ವಾರ ಭವಿಷ್ಯ 31.03.2024 ರಿಂದ 06.04.2024 ರವರೆಗೆ -ಕೆ.ಸುಬ್ರಹ್ಮಣ್ಯ ಆಚಾರ್ಯ

Picture of RB NEWS

RB NEWS

Bureau Report

ವಾರ ಭವಿಷ್ಯ

31.03.2024 ರಿಂದ 06.04.2024 ರವರೆಗೆ


ಮೇಷ :ಜನ್ಮ ರಾಶಿಯಲ್ಲಿ ಇರುವ ಗುರು ನಿಮ್ಮ ದಿನ ನಿತ್ಯದ ಕೆಲಸ –ವ್ಯವಹಾರಗಳು ಒಳ್ಳೆಯ
ರೀತಿಯಲ್ಲಿ ಸಾಗುವಂತೆ ನೋಡಿಕೊಳ್ಳಲಿದ್ದಾನೆ .ಲಾಭ ಕ್ಷೇತ್ರದಲ್ಲಿ ಇರುವ ಕುಜ ಮತ್ತು ಶನಿ
ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕೊಡಲಿದ್ದಾನೆ .ರವಿ ಶುಕ್ರ ರಾಹು ಬುಧ ವ್ಯಯದಲ್ಲಿ
ಇರುವುದರಿಂದ ಸಂಸಾರದಲ್ಲಿ ಎಲ್ಲವೂ ನೀವೇಣಿಸಿದಂತೆ ನಡೆಯುವುದು ಕೆಲವೊಮ್ಮೆ ಕಷ್ಟವಾಗಲಿದೆ
.ವಿದ್ಯಾರ್ಥಿಗಳು ಶ್ರಮವಹಿಸುವುದು ಅವಶ್ಯವಾಗಿದೆ .ಮಾನಸಿಕ ಒತ್ತಡ ಇರಲಿದೆ .ಯೋಗ ಪ್ರಾಣಾಯಾಮ
,ಧ್ಯಾನವನ್ನು ಪರಿಣತ ಗುರುವಿನ ಮೂಲಕ ಕಲಿಯುವುದು ಅವಶ್ಯವಾಗಿದೆ .


ವೃಷಭ :ಅದೃಷ್ಟದ ದಿನಗಳು ನಿಮ್ಮ ಬಳಿ ಬರಲಿದೆ .ರವಿ,ಶುಕ್ರ ,ರಾಹು,ಬುಧ ಲಾಭ ಕ್ಷೇತ್ರದಲ್ಲಿ
ಇರುವುದು ಉದ್ಯೋಗದಲ್ಲಿ ಉನ್ನತ ಸ್ಥಾನ ಮಾನ ಲಭಿಸುವಂತೆ ಮಾಡಲಿದ್ದಾರೆ .ಕುಟುಂಬದಲ್ಲಿ
ಒಮ್ಮತದ ಕೊರತೆಯ ಕಾರಣದಿಂದ ಆತಂಕದ ವಾತಾವರಣ ಇರುತ್ತದೆ .ಕುಜ ಶನಿ ಕರ್ಮ ಕ್ಷೇತ್ರದಲ್ಲಿ
ಇರುವುದು ನಿಮ್ಮ ವ್ಯವಹಾರದಲ್ಲಿ ಏರಿಳಿತ ಬರಲಿರುವುದನ್ನು ಒತ್ತಡದ ಸೂಚನೆಯನ್ನು ನೀಡುತ್ತಿದ್ದಾರೆ
ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕಂತೆ ಫಲವನ್ನು ಅನುಭವಿಸಲಿದ್ದಾರೆ . ಯಾವುದೇ ವಿಷಯದಲ್ಲಿ ಆತುರದ
ತೀರ್ಮಾನ ಬೇಡ .ದೈವಾನುಗ್ರಹದ ಕೊರತೆ ಇರುವುದರಿಂದರಿಂದ ಕೆಲವೊಮ್ಮೆ ನಿಮ್ಮ ಹತ್ತಿರಕ್ಕೆ ಬಂದ
ಒಳ್ಳಯ ಅವಕಾಶ ತಪ್ಪಿ ಹೋಗಲಿದೆ .


