ದಿನಾಂಕ 21.04.2024 ರಿಂದ 27.04.2024 -ಕೆ. ಸುಬ್ರಹ್ಮಣ್ಯ ಆಚಾರ್ಯ
ವಿಶೇಷ ದಿನಗಳು :
21.04.2024 ಶ್ರೀ ನೃಸಿಂಹ ಜಯಂತಿ
23.04.2024….ಕುಜ ಮೀನ ರಾಶಿಗೆ ಪ್ರವೇಶ
24.04.2024 …ಶುಕ್ರ ಮೇಷ ರಾಶಿಗೆ ಪ್ರವೇಶ
ಮೇಷ : ಗುರು ರವಿ ಜನ್ಮ ರಾಶಿಯಲ್ಲಿ ಇರುವುದರಿಂದ ಮತ್ತು ಶುಕ್ರ ರಾಹು ಬುಧ ವ್ಯಯದಲ್ಲಿ
ಇರುವುದರಿಂದ ಕೆಲಸದ ಒತ್ತಡದ ದಿನಗಳು. ನಿಮ್ಮ ತಾಳ್ಮೆಯ ಪರೀಕ್ಷೆಯ ದಿನಗಳು . ಎಷ್ಟೇ ಕೋಪ
ಬಂದರೂ ಮೇ ಒಂದರ ವರೆಗೆ ಕಾಯಲೇ ಬೇಕು . ಉದ್ಯೋಗ ಬಿಡುವ ಯೋಚನೆ ಮಾಡಬೇಡಿರಿ . ಖರ್ಚು
ವೆಚ್ಚಗಳು ಮಿತಿಯನ್ನು ಮೀರಿ ಹೋದಾಗ ಮನಸ್ಸಿಗೆ ಬೇಸರ ಉಂಟಾಗಲಿದೆ . ನೆಮ್ಮದಿಗಾಗಿ ಸಂಗಾತಿಯ
ಸಲಹೆ ಸಹಕಾರ ನಿರೀಕ್ಷೆ ಮಾಡಲಿದ್ದೀರಿ .ನಿಮ್ಮ ಆರೋಗ್ಯಕ್ಕಾಗಿ ಕೊತ್ತಂಬರಿ ,ಜೀರಿಗೆ ಹಾಕಿ ಕುದಿಸಿದ
ನೀರನ್ನು ಪ್ರತಿನಿತವೂ ಎರಡು ಲೀಟರ್ ಕುಡಿಯಿರಿ .ಪಿತ್ತ ,ಉಷ್ಣ ಸಮಸ್ಯೆಗೆ ಇದು ಪರಿಹಾರವಾಗಲಿದೆ .
ಮನೆ ಖರೀದಿಯ ,ರಿಪೇರಿಯ ಬಗ್ಗೆ ಚಿಂತನೆ ನಡೆಯಲಿದೆ .
ವೃಷಭ : ದೈಹಿಕವಾಗಿ ಸದೃಢ ಗೊಳ್ಳಲು ವ್ಯಾಯಾಮವನ್ನು ಆರಂಭಿಸಲಿದ್ದೀರಿ . ಗುರು ಮತ್ತು ರವಿ
ವ್ಯಯದಲ್ಲಿ ಇದ್ದಾರೆ . ನಿಮ್ಮನ್ನು ನೀವು ಎಲ್ಲಾ ರೀತಿಯಿಂದ ರಕ್ಷಿಸಿ ಕೊಳ್ಳಬೇಕಾದ ಸಮಯ .ಎಷ್ಟೇ
ಹಣದ ,ಆದಾಯದ ಹರಿವು ಬಂದರೂ ಸಾಕಾಗದ ಸಮಯವಾಗಿದೆ .ವ್ಯವಹಾರದ ವಿಷಯದಲ್ಲಿ
ಸಹವರ್ತಿಗಳ ಜೊತೆಗೆ ತಾಳ್ಮೆಯೊಂದಿಗೆ ಮುಂದುವರಿಯಿರಿ . ಯಾವುದೇ ಹೊಸ ವ್ಯವಹಾರಕ್ಕೆ ಹಣ
ತೊಡಗಿಸಲು ಸರಿಯಾದ ಸಮಯವಲ್ಲ. ಆಹಾರ ಸೇವನೆಯ ವಿಷಯದಲ್ಲಿ ಬಹಳ ಜಾಗ್ರತೆ ಅಗತ್ಯವಿದೆ .
