ಮೇಷ: ಗುರು ಜನ್ಮ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು ಮಿಶ್ರ ಫಲವನ್ನು ನೀಡುತ್ತಿದ್ದಾನೆ . ಗುರುವಿನ ಅನುಗ್ರಹಕ್ಕಾಗಿ ವಿಷ್ಣು ಕ್ಷೇತ್ರದಲ್ಲಿ ಯಥಾ ಶಕ್ತಿ ಸೇವೆಯನ್ನು ಕೊಡುತ್ತಾ ವಿಷ್ಣು ಸಹಸ್ರನಾಮ ಪರಾಯಣವನ್ನು ಮಾಡಿರಿ . ವ್ಯಯದಲ್ಲಿ ಬುಧ ,ರಾಹು ,ರವಿ ಇರುವುದನ್ನು ಗಮನಿಸಿರಿ , ಸಂತಾನದ ನಿರೀಕ್ಷೆಯಲ್ಲಿ ಇರುವವರು ಎಚ್ಚರದಲ್ಲಿರಿ .ವ್ಯರ್ಥ ಖರ್ಚು ಬರದಂತೆ ಎಚ್ಚರವಹಿಸಿರಿ ,ಬರುತ್ತಿರುವ ನಿಶ್ಚಿತ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ ಕುಜ ,ಶುಕ್ರ ಶನಿ ಲಾಭ ಕ್ಷೇತ್ರದಲ್ಲಿ ಕೇತು 6 ನೇ ಮನೆಯಲ್ಲಿ ಇದ್ದಾರೆ . ಭೂಮಿಯ ವ್ಯವಹಾರ ಮಾಡುವವರಿಗೆ ಶುಭ ಕಾಲ ವಾಗಿದೆ .ದಾಖಲೆಗಳ ಪರಿಶೀಲನೆ ಅಗತ್ಯವಿದೆ .
ವೃಷಭ : ದೈವ ಬಲ ಕಡಿಮೆಯಿರುವ ಈ ಕಾಲದಲ್ಲಿವಿಷ್ಣು ಸಹಸ್ರನಾಮವನ್ನು ನಿತ್ಯವೂ ಪಾರಾಯಣ ಮಾಡಿರಿ . ಮೊಬೈಲ್ ಚಾರ್ಜ್ ಮಾಡುವ ರೀತಿ ದೇವರ ಅನುಗ್ರಹ ನಿಮಗೆ ಪ್ರಾಪ್ತಿಯಾಗುತ್ತಾ ಇರುತ್ತದೆ . ರವಿ ,ಬುಧ,ರಾಹು ಲಾಭ ಕ್ಷೇತ್ರದಲ್ಲಿ ಇರುವುದರಿಂದ ನೀವು ಮಾಡುತ್ತಿರುವ ಉದ್ಯೋಗ,ವ್ಯವಹಾರಗಳಲ್ಲಿ ಬಹಳಷ್ಟು ಉತ್ತಮ ಬದಲಾವಣೆಯನ್ನು ಕಾಣುವಿರಿ . ಮಕ್ಕಳ ಆರೋಗ್ಯದ ಕಡೆಗೆ ಗಮನವಿರಲಿ .ಕರ್ಮ ಕ್ಷೇತ್ರದಲ್ಲಿ ಕುಜ ಶುಕ್ರ ಶನಿ ಇರುವುದರಿಂದ ತನ್ನವರೊಂದಿಗೆ ಹೊಂದಾಣಿಕೆಯ ಕೊರತೆಯನ್ನು ಕಾಣುವಿರಿ ಒಮ್ಮೆಲೇ ಶ್ರೀಮಂತರಾಗುವ ಕನಸು ಬೇಡ . ತಾಳ್ಮೆ ,ಸಂಯಮ ,ಸರಳತೆ ಇರಲಿ .