ಮಿಥುನ : ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ ಹೊಸ ಚೈತನ್ಯ ನಿಮ್ಮಲ್ಲಿ ಸದಾ ತುಂಬಿರುತ್ತದೆ ಕರ್ಮ
ಕ್ಷೇತ್ರದಲ್ಲಿ ರವಿ ಬುಧ ಶುಕ್ರ ರಾಹು ಇರುವುದು ಉದ್ಯೋಗದಲ್ಲಿ ಭಡ್ತಿ ವರ್ಗಾವಣೆ ನಿಮಗಾಗಿ ಬರಲಿದೆ
.ಹಣದ ಉಳಿತಾಯ ಮಾಡಲಿದ್ದೀರಿ ಆತ್ಮೀಯರ ಸಹಕಾರ ನಿಮಗೆ ಸಿಗಲಿದೆ .ಸಂಗಾತಿಯ ಹೊಗಳಿಕೆ
,ಪ್ರಶಂಸೆ ದೊರೆಯಲಿದೆ .ಕೆಲವೊಮ್ಮೆ ಏಕಾಂಗಿಯಾಗಿ ಇರಲು ಬಯಸುವಿರಿ ಶನಿ ,ಮತ್ತು ಕುಜ ನಿಮ್ಮ
ಸಹೋದ್ಯೋಗಿಗಳಲ್ಲಿ ನಿಮ್ಮ ಬಗ್ಗೆ ಮತ್ಸರ ಅಸೂಯೆ ಮೂಡಿಸಲಿದೆ..ನಿಮ್ಮ ವ್ಯಕ್ತಿತ್ವ ಎಲ್ಲರ
ಮನಸೆಳೆಯಲಿದೆ . ಕಚೇರಿಯನ್ನು ಮನೆಗೆ ಒಯ್ಯುವ ಕೆಲಸ ಬೇಡ . ಇಲ್ಲವಾದರೆ ಕೇತು ಮನೆಯಲ್ಲಿಯೂ
ಒತ್ತಡವನ್ನು ತರಲಿದ್ದಾನೆ.


ಕರ್ಕಾಟಕ : ಅಷ್ಟಮದಲ್ಲಿ ಇರುವ ಕುಜ ಶನಿ ನೀವು ಮಾಡುವ ಉದ್ಯೋಗ-ವ್ಯವಹಾರಗಳಿಗೂ ಸಂಬಂಧ
ಕೊಡುವುದರಿಂದ ವಿಶ್ರಾಂತಿ ರಹಿತ ದುಡಿತ ಮಾಡಬೇಕಾಗುತ್ತದೆ . ಹಣದ ವ್ಯವಹಾರಗಳಿಂದ ಆದಷ್ಟು
ದೂರವಿರುವುದು ಒಳ್ಳೆಯದು. ಕೈ ಕಾಲುಗಳಲ್ಲಿ ಸೆಳೆತ ನೋವು ಬರಲಿದೆ .ವಿಶ್ರಾಂತಿ ಅಗತ್ಯವಿರುತ್ತದೆ
.ಅಪವಾದ ನಿಮ್ಮ ಮೇಲೆ ಎಳೆದು ಹಾಕಿ ಕೊಳ್ಳಬೇಡಿರಿ . ಪೋಲೀಸು ಕೋರ್ಟ್ ಇದೆಲ್ಲ ನಿಮಗೆ ಬೇಡ
,ನೀಚ ಮಹಿಳೆಯರ ಬಗ್ಗೆ ಎಚ್ಚರವಿರಬೇಕು . ಸ್ವಲ್ಪ ಎಚ್ಚರ ತಪ್ಪಿದರೂ ಸಮಸ್ಯೆ ಆಗಲಿದೆ
.ವಿದ್ಯಾರ್ಥಿಗಳು ಎಚ್ಚರದಲ್ಲಿರಬೇಕು .ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇರುವಂತೆ ಮಾಡುವುದು
ನಿಮ್ಮ ಕೈಯಲ್ಲಿ ಇರುತ್ತದೆ .