ಒಳ್ಳೆಯ ಯೋಚನೆಯ ಜೊತೆಗೆ ಒಳ್ಳೆಯ ಯೋಜನೆ ಅಗತ್ಯವಿದೆ . ಮೇ ಒಂದರ ನಂತರ ವ್ಯವಹಾರದಲ್ಲಿ
ಪೂರ್ತಿ ಬದಲಾವಣೆ ಬರಲಿದೆ.
ಮಿಥುನ ಗುರು ರವಿ ಲಾಭ ಕ್ಷೇತ್ರದಲ್ಲಿ ಇರುವ ಜೀವನದಲ್ಲಿ ಬಂದಿರುವ ಅತ್ಯಂತ ಶುಭಕರವಾದ
ದಿನಗಳಾಗಿವೆ . ರಾಹು ಬುಧ ಕರ್ಮ ಕ್ಷೇತ್ರದಲ್ಲಿ ,ಕರ್ಮಾಧಿಪತಿ ಗುರು ಲಾಭ ಕ್ಷೇತ್ರದಲ್ಲಿಶುಕ್ರನ ಜೊತೆಗೆ
ಇರುವುದು ಉದ್ಯೋಗ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳು ಭಡ್ತಿಯೋಗ ಕಂಡು ಬರುತ್ತಿದೆ
.ನವಮದಲ್ಲಿ ಇರುವ ಕುಜ ಮತ್ತು ಶನಿ ಹಿರಿಯರ ಅನಾರೋಗ್ಯ ,ಕಲಹವನ್ನು ಸೂಚಿಸುತ್ತಿದೆ ,ಪಿತ್ರಾರ್ಜಿತ
ಆಸ್ತಿಯ ಬಗ್ಗೆ ಸಹೋದರರಲ್ಲಿ ಕಲಹ ಬರದಂತೆ ಎಚ್ಚರವಹಿಸಿರಿ ಏಪ್ರಿಲ್ 23 ರವರೆಗೆ ಎಚ್ಚರವಿರಲಿ
.ಹೊಸ ಒಡವೆ ಖರೀಧಿ ಮಾಡುವ ಯೋಚನೆ ಇದೆ .ಅಶಕ್ತರಿಗೆ ಬಟ್ಟೆ ದಾನ ಮಾಡಿರಿ .
ಕರ್ಕಾಟಕ :ಅಬ್ಬಬ್ಬಾ ಕುಜ 23 ರಂದು ಶನಿಯನ್ನು ಬಿಟ್ಟು ಮೀನ ರಾಶಿಗೆ ಹೋಗುತ್ತಿದ್ದಾನಲ್ಲಾ
ಶೇಖಡಾ 50 ಅಂಶ ನಿರಾಳತೆ ಬರಲಿದೆ .ಗುರುವಿನ ಅನುಗ್ರಹದ ಪ್ರಭಾವ ಒದಗಲಿದೆ .ರಾಜಕೀಯದ
ವ್ಯಕ್ತಿಗಳು ಮಿಂಚಲಿದ್ದಾರೆ . ಮನಸ್ಸಿಗೆ ಸಂತಸವನ್ನು ಉಂಟುಮಾಡುವ ಬಂಧುವರ್ಗದವರು ನಿಮ್ಮ ಬಳಿ
ಬರಲಿದ್ದಾರೆ ,ಹೊಸ ವ್ಯವಹಾರಕ್ಕೆ ಹಣ ತೊಡಗಿಸುವ ಧೈರ್ಯ ಬೇಡ .ಸಾಲಮಾಡ ಬೇಡಿರಿ . ಸದಾ ಕಾಲ ನೆನಪಿನಲ್ಲಿ ಉಳಿಯುವ ಕೆಲಸ ನಿಮ್ಮಿಂದ ನಡೆಯಲಿದೆ .ಸತಿ-ಪತಿ ಸಹನೆ ,ತಾಳ್ಮೆಯಿಂದ ಮುನ್ನೆಡಿಯಿರಿ .