ಮಿಥುನ : ಸರ್ವೇಶ್ವರನಾದ ಗುರುವಿನ ಅನುಗ್ರಹ ಪ್ರಸ್ತುತ ಇರುವುದರಿಂದ ,ಕರ್ಮ ಕ್ಷೇತ್ರದಲ್ಲಿ ಬುಧ,ರವಿ,ರಾಹು ಇರುವುದರಿಂದ ನೀವು ಮಾಡುತ್ತಿರುವ ಯಾವುದೇ ಉದ್ಯೋಗ ,ರಾಜಕೀಯ, ವ್ಯವಹಾರದಲ್ಲಿ ಯಶಸ್ಸನ್ನು ಗಳಿಸುವಿರಿ ಕುಜ,ಶುಕ್ರ, ಶನಿ, ಭಾಗ್ಯದಲ್ಲಿ ಇರುವಾಗ ಮಿಶ್ರ ಫಲವನ್ನು ನೀಡುವನು .ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನವನ್ನು ಗಳಿಸುವಿರಿ . ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಹೆಚ್ಚಾಗಲಿದೆ . ಹಣದ ಮುಗ್ಗಟ್ಟು ಸ್ವಲ್ಪ ಮಟ್ಟಿಗೆ ಕಾಡಲಿದೆ . ಮೂಗಿನ ತುದಿಯಲ್ಲಿರುವ ಸಿಟ್ಟು ,ಹಿರಿಯರ ಮೇಲಿನ ಅಸಹನೆ ನಿಮಗೆ ಶುಭವಲ್ಲ. ಅವರಿಗಿರುವ ಅನಾರೋಗ್ಯ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿದೆ .
ಕರ್ಕಾಟಕ : ಭಾಗ್ಯದಲ್ಲಿ ರಾಹು ಬಂದಾಗ “ನವಮೇ ಪಾಪ ಬುದ್ಧಿಸ್ಯಾತ್” ನಿಮ್ಮಲ್ಲಿ ಇದ್ದಕ್ಕಿದ್ದಂತೆ ಧಾರ್ಮಿಕ ಭಾವನೆ ಇಳಿಮುಖವಾಗಲಿದೆ .ಅಷ್ಟಮದಲ್ಲಿ ಶನಿ ,ಶುಕ್ರ, ಶನಿ ಬಂದಾಗ ನಿಮ್ಮ ವಯಸ್ಸಿಗೆ ಅನುಗುಣವಾಗಿಯೇ ಪಾಪ ಕರ್ಮಗಳ ಏರಿಕೆಯನ್ನು ಕಾಣುವಿರಿ . ನೀಚ ಮಹಿಳೆಯರ ಸಹವಾಸ ನಿಮ್ಮನ್ನು ನಿರ್ಗತಿಕರನ್ನಾಗಿ ಮಾಡಬಹುದು ಎಚ್ಚರ . ವಿಷ್ಣುಸಹಸ್ರನಾಮ ,ದುರ್ಗಾ ಪಾರಾಯಣ ಅಗತ್ಯವಾಗಿದೆ . ಮಾಡುತ್ತಿರುವ ಉದ್ಯೋಗವನ್ನು ಬದಲಾಯಿಸುವ ಯೋಚನೆ ಬೇಡ . ಮೇಲಧಿಕಾರಿಗಳ ಕಿರಿಕಿರಿ ಇರುತ್ತದೆ . ವಾಹನ ಸಂಚಾರ ,ಚೂಪಾದ ಆಯುಧ ,ಬೆಂಕಿ ಇವುಗಳಲ್ಲಿ ಎಚ್ಚರವಿರಲಿ ,ದೇವೀ ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ .
ಸಿಂಹ :ಭಾಗ್ಯದಲ್ಲಿ ಗುರು ಇದ್ದಾಗ ಬಹುತೇಕ ಎಲ್ಲಾ ದೋಷಗಳು ದೂರವಾಗಲಿದೆ. ಯಾವುದೇ ಶುಭ ಸಮಾರಂಭಗಳನ್ನು ನಡೆಸಲು ಅನುಕೂಲವಾದ ಸಮಯವಾಗಿದೆ . ನೀವು ನಡೆಸುತ್ತಿರುವ ಉದ್ಯೋಗ ,ವ್ಯವಹಾರಗಳಲ್ಲಿ ಯಶಸ್ವಿಯಾಗುವಿರಿ .ಸಪ್ತಮದಲ್ಲಿ ಕುಜ ,ಶುಕ್ರ,ಶನಿ ಬಂದಿರುವುದು ವಿವಾಹಿತರಿಗೆ ಒಂದುರೀತಿ ಅವಿವಾಹಿತರಿಗೆ ಇನ್ನೊಂದು ರೀತಿಯ ಸಮಸ್ಯೆ ಬರಬಹುದು ಇದಕ್ಕಿರುವ ಪರಿಹಾರವೆಂದರೆ ……ದುರ್ಗಾ ಸಪ್ತಶತಿ ಪಾರಾಯಣವನ್ನು ಮಾಡಿಸುವುದು /ಮಾಡುವುದೇ ಆಗಿದೆ . ಸಂಸಾರವೆಂಬ ಮಹಾ ಸಾಗರದಲ್ಲಿ ಏಕ ಮನಸ್ಸಿನಿಂದ ಈಜ ಬೇಕಾಗಿದೆ .
ಕನ್ಯಾ : ಗೊಂದಲದ ಗೂಡಿನೊಳಗೆ ,ಅಭಿಮನ್ಯು ಚಕ್ರವ್ಯೂಹದಲ್ಲಿ ಇರುವ ರೀತಿಯಲ್ಲಿ ನಿಮ್ಮ ಬಾಳು ಪ್ರಸ್ತುತ ನಡೆಯುತ್ತಿದೆ “ಧೈರ್ಯಮ್ ಸರ್ವತ್ರ ಸಾಧನಮ್ “ದೇವರೂ ಕೈ ಬಿಟ್ಟಾಗ “ಎನ್ನುವಂತೆ ನವಗ್ರಹರೂ ತಮ್ಮ ವಿರುದ್ಧ ನಿಂತಾಗ ನೀವು ನಮ್ಮ ಎಲ್ಲರ ರಕ್ಷಕ ಮಹಾ ವಿಷ್ಣುವಿನ ಪಾರಾಯಣವನ್ನು ನಿರಂತರ ಮಾಡುವುದೇ ಇದಕ್ಕೆ ಪರಿಹಾರವಾಗಿದೆ ಸುಖಾಧಿಪತಿ ,ಸಪ್ತಮಾಧಿಪತಿ ಗುರು ಅಷ್ಟಮದಲ್ಲಿ ,ಕುಜ ,ಶುಕ್ರ, ಶನಿ 6 ನೇ ಮನೆಯಲ್ಲಿ ,ಸಪ್ತಮದಲ್ಲಿ ರವಿ,ಬುಧ ರಾಹು ಇವರೆಲ್ಲರಿಗೆ ಕೇತುವಿನ ದೃಷ್ಟಿ ಇದೆ ಕುಜ ಶುಕ್ರ ಶನಿ ಅಲ್ಪಸ್ವಲ್ಪ ಲಾಭವನ್ನೂತರುವವರಿದ್ದಾರೆ . ರಾಜಕೀಯದಲ್ಲಿ ಇರುವವರಿಗೆ ಟಿಕೆಟ್ ತಪ್ಪುವ ಹಾಗೆ ಆಗಲಿದೆ .