ಸಿಂಹ : ಕುಟುಂಬವೆನ್ನುವುದು ಮೇಣದ ಮನೆಯಂತೆ ಆಗಲಿದೆ .ಕುಜ ಶನಿ ಜೊತೆಯಲ್ಲಿ ಇರುವಾಗ ಜಗಳ
ಹೊಡೆದಾಟ ಸದಾ ಇರುತ್ತದೆ . ಬಹಳ ಜಾಗ್ರತೆಯಿಂದ ವ್ಯವಹರಿಸಿರಿ . ಉದ್ಯೋಗದಲ್ಲಿ ವಿಭಿನ್ನವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ ,ವ್ಯಾಪಾರ,ವ್ಯವಹಾರದಲ್ಲಿ ಗೆಲ್ಲುವ ಅವಕಾಶ
ನಿಮ್ಮಲ್ಲಿದೆ .ಮಕ್ಕಳ ಆಗಮನದ ಅವಕಾಶವನ್ನು ತಪ್ಪಿಸಿ ಕೊಳ್ಳಬೇಡಿರಿ . ಕೆಲವೊಂದು ಹೊಸ
ಯೋಜನೆಗಳನ್ನು ರೂಪಿಸುವಿರಿ .ಅಷ್ಟಮದಲ್ಲಿ ರವಿ,ಶುಕ್ರ,ಬುಧ ರಾಹು ಇರುವುದು ಜೀವನದಲ್ಲಿ
ಹಲವಾರು ವಿಷಯಗಳನ್ನು ತಿಳಿದುಕೊಳ್ಳುವಕಾಲವಾಗಲಿದೆ . ತಾಳ್ಮೆ ಸಂಯಮ ,ಅತೀ ಅಗತ್ಯ .


ಕನ್ಯಾ : ಕೇತು ಜನ್ಮ ರಾಶಿಯಲ್ಲಿ,,ಸಪ್ತಮದಲ್ಲಿ ರವಿ ಶುಕ್ರ,ರಾಹು, ಬುಧ ,ಮತ್ತು ಅಷ್ಟಮದಲ್ಲಿ ಗುರು
ಇರುವುದರಿಂದ ಕುಟುಂಬದಲ್ಲಿ ನೆಮ್ಮದಿಯ ಕೊರತೆಯಿಂದ ಮೌನ ಆವರಿಸಿರುತ್ತದೆ . ಎಲ್ಲರಲ್ಲಿಯೂ
ಏಕಾಂಗಿತನ ಮೂಡಲಿದೆ . ಮಾನಸಿಕ ನೆಮ್ಮದಿಗಾಗಿ ಧ್ಯಾನ ಪ್ರಾಣಾಯಾಮ ಯೋಗ ಇವುಗಳನ್ನು
ಅನುಸರಿಸಿರಿ. ಯಾವುದೇ ವ್ಯವಹಾರದಲ್ಲಿ ,ಉದ್ಯೋಗದಲ್ಲಿ ಸ್ಥಿರವಿಲ್ಲದ ಮನಸ್ಸುಅಡ್ಡಗಾಲು ಆಗಲಿದೆ
.ಆರೋಗ್ಯದ ಕಡೆಗೆ ನಿಮ್ಮ ಗಮನ ಅಗತ್ಯವಿದೆ . ಎಷ್ಟು ಹಣವಿದ್ದರೇನು ,ಕೈಗೊಬ್ಬ ಕಾಲಿಗೊಬ್ಬ
ಆಳುಗಳಿದ್ದರೇನು, ನೆಮ್ಮದಿಯಿಲ್ಲದ ಬದುಕಿಗೆ ಇದು ಯಾವುದೂ ಪರಿಹಾರವಾಗದು .ಮೃತ್ಯುಂಜಯ
ಜಪ ಅಗತ್ಯವಾಗಲಿದೆ.