ವಾಹನ ಖರೀದಿಗೆ ಒಳ್ಳೆಯ ಸಮಯವಲ್ಲ. ಮನುಷ್ಯನಿಗೆ ವಯಕ್ತಿಕ ಮಾನ ಮರ್ಯಾದೆ ಮುಖ್ಯ . ನೀಚ
ವ್ಯಕ್ತಿಗಳ ಸಹವಾಸ ಮಾಡಿ ಮಾನವನ್ನು ಕಳೆದುಕೊಂಡು ವಿಮಾನದಲ್ಲಿ ಹಾರಿದರೂ ಪ್ರಯೋಜನವೇನು ?
ಸಿಂಹ : ಭಾಗ್ಯದಲ್ಲಿ ರವಿ ಮತ್ತು ಗುರು ಇರುವ ಅತ್ಯಂತ ಶುಭದಾಯಕವಾದ ಇನ್ನೂ ಕೆಲವೇ ಕೆಲವು
ದಿನಗಳು .ಅಂದರೆ ಮೇ ಒಂದರವರೆಗೆ ಗುರು ಭಾಗ್ಯದಲ್ಲಿ ಇದ್ದು ನಂತರದಲ್ಲಿ ದಶಮಕ್ಕೆ ಬರುತ್ತಾನೆ .
ಸಪ್ತಮದಲ್ಲಿ ಕುಜ ಮತ್ತು ಶನಿ ಇದ್ದು ಪತಿ/ಪತ್ನಿ ಯೊಂದಿಗೆ ಭಿನ್ನಾಭಿಪ್ರಾಯ ಬರಲಿದೆ .ಅತಿಯಾದ ಆತ್ಮ
ವಿಶ್ವಾಸ ಒಳ್ಳೆಯದಲ್ಲ. ಹಣದ ಕೊರತೆಯಿಂದಾಗಿ ಎಷ್ಟು ದುಡಿದರೂ ಸಾಕಾಗದ ಸಮಯವಾಗಿದೆ
.ಆರೋಗ್ಯದ ಬಗ್ಗೆ ಗಮನವಿರಲಿ .ಸಂಬಂಧಿಕರಿಂದ ವಿಶೇಷ ಉಡುಗೊರೆ ಸಿಗುವ ಕಾಲವಾಗಿದೆ
.ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದ ಬಗ್ಗೆ ಯೋಚಿಸುವ ಸಮಯ .ಸರಿಯಾದ ವ್ಯಕ್ತಿಯಲ್ಲಿ
ಮಾಹಿತಿಯನ್ನು ಪಡೆದು ಮುಂದುವರಿಯಿರಿ.
ಕನ್ಯಾ : ಒಟ್ಟು ಪರಿಸ್ಥಿತಿಯ ಒತ್ತಡದಿಂದ ಉದ್ಯೋಗವನ್ನು ಬದಲಾಯಿಸುವ ಸನ್ನಿವೇಶ ಒದಗಿ ಬರಲಿದೆ .
ಗುರು ಮತ್ತು ರವಿ ಅಷ್ಟಮದಲ್ಲಿ ಇದ್ದಾರೆ . ಮೃತ್ಯುಂಜಯ ಜಪ ಸದಾ ನಿಮ್ಮ ನಾಲಗೆಯ ತುದಿಯಲ್ಲಿ
ನೆಲೆಸಿರಲಿ . ಮೇ ಒಂದರ ವರೆಗೆ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿರಿ.
ನೀವು ಹೋಗಲೇ ಬೇಕಾದ ಪ್ರಮುಖ ಕಾರ್ಯಕ್ರಮವೊಂದಕ್ಕೆ ಹೋಗುವುದಿಲ್ಲ. ಹಣದ ಮೇಲೆಯೇ
ಕೂತಿದ್ದರೂ ಮನಸ್ಸಿಗೆ ನೆಮ್ಮದಿಯಿಲ್ಲ .ದೇಹಕ್ಕೆ ಆರೋಗ್ಯವಿಲ್ಲ.ರಾಜಕೀಯ ವ್ಯಕ್ತಿಗಳು ಮೋಸ
ಹೋಗದಂತೆ ಎಚ್ಚರವಹಿಸಿರಿ . ನಿಮ್ಮ ಸಹೋದರ /ಅವರ ಹೆಂಡತಿಗೆ ಅನಾರೋಗ್ಯವಿರುತ್ತದೆ.