ತುಲಾ : ಮನಸ್ಸಿಗೆ ಬೇಸರವನ್ನು ತರಲಿದ್ದಾನೆ ವ್ಯಯದಲ್ಲಿ ಇರುವ ಕೇತು ,ಗಣಪತಿ ಅಥರ್ವಶೀರ್ಷ ಪಾರಾಯಣ ಮಾಡುತ್ತಾ ಬನ್ನಿರಿ . ಪತ್ನಿ,ಮಕ್ಕಳ ಬಗ್ಗೆಯೂ ನಿಮ್ಮ ಗಮನವಿರಲಿ . ಬಂಡವಾಳ ಹೂಡಿಕೆಗೆ ಒಳ್ಳೆಯ ಸಮಯವಲ್ಲ. ಪಂಚಮದಲ್ಲಿ ಕುಜ ಶನಿ ಶುಕ್ರ ನಿರುವಾಗ ಮಕ್ಕಳಿಗೆ ನೀವು ಮಾತನಾಡುವ ಒಂದೊಂದು ಮಾತು ಕೂಡಾ ಇಷ್ಟವಾಗಲಿಕ್ಕಿಲ್ಲ. ಅವರ ಪ್ರಾಯಕ್ಕೆ ತಕ್ಕಂತೆ ನಿಮ್ಮ ವರ್ತನೆ ಅಗತ್ಯವಿದೆ . ಆರನೆಯ ಮನೆಯಲ್ಲಿರುವ ರವಿ,ಬುಧ,ರಾಹು ನಿಮ್ಮ ಅನೇಕ ಶಾರೀರಿಕ ಅನಾರೋಗ್ಯವನ್ನು ಸುಧಾರಿಸಲಿದ್ದಾನೆ . ನಿಮ್ಮ ಹತ್ತಿರದ ಬಂಧು ಒಬ್ಬರು ಸಹಾಯ ಮಾಡಲಿದ್ದಾರೆ . ದೇವರ ಅನುಗ್ರಹ ಮೇ ಒಂದರ ವರೆಗೆ ಸಿಗಲಿದೆ ನಂತರ ಗುರು ಅಷ್ಟಮಕ್ಕೆ ಬರಲಿದ್ದಾನೆ ಮೃತ್ಯುಂಜಯ ಜಪ ದಿನಕ್ಕೆ 1008 ಬಾರಿ ಹೇಳಲು ಆರಂಭಿಸಿರಿ.
ವೃಶ್ಚಿಕ : ನಿಮ್ಮ ರಾಜಕೀಯ ಜೀವನದಲ್ಲಿ ಸುಧಾರಣೆ ಕಂಡು ಬರುತ್ತಿದೆ .ರಾಹು ಬುಧ ಯೋಗ ಪಂಚಮದಲ್ಲಿ ಇರುವುದು ಆದರೂ ರವಿ ಬುಧ ರಾಹು ಪಂಚಮದಲ್ಲಿರುವುದರಿಂದ ಮನಸ್ಸಿಗೆ ಏನೋ ಕಿರಿಕಿರಿ ಉಂಟಾಗಲಿದೆ .ಮಕ್ಕಳ ವಿಷಯದಲ್ಲಿ ಸಣ್ಣ ಸಮಸ್ಯೆಯೊಂದು ಬಂದು ಹೋಗಲಿದೆ .ರುದ್ರ ದೇವರ ಸ್ಮರಣೆ ಅಗತ್ಯವಿದೆ . ಕುಜ ಶುಕ್ರ ಶನಿ ಸುಖ ಸ್ಥಾನದಲ್ಲಿ ಇರುವುದು ಆರೋಗ್ಯ ದ ವಿಷಯದಲ್ಲಿ , ಮಾತಿನ ಶೈಲಿಯಲ್ಲಿ ,ಮನಸ್ಸಿನ ಚಂಚಲತೆಯ ವಿಷಯದಲ್ಲಿ ,ನೂತನ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡುವ ವಿಷಯದಲ್ಲಿ ,ಭೂಮಿಯ ವ್ಯವಹಾರದಲ್ಲಿ ಬಹಳ ಎಚ್ಚರ ವಹಿಸಬೇಕು ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರಿಸುತ್ತಾ ಇರಬೇಕು ಮೃತ್ಯುಂಜಯ ಜಪ ನಿತ್ಯವೂ ನಿಮ್ಮ ಅನುಷ್ಟಾನ ದಲ್ಲಿರಬೇಕು .