ತುಲಾ :ಗುರುವಿನ ಅನುಗ್ರಹ ಪ್ರಸ್ತುತ ಇರುವುದರಿಂದ ನಿಮ್ಮ ಯಾವುದೇ ವ್ಯವಹಾರದಲ್ಲಿ ಚಿಂತೆ
ಮಾಡುವ ಅಗತ್ಯ ಇರುವುದಿಲ್ಲ.ವ್ಯಾಪಾರ,ವ್ಯವಹಾರದಲ್ಲಿ ಸ್ವಲ್ಪ ಎಚ್ಚರವಹಿಸಿದಲ್ಲಿ ಯಾವುದೇ
ಸಮಸ್ಯೆ ಇರುವುದಿಲ್ಲ. ವಿದ್ಯಾರ್ಥಿಗಳು ಯಶಸ್ವಿಯಾಗುವರು .ಹಣ ಹೂಡಿಕೆಗೆ ಇದು ಸರಿಯಾದ
ಸಮಯವಲ್ಲ. ಕುಟುಂಬದಲ್ಲಿ ಮಂಗಳ ಸಮಾರಂಭಗಳು ನಡೆಯುವ ಸಮಯವಾಗಿದೆ . ಅವಿವಾಹಿತರಿಗೆ
ಮೇ ಒಂದರ ಒಳಗೆ ಮದುವೆಗೆ ಅವಕಾಶವಿದೆ ಅಂದರೆ ಗುರು ಬಲವಿದೆ .ನಂತರ ಗುರು ಅಷ್ಟಮಕ್ಕೆ
ಹೋಗುತ್ತಾನೆ . ಪಾಲುಗಾರಿಕೆ ವ್ಯವಹಾರಕ್ಕೆ ಈಗ ಅವಕಾಶವಿದೆ . ಸಾಲ ಮಾಡಿಕೊಂಡು ಯಾವುದೇ
ವ್ಯವಹಾರ ಬೇಡ .


ವೃಶ್ಚಿಕ : ಸುಖ ಸ್ಥಾನದಲ್ಲಿ ಇರುವ ಕುಜ ಮತ್ತು ಶನಿ ಕುಟುಂಬದಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲದಂತೆ
ಮಾಡಲಿದೆ . “ಫಿಶ್ ಔಟ್ ಆಫ್ ದಿ ವಾಟರ್ “ ನೀರಿನಿಂದ ಹೊರಗೆ ತೆಗೆದ ಮೀನಿನಂತೆ ನಿಮ್ಮ ವ್ಯವಸ್ಥೆ
,ಅವಸ್ಥೆ ಆಗಲಿದೆ. ನವಗ್ರಹರ ಚಮತ್ಕಾರ ಇದು .ಹಣ ಕಾಸಿನ ವಿಚಾರದಲ್ಲಿ ಸಂದಿಗ್ಧತೆಗೆ ,ತಪ್ಪು ಗ್ರಹಿಕೆಗೆ
ಬೀಳುವಿರಿ . ಪರಿಸ್ಥಿತಿಗೆ ತಕ್ಕಂತೆ ವರ್ತಿಸುವ ಚಾಣಕ್ಯರಾಗಬೇಕು ವಿದ್ಯಾರ್ಥಿಗಳು ತುಂಬಾ ಎಚ್ಚರವಹಿಸಿ
ಪರೀಕ್ಷೆಯ ಕಡೆಗೆ ಗಮನವನ್ನು ಕೊಡಬೇಕು . ನಿಮ್ಮ ವ್ಯವಹಾರದಲ್ಲಿ ಬಂಡವಾಳ ಹೂಡುವವರು
ಸಿಗಲಿದ್ದಾರೆ .ಅತಿ ಆಸೆ ಒಳ್ಳೆಯದಲ್ಲ.ಎಲ್ಲರ ಜೊತೆಯಲ್ಲಿ ಹೊಂದಾಣಿಕೆಯಿಂದ ಬಾಳಲು ಪ್ರಯತ್ನಿಸಿರಿ
.ಸಂಗಾತಿಯ ಜೊತೆಯಲ್ಲಿ ವಾದ ವಿವಾದ ಇರುತ್ತದೆ.