ತುಲಾ : ಗುರು ಮತ್ತು ರವಿ ಸಪ್ತಮದಲ್ಲಿ ಇದ್ದಾರೆ . ಅಪರೂಪಕ್ಕೆ ಒದಗಿ ಬಂದಿರುವ ಅವಕಾಶವನ್ನು
ಸದುಪಯೋಗ ಪಡಿಸಿ ಕೊಳ್ಳಿರಿ . ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಬೇರೆ ಕಡೆಗೆ ಕಳುಹಿಸುವ
ಕಾರ್ಯಕ್ರಮ ನಡೆಯಲಿದೆ . ಮುಂದಿನ ಮೇ ಒಂದರ ನಂತರ 8ನೇ ಮನೆಗೆ ಹೋಗುವ ಗುರುವಿಗೆ
ಈಗದಿಂದಲೇ ಮೃತ್ಯುಂಜಯ ಜಪ ಆರಂಭಿಸಿರಿ . ಇದು ಬ್ಯಾಂಕಿನಲ್ಲಿ ಇಟ್ಟ ಹಣದಂತೆ ಶೇಖರಣೆ
ಆಗುತ್ತಿರುತ್ತದೆ ಹಣಕಾಸಿನ ವಿಷಯದಲ್ಲಿ ದುಡುಕಿನ ನಿರ್ಧಾರ ತೆಗೆದು ಕೊಳ್ಳದಿರಿ .ನಿಮ್ಮ ಆರೋಗ್ಯ
ವಿಮೆಯನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗುತ್ತಿದೆ . ಮಕ್ಕಳ ಬಗ್ಗೆ /ಸಂತಾನದ ಬಗ್ಗೆ ಚಿಂತನೆ/ಚಿಂತೆ
ನಿಮ್ಮಲ್ಲಿ ಇರುತ್ತದೆ .ಪರಿಹಾರವಾಗಿ ಶ್ರೀ ಕೃಷ್ಣ ದೇವರ ಮಂತ್ರ ಹೇಳಬಹುದು .ಹೊಸ ವಾಹನ
ಮನೆಯಂಗಳದಲ್ಲಿ ಬಂದು ನಿಲ್ಲಲಿದೆ.
ವೃಶ್ಚಿಕ : ಎಲ್ಲಾ ಯು ಟ್ಯೂಬ್ ಗಳಲ್ಲಿ ಜ್ಯೋತಿಷ್ಯರ ಆಯ್ಕೆಯ ರಾಶಿ ವೃಶ್ಚಿಕವೇ ಆಗಿರುತ್ತದೆ .
ಅದ್ಯಾಕೋ ಗೊತ್ತಿಲ್ಲ. ರವಿ ಮತ್ತು ಗುರು 6ನೇ ಮನೆಯಲ್ಲಿ ಇದ್ದಾರೆ ,.ರಾಜಕೀಯ ವ್ಯಕ್ತಿಗಳು
ಉನ್ನತವಾದ ವೇದಿಕೆಗಳಲ್ಲಿ ಮಿಂಚಲಿದ್ದಾರೆ. ರವಿಯ ಪ್ರಭಾವ ಎಷ್ಟಿದೆ ಎಂದರೆ ದೇಶದ ಮಟ್ಟದಲ್ಲಿ
ಎಲ್ಲರ ಆಕರ್ಷಣೆಯ ವ್ಯಕ್ತಿ ನೀವಾಗುವಿರಿ . ಕುಜ 23 ರಂದು ಮೀನ ರಾಶಿಗೆ ಹೋಗುವುದರಿಂದ ಅತೀ
ದೊಡ್ಡ ಆತಂಕದಿಂದ ಹೊರ ಬರುವಿರಿ . ಸಾಲ ಮಾಡುವುದು ಬೇಡ ,ತೆಗೆದುಕೊಳ್ಳುವುದು ಬೇಡ
.ಜಾಮೀನು ಸಹಿ ಮಾಡುವುದು ಬೇಡ .ದುಡುಕಿ ಸಿಟ್ಟು ಮಾಡುವುದು ಬೇಡ . ಸಮಾಜದಲ್ಲಿ ಗೌರವ ,ಉದ್ಯೋಗದಲ್ಲಿ ಭಡ್ತಿ ,ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವಿರಿ . ಶನಿ 29.03.2025 ರ ವರೆಗೆ 4 ನೇ
ಮನೆಯಲ್ಲಿ ಇರುತ್ತಾನೆ ನೆನಪಿರಲಿ.
