ್ದಾಗ ಸುಮಾರು 3000 ಮಂದಿಗೆ ಉದ್ಯೋಗ ಒದಗಿಸಿಕೊಟ್ಟಿದ್ದೇನೆ. ಯುವಜನಾಂಗಕ್ಕೆ ಭವಿಷ್ಯವನ್ನು ರೂಪಿಸಿಕೊಳ್ಳಲು ತನ್ನದೇ ಆದ ಆಸಕ್ತಿಯಿಂದ ಸಹಾಯ ಮಾಡಿದ್ದೇನೆ. ಇವತ್ತಿನ ಸಂದರ್ಶನದಲ್ಲಿ ಸುಮಾರು 360 ಮಂದಿಗೆ ನೇಮಕಾತಿ ಪತ್ರ ದೊರಕಿದರೆ 240 ಕ್ಕೂ ಹೆಚ್ಚು ಮಂದಿಯ ಹೆಸರು ಶಾರ್ಟ್ ಲಿಸ್ಟಿಗೆ ಸೇರಿಸಿಕೊಳ್ಳಲಾಗಿದೆ. ಅದರ ಬಗ್ಗೆ ಮುಂದಿನ ಮಾತುಕತೆ ವಿವರಗಳನ್ನು ನಮ್ಮ ಕಚೇರಿಯಲ್ಲಿ ನಾಳೆಯಿಂದಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಸಂದರ್ಶನದಲ್ಲಿ ಭಾಗವಹಿಸಿದ್ದ 1600 ಮಂದಿ ಉದ್ಯೋಗಾಕಾಂಕ್ಷಿಗಳಲ್ಲಿ 600ಮಂದಿಗೆ ಉದ್ಯೋಗ ದೊರೆತಿರುವುದು ಸಣ್ಣ ವಿಚಾರವಲ್ಲ.
ನಿಮ್ಮಿಂದಲೇ ಆಯ್ಕೆಯಾದ ಶಾಸಕ ನಿಮ್ಮ ಜೊತೆ ಬೆನ್ನು ತಟ್ಟಿ ನಿಂತಾಗ ನಿಮಗೊಂದು ಯೋಗ್ಯ ಭರವಸೆ ಕೂಡಾ ನಿರ್ಮಾಣವಾಗಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳನ್ನು ಆಹ್ವಾನಿಸಿ ನಿಮಗೆ ಪ್ರತಿಯೊಬ್ಬರಿಗೂ ಉದ್ಯೋಗ ದೊರಕುವಂತೆ ಮಾಡುವ ಅಣ್ಣನಾಗಿ ಭರವೆ ನೀಡುತ್ತಿದ್ದೇನೆ ಎಂದು ಸುನಿಲ್ ವಿ. ಕುಮಾರ್ ತನ್ನ ಆತ್ಮವಿಶ್ವಾಸದ ಮಾತುಗಳನ್ನಾಡಿದರು.

FOS CONN ಕೊಡುಗೆ!

ಫೋಸ್ಕನ್ ಮತ್ತದರ ಸಂಬಂಧಿತ ಕಂಪೆನಿಯಲ್ಲಿ ಉದ್ಯೋಗ ದೊರಕಿಸಿಕೊಂಡ ಯುವತಿಯರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕೊಡುವುದನ್ನು ಪ್ರಕಟಿಸಿದೆ.

ಸಮಾರೋಪ ಸಮಾರಂಭದಲ್ಲಿ ಉದ್ಯೋಗ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ರವೀಂದ್ರ ಮೈೂಲಿ, ನಕ್ರೆ ಆ್ಯಂಟನಿ ಡಿಸೋಜಾ,ಶಶಿಧರ ಕಂಠಬೆಟ್ಟು,ಶಿರ್ಲಾಲು ಶಾಂತಿರಾಜ್ ಜೈನ್, ವಿಜೇಂದ್ರ ಕಿಣಿ,ಬೋಳ ಶ್ರೀನಿವಾಸ ಕಾಮತ್, ಶ್ರೀಮತಿ ವಿನಯ ಬಂಗೇರ ಉಪಸ್ಥಿತರಿದ್ದರು.
ಕರುಣಾಕರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸುಹಾಸ್ ಶೆಟ್ಟಿ ಧನ್ಯವಾದ ಅರ್ಪಿಸಿದರು.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top