ಧನು: ಗುರು ಪಂಚಮದಲ್ಲಿ ಇರುವುದು ದೈವಾನುಗ್ರಹವನ್ನು ಸೂಚಿಸುತ್ತಿದೆ . ಸುಖ ಸ್ಥಾನದಲ್ಲಿ ರವಿ
ಶುಕ್ರ ಬುಧ ರಾಹು ಇರುವುದು ಕುಟುಂಬದ ಹೆಚ್ಚಿನ ಜವಾಬ್ದಾರಿಯಿಂದ ನಿಮ್ಮನ್ನು ದೂರ ಉಳಿಯುವಂತೆ
ಮಾಡಲಿದೆ. ಆತ್ಮೀಯರ ಟೀಕೆಗಳಿಗೆ ಬೇಸರ ಪಡುವಿರಿ .ದೈಹಿಕ ಬಳಲಿಕೆ ನಿಮ್ಮಲ್ಲಿ ಇರುತ್ತದೆ
.ಉದ್ಯೋಗದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳುವಿರಿ .ವ್ಯಾಪಾರ ವ್ಯವಹಾರದಲ್ಲಿಲಾಭ ನಷ್ಟಗಳು ಸಮಾನವಾಗಿರುತ್ತದೆ ,ಕುಜ ಶನಿ ಅತಿಯಾದ ಲಾಭವನ್ನು ಕೊಟ್ಟರೆ ,ರಾಹು ವ್ಯರ್ಥ ನಷ್ಟವನ್ನು ಸೂಚಿಸುತ್ತಿದ್ದಾನೆ .ಅಗತ್ಯಕ್ಕೆ ತಕ್ಕಂತೆ ಹಣ ಸಂಪಾದನೆ ಇರುತ್ತದೆ.


ಮಕರ: ದ್ವಿತೀಯಾದಲ್ಲಿ ಕುಜ ಶನಿ ಇದ್ದು ಸಾಡೇ ಸಾತ್ ಶನಿಯ ಕಾಟ ಆರೋಗ್ಯ ಸಮಸ್ಯೆಯನ್ನು ,ವಾದ
ವಿವಾದವನ್ನು ,ಆರ್ಥಿಕ ಮುಗ್ಗಟ್ಟನ್ನು ಕೊಡಲಿದ್ದಾರೆ .ಮೌನವಹಿಸಿದಷ್ಟೂ ಒಳ್ಳೆಯದು .ಅನುಮಾನದ
ದೃಷ್ಟಿಯಾರಲ್ಲಿಯೂ ಬೇಡ .ವಾಹನ ಕೊಳ್ಳುವ ಯೋಚನೆ ಸಧ್ಯಕ್ಕೆ ಬೇಡ 29.03.2025 ರ ನಂತರ
ಶನಿ ಮುಂದಿನ ಮನೆಗೆ ಹೋದ ಮೇಲೆ ನೋಡೋಣ .ದೀರ್ಘ ಕಾಲದಿಂದ ಇರುವ ಆರೋಗ್ಯದ ಸಮಸ್ಯೆ
ಪರಿವಾಗುತ್ತಾ ಬರಲಿದೆ . ಬರುವ ಆದಾಯದಲ್ಲಿ ಹೆಚ್ಚಳವಾಗಲಿದೆ . ವಿದ್ಯಾರ್ಥಿಗಳಿಗೆ ವಿಶೇಷ
ಅಧ್ಯಯನಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ .ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ
ಅವಶ್ಯಕತೆ ಇದೆ.


