ಈ ಮಂತ್ರ ವಿಷ್ಣು ದೇವರಿಗೆ ಸಂಬಂಧಿಸಿದ್ದಾಗಿದೆ . ಧ್ಯಾನವೂ ದೇವರ ವರ್ಣನೆಯಾಗಿದೆ .ನಿತ್ಯವೂ 108
ಬಾರಿ ಶುದ್ಧ ಮನಸ್ಕರಾಗಿ ಹೇಳುವುದರಿಂದ ನಾವು ಮಾಡಿರುವ ಪಾಪಗಳೆಲ್ಲವೂ ಕರ್ಪೂರ ಉರಿದು
ಮಾಯವಾಗುವಂತೆ ಕಳೆದುಹೋಗಲಿದೆ .ನವಗ್ರಹರ ಅನುಗ್ರಹದ ಕೊರತೆ ಬಂದಾಗ ಈ ಮಂತ್ರದ ಧ್ಯಾನ
ಪ್ರಯೋಜನಕಾರಿಯಾಗಿದೆ
ಸುದರ್ಶನ ಮಂತ್ರ
ನಮಗೆ ಯಾರಾದರೂ ಮಾಟ ಕೃತೃಮ ಮಂತ್ರ ಪ್ರಯೋಗ ಮಾಡಿದಾಗ ನಾವು ಬೆಳಿಗ್ಗೆ ಸ್ನಾನ ಮಾಡಿ
ಶುಚಿರ್ಭೂತರಾಗಿ ಮಧು ಮಾಂಸ ವರ್ಜಿತರಾಗಿ 48 ದಿನಗಳ ಕಾಲ ದಿನಕ್ಕೆ 108 ಬಾರಿ ಹೇಳಿದಾಗ ನಾವು
ಎಲ್ಲಾ ತೊಂದರೆಗಳಿಂದ ಮುಕ್ತರಾಗುತ್ತೇವೆ . ಇನ್ನೊಬ್ಬರಿಂದ ಮಾಡಿಸುವುದಕ್ಕಿಂತ ನಾವೇ ಏಕ
ಮನಸ್ಸಿನಿಂದ ಮಾಡುವುದು ಉತ್ತಮವಾಗಿರುತ್ತದೆ.
ಓಂ ಕ್ಲೀಮ್ ಕೃಷ್ಣಾಯ ಗೋವಿಂದಾಯ ಗೋಪೀಜನ ವಲ್ಲಭಾಯ ಪರಾಯ ಪರಮ ಪುರುಷಾಯ
ಪರಮಾತ್ಮನೇ ಪರ ಕರ್ಮ ಮಂತ್ರ ಯಂತ್ರೌಷಧಾಸ್ರ ಶಸ್ರಾಣಿ ಸಂಹರ
ಸಂಹರ ಮೃತ್ಯೋರ್ಮೋಚಯ ಮೋಚಯ ಓಂ ನಮೋ ಭಗವತೇ ಮಹಾಸುದರ್ಶನಾಯ ದೀಪ್ತ್ರೇ
ಜ್ವಾಲಾಪರೀತಾಯ ಸರ್ವದೀಕ್ಷೋಭಣ ಕರಾಯ ಹುಂ ಫಟ್ ಬ್ರಹ್ಮಣೇ ಪರಮ್ ಜ್ಯೋತಿಷೇ ನಮ: I
ಮೃತ್ಯುಂಜಯ ಮಂತ್ರ
ನಮಗೆ ನಮ್ಮ ಜೀವನದಲ್ಲಿ ಬರುವ ಸರ್ವ ರೀತಿಯ ಮೃತ್ಯು ಭಯವನ್ನು ದೂರ ಮಾಡಿಕೊಳ್ಳಲು
ಪ್ರತಿನಿತ್ಯ ಈ ಮಂತ್ರವನ್ನು ಹೇಳಬೇಕು .
ಕಹೋಲ ಋಷಿ : ದೈವೀ ಗಾಯತ್ರೀ ಛಂದ: Iಮೃತ್ಯುಂಜಯ ರುದ್ರೋ ದೇವತಾ I
ಸಾಂ ಹೃದಯಾಯ ನಮ:I ಸೀಮ್ ಶಿರಸೇ ಸ್ವಾಹಾ I ಸೂಮ್ ಶಿಖಾಯೈ ವಷಟ್I
ಸೈಂ ಕವಚಾಯ ಹುಂ Iಸೌಂ ನೇತ್ರತ್ರಯಾಯ ವೌಷಟ್I ಸ : ಅಸ್ರಾಯ ಫಟ್ I
ಧ್ಯಾನಮ್ : ಚಂದ್ರಾರ್ಕಾಗ್ನಿ ವಿಲೋಚನಮ್ ಸ್ಮಿತಮುಖಮ್ ಪದ್ಮದ್ವಯಾಂತಸ್ಥಿತಮ್ I
ಮುದ್ರಾಪಾಶಮೃಗಾಕ್ಷ ಸೂತ್ರವಿಲಾಸತ್ಪಾಣಿಂ ಹಿಮಾಂಶುಪ್ರಭಮ್ I ಕೋಟೀರೇಂದು
ಗಲತ್ಸುಧಾಪ್ಲುತತನುಮ್ ಹಾರಾದಿಭೂಷೋಜ್ಜ್ವಲಮ್ I ಕಾಂತ್ಯಾ ವಿಶ್ವವಿಮೋಹನಮ್ ಪಶುಪತಿಂ
ಮೃತ್ಯುಂಜಯಮ್ ಭಾವಯೇ II
ಮಂತ್ರ: “ಓಂ ಓಂ ಜೂಂ ಸ : ಓಂ I [ ಸ: ಜೂಂ ಓಂ ]ಸಂಕಲ್ಪ ಮಾಡಿಕೊಳ್ಳಬೇಕು .ಓಂ ಓಂ ಜೂಂ ಸ :
………….ನಕ್ಷತ್ರೆ …..ರಾಶೌ ಜಾತಂ/ಜಾತಾಂ……..ನಾಮಕಮ್/ನಾಮಿಕಾಂ ಪಾಲಯ ಪಾಲಯ ಸ :
ಜೂಂ ಓಂ II ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಮ್ ಪುಷ್ಟಿವರ್ಧನಮ್ Iಉರ್ವಾರುಕಮಿವ
ಬಂಧನಾನ್ಮೃತ್ಯೋ ರ್ಮುಕ್ಷೀಯ ಮಾಮೃತಾತ್II.
(ಮುಂದುವರಿಯುವುದು…..)






