ಧನು : ಸುಖ ಸ್ಥಾನದ ರವಿ,ಬುಧ ,ರಾಹು ನಿಮ್ಮ ಆರೋಗ್ಯದ ಬಗ್ಗೆ ,ಮನಸ್ಸಿನ ನೆಮ್ಮದಿಯ ಬಗ್ಗೆ ,ಪ್ರಾಣಿಗಳ ಬಗ್ಗೆ ,ವಿಷ ಜಂತುಗಳ ಬಗ್ಗೆ ಎಚ್ಚರವಾಹಿಸುವಂತೆ ತಿಳಿಸುತ್ತಿದ್ದಾರೆ ,ಪಂಚಮದ ಗುರು ಪೂರ್ಣ ದೈವಾನುಗ್ರಹವನ್ನು ನೀಡುತ್ತಿದ್ದಾನೆ ಮಕ್ಕಳಿಂದ ,ಮರಿಮಕ್ಕಳಿಂದ [ನಿಮ್ಮ ಪ್ರಾಯಕ್ಕೆ ತಕ್ಕಂತೆ ]ಸಂತೋಷ ಪಡುವ ಕಾಲವಾಗಿದೆ . ಹಣದ ಆಗಮನ ಬಹಳ ಉತ್ತಮವಾದ ರೀತಿಯಲ್ಲಿ ಹಲವಾರು ರೀತಿಯಿಂದ ಬರಲಿದೆ .ಭೂಮಿಯ ವ್ಯವಹಾರ ಮಾಡುವವರು ಉತ್ತಮ ಲಾಭ ಗಳಿಸಲಿದ್ದಾರೆ. ಮಾತನಾಡುವಾಗ ಸಂತೋಷದಿಂದ ವ್ಯವಹಾರ ಮಾಡಿರಿ . ಉದ್ಯೋಗ ಪ್ರಾಪ್ತಿ ಯೋಗವಿದೆ . ಉದ್ಯೋಗದ ನಿರೀಕ್ಷೆಯಲ್ಲಿ ಇರುವವರು ಗಣಪತಿಗೆ ಪ್ರಾರ್ಥನೆ ಸಲ್ಲಿಸುವುದು ಒಳ್ಳೆಯದು .
ಮಕರ : ಸಾಡೇ ಸಾತ್ ಶನಿಯ ಕೊನೆಯ ಹಂತದಲ್ಲಿ ಇರುವ ಸಮಯ .ಆ ಶನಿಯ ಜೊತೆಗೆ ಕುಜ ಮತ್ತು ಶುಕ್ರ ಸೇರಿಕೊಂಡಿರುವುದು ಗಾಯದ ಮೇಲೆ ಮೆಣಸಿನ ಹುಡಿ ಹಾಕಿದಂತೆ ಆಗಲಿದೆ . ಈಸ ಬೇಕು,ಇದ್ದು ಜೈಸಬೇಕು ಎಂಬ ಮಾತಿನಂತೆ ಲಕ್ಷ್ಮೀ ನರಸಿಂಹನ ಪಾರಾಯಣ [ಉಗ್ರಮ್ ವೀರಮ್ ……. ] ಪ್ರತಿನಿತ್ಯ 1008 ಬಾರಿ ಪಾರಾಯಣ ಮಾಡಿರಿ . ನೀವು ಮಾಡುವ ಯಾವುದೇ ವ್ಯವಹಾರ ಉದ್ಯೋಗದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಅತೀ ಅವಶ್ಯಕ . [ಉಡುಪಿ ಪ್ರಿಂಟ್ ಪುಸ್ತಕ ಸಿಗುತ್ತದೆ . ]ರಾಜಕೀಯದಲ್ಲಿ ಇರುವವರಿಗೆ ಉತ್ತಮ ಭವಿಷ್ಯವಿದೆ . ಉತ್ತಮ ಸ್ಥಾನ ಮಾನ ಲಭಿಸಲಿದೆ . ವ್ಯರ್ಥ ಖರ್ಚುಗಳು ಬರಲಿರುವುದರಿಂದ ಮುಂಗಡ ಪಾವತಿ ಎಲ್ಲಿಯೂ ಬೇಡ .