ಧನು : ತೃತೀಯಾದಲ್ಲಿ ಶನಿ ಮತ್ತು ಕುಜನಿದ್ದು ಬರುವ ಆದಾಯವನ್ನು ಹೆಚ್ಚಿಸಲಿದ್ದಾರೆ . ನೀವು
ಮಾಡಬೇಕೆಂದಿರುವ ಕೆಲಸಗಳು ಪೂರ್ಣ ಗೊಳ್ಳಲಿವೆ. ಪಂಚಮದಲ್ಲಿ ಗುರು ಮತ್ತು ರವಿ ಇರುವುದು ನಿಮಗೆ
ಶುಭ ಸೂಚನೆಯಾಗಿದೆ ಮನೆಯಲ್ಲಿ ಕುಟುಂಬದ ಸದಸ್ಯರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ
ನಿಮ್ಮಲ್ಲಿರುವ 6ನೇ ಸೆನ್ಸ್ ವಿಶೇಷವಾಗಿ ಕೆಲಸ ಮಾಡಲಿದೆ .ಆಯಿರೀಕ್ಷಿತವಾಗಿ ಕೆಲವೊಂದು ಅಧಿಕಾರಗಳು
ದೊರೆಯುವ ಸಾಧ್ಯತೆ . ಎಪ್ರಿಲ್ 23 ಕ್ಕೆ ಕುಜ ಮೀನ ರಾಶಿಗೆ ಹೋಗುತ್ತಾನೆ . ಆಗ ಮೀನರಾಶಿಯಲ್ಲಿ
ರಾಹು ಬುಧ ,ಕುಜ ಜೊತೆಯಾಗುತ್ತಾರೆ . ಎಪ್ರಿಲ್ 24 ಕ್ಕೆ ಶುಕ್ರ ಮೇಷ ರಾಶಿಗೆ ಹೋಗುತ್ತಾನೆ
.ಮನೆಯಲ್ಲಿ ಸತಿ ಪತಿಯರ ನಡುವೆ ವೈಮನಸ್ಸು ಬರದಂತೆ ಎಚ್ಚರವಹಿಸಿರಿ.
ಮಕರ : ಸುಖ ಸ್ಥಾನದಲ್ಲಿ ಗುರು ,ರವಿ ಶುಕ್ರ ಇರುವುದು ಮಿಶ್ರ ಫಲವನ್ನು ನೀಡುತ್ತಾರೆ .ರಾಜಕೀಯ
ವ್ಯಕ್ತಿಗಳಿಗೆ ಹಿನ್ನೆಡೆಯನ್ನು ಸೂಚಿಸುತ್ತಿದೆ . ಆದಾಯದ ವಿಷಯದಲ್ಲಿ ತೊಂದರೆ ಇಲ್ಲ . ಆರೋಗ್ಯದ
ಬಗ್ಗೆ ಗಮನ ಬೇಕು . ದ್ವಿತೀಯಾದಲ್ಲಿ ಇರುವ ಕುಜ ಶನಿಯರಲ್ಲಿ ಕುಜ 23 ರಂದು ಮೀನ ರಾಶಿಗೆ
ಹೋಗುವುದು ಶುಭ ಫಲವಾಗಿದೆ . 24 ರಂದು ಶುಕ್ರ ಮೇಷ ರಾಶಿಗೆ ಹೋಗುವುದು ಶುಭ ಫಲವಾಗಿದೆ
ಹಣದ ವಿಷಯದಲ್ಲಿ ಸಾಡೇ ಸಾತ್ ಶನಿ ಎಚ್ಚರದಲ್ಲಿ ಇರುವಂತೆ ಸೂಚನೆ ಕೊಡುತ್ತಿದ್ದಾನೆ . ಮಾತಿನಲ್ಲಿ
ಎಚ್ಚರವಿರಲಿ. ಹೃದಯ ಸಂಬಂಧಿ ಸಮಸ್ಯೆ ಬರದಂತೆ 60+ ಆದವರು ವೈದ್ಯರನ್ನು ಭೇಟಿಯಾಗಿರಿ
ಈಗಾಗಲೇ ಸಮಸ್ಯೆ ಇರುವವರು ಎಚ್ಚರದಿಂದ ಇರಬೇಕು . ಸಕ್ಕರೆ ಕಾಯಿಲೆ ಬಗ್ಗೆ ಪರೀಕ್ಷೆ ಮಾಡಿಸಿರಿ.