ಕುಂಭ: ಜನ್ಮ ರಾಶಿಯಲ್ಲಿ ಕುಜ ಶನಿ ,ದ್ವಿತೀಯಾದಲ್ಲಿ ರವಿ ಶುಕ್ರ ,ಬುಧ ರಾಹು ಇರುವುದು ಕೆಲವೊಮ್ಮೆ
ನಿಮ್ಮ ಸಿಟ್ಟು ನೀವಾಡುವ ಮಾತು ಇಡೀ ಪರಿಸರವನ್ನು ಹಾಳು ಮಾಡಲಿದೆ .ಸಹೋದರ ವರ್ಗ
,ಬಂಧುಗಳು ನೆರೆಕರೆಯವರು ಇವರೊಂದಿಗೆ ಹೊಂದಿಕೊಂಡು ಮುಂದುವರಿಯಿರಿ . ನಾನು ಎಂಬ ಅಹಂನಿಂದ
ಹೊರಗೆ ಬನ್ನಿರಿ . ಉದ್ಯೋಗ ಬದಲಾವಣೆ ಮಾಡುವ ಯೋಜನೆ ಕೈಗೊಳ್ಳುವಿರಿ . ತಂದೆಯೊಂದಿಗಿನ
ಮನಸ್ತಾಪ ಮುಂದುವರಿಸಲು ಹೋಗಬೇಡಿರಿ . ಅಮ್ಮನವರ ಮದ್ಯಸ್ತಿಕೆಯಿಂದ ಇದು ಪರಿಹಾರವಾಗಲಿದೆ .
ನಿಮ್ಮ ಕುಲದೇವರ ದರ್ಶನ ಅಗತ್ಯವಿದೆ. ವಿಶೇಷ ಯೋಚನೆ ಮಾನಸಿಕ ಒತ್ತಡವನ್ನು ತರಲಿದೆ . ಪ್ರತಿನಿತ್ಯ
ವಾಯು ವಿಹಾರವನ್ನು ಇಟ್ಟುಕೊಳ್ಳಿರಿ.


ಮೀನ: ಜನ್ಮ ರಾಶಿಯಲ್ಲಿ ರವಿ,ಬುಧ ಶುಕ್ರ,ರಾಹು ,ವ್ಯಯದಲ್ಲಿ ಕುಜ ಮತ್ತು ಶನಿ ಸಪ್ತಮದಲ್ಲಿ ಇರುವ
ಕೇತು ಇವರೆಲ್ಲರೂ ಒಂದು ಪಕ್ಷವಾದರೆ ,ಗುರು ಒಬ್ಬನೇ ಬೇರೊಂದು ಪಕ್ಷ . ಮನಸ್ಸಿನಲ್ಲಿ ವೈರಾಗ್ಯ
ಭಾವನೆಯನ್ನು ಮೂಡಿಸುವವರು ಇವರು .ಬಂದ ಹಣವೆಲ್ಲಾ ಖರ್ಚು ಆದರೆ ಮುಂದಕ್ಕೆ ಏನು
ಮಾಡುವುದು ಎಂಬ ಚಿಂತೆ ನಿಮ್ಮನ್ನು ಕಾಡಲಿದೆ . ಮಹಿಳೆಯರ ಬಗ್ಗೆ /ಪುರುಷರ ಬಗ್ಗೆ ಎಚ್ಚರವಾಗಿ
ನಡೆದು ಕೊಳ್ಳಿರಿ .ಮಾತು ಹಿತ,ಮಿತವಾಗಿರಲಿ .

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು . ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು . ವಿವಾಹ ಹೊಂದಾಣಿಕೆ /ವಾಸ್ತು ಸಲಹೆ
ತಿಳಿಸಲಾಗುವುದು.

  • ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಕೊಳ್ಳಿರಿ
  • ಮೊಬೈಲ್ ಹೇಳುವ ಮಾತು ಏನೆಂದರೆ “ಒಮ್ಮೆ ತಲೆ ತಗ್ಗಿಸಿ ನನ್ನನ್ನು ನೋಡಿದರೆ ಮತ್ತೆಂದಿಗೂ ತಲೆ
  • ಎತ್ತದಂತೆ ಮಾಡುತ್ತೇನೆ”.


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top