ಕುಂಭ :ಜನ್ಮದಲ್ಲಿ ಕುಜ ಶುಕ್ರ, ಶನಿ ಇರುವಾಗ ಸಹೋದರ ವರ್ಗ ,ಮನೆಯ ಸದಸ್ಯರು ಇವರೊಂದಿಗೆ ಮತ್ತು ವಯಕ್ತಿಕವಾಗಿ ತುಂಬಾ ಎಚ್ಚರಿಕೆ ವಹಿಸಬೇಕು . ತಾಳ್ಮೆ ,ಸಹನೆ , ಕಳೆದು ಕೊಳ್ಳಬಾರದು. ರಾಜಕೀಯದಲ್ಲಿರುವವರು ಮೌನವಾಗಿ ಇರುವುದು ಒಳ್ಳೆಯದು . ಹಣ ಕಳೆದು ಕೊಳ್ಳುವ ಅವಕಾಶಗಳೇ ಅಧಿಕವಾಗಿ ಕಂಡು ಬರುತ್ತಿದೆ . ನಿಮ್ಮೊಂದಿಗೆ ಯಾರೂ ಸಹಕಾರ ಮಾಡದಿರುವ ಕಾರಣ ಜೀವನದಲ್ಲಿ ವೈರಾಗ್ಯ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ವಿರಸ ಬರದಂತೆ ಎಚ್ಚರದಿಂದ ಇದ್ದಷ್ಟು ಒಳ್ಳೆಯದು . ಭೂಮಿಯ ವಿಷಯದಲ್ಲಿ ಕಲಹ ಬಾರದಂತೆ ಎಚ್ಚರ ವಹಿಸಿರಿ . ಪ್ರತಿನಿತ್ಯ ನಿಮ್ಮ ಪರವಾಗಿ ರುದ್ರ ಪಾರಾಯಣ ಆಗುವಂತೆ ಮಾಡಿದರೆ ಒಳ್ಳೆಯದು .
ಮೀನ : ಜನ್ಮದಲ್ಲಿ ರವಿ ಬುಧ ರಾಹು ಬಂದಿರುವುದರಿಂದ ,ಆತ್ಮಕಾರಕ ರವಿ ಈ ಕಾಲದಲ್ಲಿ ದೇಹಾರೋಗ್ಯಕ್ಕೆ ಕಿಂಚಿತ್ ತೊಂದರೆಗಳನ್ನು ಕೊಡಬಹುದು.ಆಹಾರದ ಬಗ್ಗೆ ನಿಯಂತ್ರಣ ಅಗತ್ಯವಿದೆ .ಮನಸ್ಸಿಗೆ ನೆಮ್ಮದಿಯ ಕೊರತೆ ಇರುತ್ತದೆ .ದ್ವಿತೀಯಾಧಿಪತಿ ಕುಜ ವ್ಯಯದಲ್ಲಿ ,ಶುಕ್ರ ಮತ್ತು ಶನಿಯೊಂದಿಗೆ ಇರುವುದರಿಂದ ಬಂದ ಹಣ ವ್ಯರ್ಥ ಖರ್ಚು ಆಗುವ ಸಾಧ್ಯತೆ ಕಂಡುಬರುತ್ತಿದೆ . ಸಾಡೇ ಸಾತ್ ಶನಿಯ ಕಾಟದಿಂದಾಗಿ ಕುಟುಂಬದೊಳಗೆ ವೈಮನಸ್ಸು ಬರುವ ಸಾಧ್ಯತೆ ಇದೆ ,ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ನಿಮ್ಮ ವಯಸ್ಸು 60 ದಾಟಿದ್ದರೆ ನರ ಎಲುಬು ನೋವು ಬರುವ ಸಾಧ್ಯತೆ ಇದೆ . ಎಚ್ಚರ ಇರಲಿ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು . ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು ಮಾಡಿ ತಿಳಿಸಲಾಗುವುದು






