ಕುಂಭ :ಹಲವಾರು ಬದಲಾವಣೆಯನ್ನು ಕಾಣಲಿರುವ ವಾರವಿದು .23 ರಂದು ಕುಜ ಜನ್ಮ ರಾಶಿಯನ್ನು
ಬಿಟ್ಟು ದ್ವಿತೀಯಕ್ಕೆ ಪ್ರವೇಶ ಮಾಡುತ್ತಾನೆ 24 ರಂದು ಶುಕ್ರ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ಮೇ
ಒಂದರಂದು ಗುರು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ .ಅನೇಕ ಶುಭ ಬದಲಾವಣೆಗಳನ್ನುನಿರೀಕ್ಷೆ
ಮಾಡಬಹುದು ರವಿ ಈಗಾಗಲೇ ಮೇಷ ರಾಶಿಯಲ್ಲಿ ಇದ್ದು ಶುಭ ಫಲವನ್ನು ಕೊಡುತ್ತಿದ್ದಾನೆ
.ರಾಜಕೀಯದಲ್ಲಿ ಇರುವವರು ಮಿಂಚುವ ಕಾಲವಿದು. ಹಣದ ವಿಷಯದಲ್ಲಿ ಮಾತ್ರ ಎಚ್ಚರವಿರಲಿ .
ಎಲ್ಲರೊಂದಿಗೆ ಸಂತಸವನ್ನು ಹಂಚಿಕೊಳ್ಳುವಿರಿ . ಕಣ್ಣಿನ ದೋಷ ಇರುವವರು ವೈದ್ಯರನ್ನು
ಭೇಟಿಯಾಗಿರಿ.
.
ಮೀನ : ಅನೇಕ ಬದಲಾವಣೆಗಳನ್ನು ಕಾಣಲಿರುವ ವಾರವಿದು .ನಿಮ್ಮ ಜನ್ಮ ರಾಶಿಗೆ ಕುಜ 23 ರಂದು
ಪ್ರವೇಶ ಮಾಡುತ್ತಾನೆ 24 ರಂದು ಶುಕ್ರ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ .ಮೇ ಒಂದರಂದು ಗುರು
ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. .ಒತ್ತಡದ ದಿನಗಳನ್ನು ಕಾಣುವಿರಿ .ಸಾಡೇ ಸಾತ್ ಶನಿಯ ಪ್ರಭಾವ
ಮುಂದುವರಿದಿದೆ .ದಿನ ನಿತ್ಯದ ಕೆಲಸಗಳಲ್ಲಿ ಆತ್ಮೀಯರ ಸಹಕಾರದಲ್ಲಿ ವ್ಯತ್ಯಾಸವನ್ನು ಕಾಣುವಿರಿ
,.ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ .ವರ್ಷವಿಡೀ ಇದು ಅಗತ್ಯವಿದೆ .ಉದ್ಯೋಗದಲ್ಲಿ
ಮೇಲಧಿಕಾರಿಗಳ ಕಿರುಕುಳ ಇರುತ್ತದೆ . ವಾಹನವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ . ಸಹೋದರಿಯ ಕಡೆಯಿಂದ ಮನಸ್ತಾಪ ಬರಲಿದೆ . ಸಾಕು ಪ್ರಾಣಿಗಳಿಂದ ತೊಂದರೆ ಆಗದಂತೆ
ಎಚ್ಚರವಹಿಸಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು . ಜಾತಕವಿಲ್ಲದವರಿಗೆ
ಕವಡೆಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು . ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು.





































